ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಓಮಿಕ್ರಾನ್‌ ತಗುಲಿದರೂ ಆಸ್ಪತ್ರೆಗೆ ದಾಖಲಾಗುವುದನ್ನು ಲಸಿಕೆಗಳು ತಪ್ಪಿಸಲಿವೆ :ಇಎಂಎ

|
Google Oneindia Kannada News

ಲಂಡನ್, ಜನವರಿ 12: ಓಮಿಕ್ರಾನ್‌ನ ತೀವ್ರತೆಯಿಂದಾಗಿ ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣವನ್ನು ಕೊರೊನಾ ಲಸಿಕೆಯು ತಗ್ಗಿಸಲಿದೆ ಎಂದು ಯುರೋಪಿನ ಔಷಧ ಸಂಸ್ಥೆ(ಇಎಂಎ) ಹೇಳಿದೆ.

ಇತ್ತೀಚಿನ ಡೇಟಾ ಪ್ರಕಾರ, ಬೂಸ್ಟರ್ ಡೋಸ್ ಪಡೆದಿರುವ ಜನರು ತಮ್ಮ ಪ್ರಾಥಮಿಕ ಡೋಸ್ ಕೋವಿಡ್ ಲಸಿಕೆ ಪಡೆದವರಿಗಿಂತ ಉತ್ತಮವಾಗಿ ರಕ್ಷಣೆ ಪಡೆದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಓಮಿಕ್ರಾನ್ ತೀವ್ರತೆ ಕಡಿಮೆ ಇದ್ದರೂ, ಅಪಾಯಕಾರಿ ಹೇಗೆ?ಓಮಿಕ್ರಾನ್ ತೀವ್ರತೆ ಕಡಿಮೆ ಇದ್ದರೂ, ಅಪಾಯಕಾರಿ ಹೇಗೆ?

ಓಮಿಕ್ರಾನ್ ಬೇರೆ ರೂಪಾಂತರಿಗಳಿಗಿಂತ ಹೆಚ್ಚು ಸಾಂಕ್ರಾಮಿಕವಾಗಿ ಕಾಣಿಸಿಕೊಂಡರೂ ಕೂ ಈ ಸೋಂಕು ಮೊದಲು ಕಂಡು ಬಂದ ದಕ್ಷಿಣ ಆಫ್ರಿಕಾ, ಬ್ರಿಟನ್ ಹಾಗೂ ಕೆಲವು ಯುರೋಪ್ ದೇಶಗಳಲ್ಲಿ ನಡೆಸಿದ ಅಧ್ಯಯನದ ಪ್ರಕಾರ, ಓಮಿಕ್ರಾನ್ ಸೋಂಕಿನ ನಂತರ ಆಸ್ಪತ್ರೆಗೆ ದಾಖಲಾಗಿರುವವರ ಪ್ರಮಾಣ ಕಡಿಮೆ ಇದೆ ಎನ್ನುವುದು ತಿಳಿದುಬಂದಿದೆ.

Vaccines Effective Against Severe Disease, Hospitalisation By Omicron: EMA

ಈ ಅಧ್ಯಯನದ ಪ್ರಕಾರ, ಕೊರೊನಾ ಮೂರನೇ ಅಲೆಯಲ್ಲಿ ಅಪಾಯದ ಅರ್ಧದಷ್ಟು ಪಾಲು ಡೆಲ್ಟಾದ್ದೇ ಆಗಿರಲಿದೆ ಎಂದು ಅಂದಾಜಿಸಲಾಗಿದೆ. ಆದರೆ, ರೋಗ ಲಕ್ಷಣ ಕಂಡು ಬರುವ ಇತರೆ ರೂಪಾಂತರಿಗಳಿಗೆ ಹೋಲಿಸಿದರೆ ಲಸಿಕೆ ಪರಿಣಾಮಕಾರಿತ್ವವು ಓಮಿಕ್ರಾನ್ ಸೋಂಕಿತರಲ್ಲಿ ಕಡಿಮೆಯಾಗಿದೆ ಎಂದು ಇತ್ತೀಚೆಗೆ ಪ್ರಕಟವಾದ ಅಧ್ಯಯನಗಳ ಫಲಿತಾಂಶವನ್ನು ಇದು ಉಲ್ಲೇಖಿಸಿದೆ. ಹಾಗಾಗಿ, ಲಸಿಕೆ ಬಳಿಕವೂ ಜನರು ಓಮಿಕ್ರಾನ್ ಸೋಂಕಿಗೆ ಒಳಗಾಗುವ ಸಾಧ್ಯತೆ ಇದೆ.

ಲಸಿಕೆಗಳ ಪರಿಣಾಮಕಾರಿತ್ವವನ್ನು ಏಜೆನ್ಸಿಯು ಮೇಲ್ವಿಚಾರಣೆ ಮಾಡುವುದನ್ನು ಮುಂದುವರೆಸಿದರೆ ಮತ್ತು ಈ ಮೌಲ್ಯಮಾಪನ ಫಲಿತಾಂಶವು ಯುರೋಪಿನ ಸದಸ್ಯ ರಾಷ್ಟ್ರಗಳ ಭವಿಷ್ಯದ ಲಸಿಕೆಗಳ ಅಭಿಯಾನದ ಮೇಲೆ ಪರಿಣಾಮ ಬೀರಬಹುದು ಎಂದು ಇಎಂಎಯ ಲಸಿಕೆಗಳ ಕಾರ್ಯತಂತ್ರದ ಮುಖ್ಯಸ್ಥ ಮಾರ್ಕೊ ಕ್ಯಾವಲೆರಿ ತಿಳಿಸಿದ್ದಾರೆ.

ಓಮಿಕ್ರಾನ್ ರೂಪಾಂತರಕ್ಕೆ ಸಂಬಂಧಿಸಿರುವ ತೀವ್ರತರವಾದ ಕಾಯಿಲೆ ಮತ್ತು ಆಸ್ಪತ್ರೆಗೆ ಸೇರಿಸುವಿಕೆಯ ವಿರುದ್ಧ ಲಸಿಕೆಗಳು ಹೆಚ್ಚಿನ ಮಟ್ಟದ ರಕ್ಷಣೆಯನ್ನು ಒದಗಿಸುತ್ತವೆ ಎಂದು ಈ ಅಧ್ಯಯನಗಳು ಹೇಳುತ್ತವೆ ಎಂದು ಕ್ಸಿನ್ಹುವಾ ಸಂಸ್ಥೆ ವರದಿ ಮಾಡಿದೆ.

ಓಮಿಕ್ರಾನ್ ಬಗ್ಗೆ ತಿಳಿಯಬೇಕಾದ ಮಾಹಿತಿಗಳು

-ಕೊರೊನಾದ (ಓಮಿಕ್ರಾನ್) ಈ ರೂಪಾಂತರವು ಉಸಿರಾಟದ ಮೂಲಕ ವೇಗವಾಗಿ ಹರಡುತ್ತಿದೆ ಎಂದು ನಿಮಗೆ ತಿಳಿದಿದೆ. ಆದ್ದರಿಂದ ಕುಟುಂಬದ ಎಲ್ಲರೂ ಮಾಸ್ಕ್‌ಗಳನ್ನು ಕಟ್ಟುನಿಟ್ಟಾಗಿ ಬಳಸುವ ಅಭ್ಯಾಸವನ್ನು ರೂಢಿಸಿಕೊಳ್ಳಿ.

- ಈ ವೈರಸ್ ಅನ್ನು ನಿಯಂತ್ರಿಸಲು ನೈರ್ಮಲ್ಯವು ಮತ್ತೊಂದು ಮಾರ್ಗವಾಗಿದೆ. - ಹೊರಗಿನಿಂದ ತಂಡ ಯಾವುದೇ ವಸ್ತುವನ್ನು ಮುಟ್ಟಿದ ನಂತರ ಹ್ಯಾಂಡ್ ವಾಶ್ ಅಥವಾ ಹ್ಯಾಂಡ್ ಸ್ಯಾನಿಟೈಸರ್ ಬಳಸಿ.

- ಉಸಿರಾಟವನ್ನು ಆರೋಗ್ಯಕರವಾಗಿಡಲು ಮೂರನೇ ಮತ್ತು ಸುಲಭವಾದ ಮಾರ್ಗವೆಂದರೆ ಅದು ಬಿಸಿ ನೀರು. ತುಂಬಾ ಬಿಸಿ ಅಲ್ಲ ಆದರೆ ನಿಮ್ಮ ದೈನಂದಿನ ಜೀವನದಲ್ಲಿ ಉಗುರುಬೆಚ್ಚಗಿನ ನೀರಿಗಿಂತ ಸ್ವಲ್ಪ ಬಿಸಿ ನೀರನ್ನು ಸೇರಿಸಿ. ಹೊರಗಿನಿಂದ ಬಂದ ನಂತರ ಕೈ ಬಾಯಿ ತೊಳೆದು ಬಿಸಿ ನೀರು ಅಥವಾ ಕಷಾಯ ಕುಡಿಯಬೇಕು.

- ಚಳಿಗಾಲದಲ್ಲಿ ನೆಗಡಿ, ಕೆಮ್ಮು ಬರುವುದು ಸಾಮಾನ್ಯ. ಆದರೆ ಕೊರೊನಾ ಸೋಂಕಿನ ಮಧ್ಯೆ, ಈ ಸಣ್ಣ ಸಮಸ್ಯೆಗಳನ್ನು ಸಹ ನಾವು ಭರಿಸಲಾಗುವುದಿಲ್ಲ. ಆದ್ದರಿಂದ ಶೀತದಿಂದ ನಿಮ್ಮನ್ನು ರಕ್ಷಿಸಿಕೊಳ್ಳಿ ಮತ್ತು ಬೆಚ್ಚಗಿನ ಬಟ್ಟೆಗಳನ್ನು ಸರಿಯಾಗಿ ಬಳಸಿ.

-ಸರಿಯಾದ ಆಹಾರದೊಂದಿಗೆ, ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು.

- ರೋಗನಿರೋಧಕ ಶಕ್ತಿ ಬಲವಾಗಿದ್ದಾಗ, ಯಾವುದೇ ರೋಗವು ನಿಮ್ಮನ್ನು ತನ್ನ ಹಿಡಿತದಲ್ಲಿ ಸುಲಭವಾಗಿ ತೆಗೆದುಕೊಳ್ಳುವುದಿಲ್ಲ ಮತ್ತು ನೀವು ಅನಾರೋಗ್ಯಕ್ಕೆ ಒಳಗಾದರೂ, ಅದು ಹೆಚ್ಚು ಕಾಲ ಉಳಿಯಲು ಸಾಧ್ಯವಿಲ್ಲ.

-ದಿನಕ್ಕೆ ಒಮ್ಮೆ ಅರಿಶಿನದ ಹಾಲನ್ನು ಕುಡಿಯಿರಿ ಮತ್ತು ಅದನ್ನು ಕುಟುಂಬದ ಎಲ್ಲರಿಗೂ ಸೇವಿಸಲು ಹೇಳಿ. ಅಲ್ಲದೆ, ತುಳಸಿಯ ಕಷಾಯವನ್ನು ಪ್ರತಿದಿನ ಒಮ್ಮೆ ಕುಡಿಯಿರಿ.

- ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ, ಸೋಂಕುಗಳನ್ನು ತೊಡೆದುಹಾಕಲು ಅವು ಬಹಳ ಸಹಾಯಕವಾಗಿವೆ.

Recommended Video

IPL ನಿಂದ‌ ಚೀನಾ ಕಂಪನಿ ವಿವೋ ಗೆ ಗೇಟ್ ಪಾಸ್:ಇನ್ಮುಂದೆ Tata IPL | Oneindia Kannada

- ಮನೆಗಳಲ್ಲಿ ಬಂಧಿಯಾದ ನಂತರ, ವ್ಯಾಯಾಮ ಮತ್ತು ಯೋಗವನ್ನು ಹೊರತುಪಡಿಸಿ ನಮಗೆ ಬೇರೆ ಆಯ್ಕೆಗಳಿಲ್ಲ, ಇವು ನಮ್ಮ ದೇಹವನ್ನು ಸದೃಢವಾಗಿ, ಆರೋಗ್ಯಕರವಾಗಿ ಮತ್ತು ರಕ್ತ ಪರಿಚಲನೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ. ಆದ್ದರಿಂದ ನಿಮಗೆ ನಡೆಯಲು ಸಾಧ್ಯವಾಗದೇ ಇದ್ದರೆ ಖಂಡಿತವಾಗಿಯೂ ಯೋಗ ಮತ್ತು ವ್ಯಾಯಾಮ ಮಾಡಿ ಮತ್ತು ಮಕ್ಕಳಿಂದಲೂ ಮಾಡಿಸಿ.

English summary
Citing preliminary data, the European Medicines Agency (EMA) has said that the Covid-19 vaccines remain effective against severe disease and hospitalisation caused by the Omicron coronavirus variant.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X