ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಲಸಿಕೆ ಪಡೆದವರೂ ಸೋಂಕು ಹರಡಬಹುದು: ತಜ್ಞರು

|
Google Oneindia Kannada News

ಲಂಡನ್, ಜನವರಿ 24: ಕೊರೊನಾ ಲಸಿಕೆ ಪಡೆದವರಿಂದಲೂ ಕೊರೊನಾ ಸೋಂಕು ಹರಡಬಹುದು ಎಂದು ಇಂಗ್ಲೆಂಡ್‌ನ ಪ್ರಮುಖ ಆರೋಗ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಜನರು ಕಟ್ಟುನಿಟ್ಟಾದ ಲಾಕ್‌ಡೌನ್ ನಿಯಮವನ್ನು ಪಾಲಿಸಬೇಕು ಎಂದು ಹೇಳಿದ್ದಾರೆ, ಕೊರೊನಾ ಲಸಿಕೆ ಪ್ರಭಾವವು ಷ್ಟು ಬೇಗ ದೇಹದ ಮೇಲಾಗುವುದಿಲ್ಲ ಪ್ರತಿಕಾಯ ಸೃಷ್ಟಿಗೆ ಹಲವು ದಿನಗಳು ತೆಗೆದುಕೊಳ್ಳುತ್ತದೆ. ಹೀಗಾಗಿ ಕೊರೊನಾ ಲಸಿಕೆ ಪಡೆದವರಿಂದಲೂ ಕೊರೊನಾ ಸೋಂಕು ಹರಡಬಹುದು ಎಂದು ಎಚ್ಚರಿಸಿದ್ದಾರೆ.

ಲಸಿಕೆ ಪಡೆದ ಜನರು ಕೊರೊನಾ ಸೋಂಕನ್ನು ಹರಡುವುದಿಲ್ಲ ಎನ್ನುವುದಕ್ಕೆ ಯಾವ ಪುರಾವೆಯೂ ಇಲ್ಲ ಎಂದು ಇಂಗ್ಲೆಂಡ್‌ನ ಮುಖ್ಯ ವೈದ್ಯಕೀಯ ಅಧಿಕಾರಿ ಪ್ರೊ. ಜೊನಾಥನ್ ವ್ಯಾನ್ ಟಾಮ್ ಹೇಳಿದ್ದಾರೆ.

ಭಾರತದ 150 ಜನರಲ್ಲಿ ಬ್ರಿಟನ್ ಮೂಲದ ಕೊರೊನಾವೈರಸ್ಭಾರತದ 150 ಜನರಲ್ಲಿ ಬ್ರಿಟನ್ ಮೂಲದ ಕೊರೊನಾವೈರಸ್

ಯಾರು ಲಸಿಕೆ ತೆಗೆದುಕೊಂಡಿದ್ದಾರೆ, ಯಾರು ಪಡೆದುಕೊಂಡಿಲ್ಲ ಎಂದು ತಿಳಿಯಲು ಈಗ ಸಾಧ್ಯವಿಲ್ಲ ಹೀಗಾಗಿ ನಿಮ್ಮ ಎಚ್ಚರಿಕೆಯಲ್ಲಿ ನೀವು ಇರುವುದು ಉತ್ತಮ. ಏಕೆಂದರೆ ಕೊರೊನಾ ಲಸಿಕೆ ರಕ್ಷಣೆ ನೀಡಲು ಮೂರು ವಾರಗಳನ್ನು ತೆಗೆದುಕೊಳ್ಳುತ್ತದೆ ಎಂದು ಅವರು ಹೇಳಿದ್ದಾರೆ.

vaccine

ಈ ವಾರಾಂತ್ಯದಲ್ಲಿ ಯುಕೆಯಲ್ಲಿ 1348 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಒಟ್ಟು 97,329 ಕೊರೊನಾ ಸೋಂಕಿತರಿದ್ದಾರೆ.ಕೊರೊನಾ ಬಂದ ನಂತರದಲ್ಲಿ ಜನರ ಜೀವನದಲ್ಲಿ ಸಾಕಷ್ಟು ಬದಲಾವಣೆ ಕಂಡಿದೆ. ಅದೇ ರೀತಿ ಆರೋಗ್ಯದಲ್ಲೂ ಕೂಡ ಒಂದಾದ ಮೇಲೊಂದರಂತೆ ಸಮಸ್ಯೆಗಳು ಕಂಡು ಬರುತ್ತಿವೆ. ಕೆಲವರಿಗೆ ಜ್ವರ, ಒಣ ಕೆಮ್ಮು ಮತ್ತು ಮೈ ಕೈ ನೋವು ಕಾಣಿಸಿಕೊಳ್ಳುತ್ತಿದೆ.

ಇನ್ನು ಕೆಲವರಿಗೆ ಸೋಂಕು ಹೆಚ್ಚಾದಂತೆ ಬೇರೆಬೇರೆ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಅವುಗಳಲ್ಲಿ ಚರ್ಮದ ಸೋಂಕಿನ ಸಮಸ್ಯೆ ಕೂಡ ಒಂದು. ಸೋಂಕಿನ ಇನ್ನಿತರ ಸಮಸ್ಯೆಗಳು ಕೆಲವೊಮ್ಮೆ ತೀರಾ ಕೆಟ್ಟದಾಗಿರುತ್ತವೆ.

ಬಹಳಷ್ಟು ದಿನಗಳವರೆಗೆ ಇವುಗಳ ಬಗ್ಗೆ ನಮಗೆ ಅರಿವಿರುವುದಿಲ್ಲ. ಆದರೆ ನಂತರದಲ್ಲಿ ಸಾಕಷ್ಟು ಕಷ್ಟಪಡಬೇಕಾಗುತ್ತದೆ. ಇದಕ್ಕೆ ಉದಾಹರಣೆಯೆಂದರೆ ಇತ್ತೀಚಿಗೆ ಕಂಡುಬರುತ್ತಿರುವ ಚರ್ಮದ ಸಮಸ್ಯೆಗಳು. ಹೌದು ಕೋವಿಡ್ 19 ಜನರಲ್ಲಿ ಚರ್ಮಕ್ಕೆ ಸಂಬಂಧಪಟ್ಟಂತ ಸಮಸ್ಯೆಗಳನ್ನು ಉಂಟು ಮಾಡುತ್ತಿದೆ : -

ಕೊರೊನಾ ಬಂದ ನಂತರ ಜನರಲ್ಲಿ ಚರ್ಮದ ಮೇಲೆ ಉಂಟಾಗುವ ಸಮಸ್ಯೆಗಳನ್ನು ಅಲರ್ಜಿ, ದದ್ದುಗಳು ಮತ್ತು ಗುಳ್ಳೆಗಳು ಎಂದು ಜನರು ಸಾಮಾನ್ಯವಾಗಿ ಇವುಗಳ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಾರೆ. ಆದರೆ ಇವೆಲ್ಲವೂ ಕೋವಿಡ್ 19ರ ಪ್ರಭಾವಗಳು. ಆರು ಜನರಲ್ಲಿ ಒಬ್ಬರಿಗೆ ಇಂತಹ ಸಮಸ್ಯೆಗಳು ಸಾಮಾನ್ಯ ಎಂದು ಹೇಳಲಾಗುತ್ತದೆ.

English summary
One of England's leading medical officers on Sunday urged the public to continue to follow the strict lockdown rules because any vaccine-related immunity from COVID-19 takes at least three weeks to kick in.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X