ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಕಿಲೀಕ್ಸ್ ಸಂಸ್ಥಾಪಕ ಅಸ್ಸಾಂಜ್ ಗಡಿಪಾರಿಗೆ ಬ್ರಿಟನ್ ಒಪ್ಪಿಗೆ

|
Google Oneindia Kannada News

ಲಂಡನ್, ಜೂನ್ 13: ಬೇಹುಗಾರಿಕೆ ಕಾಯ್ದೆಯಡಿ ಆರೋಪಗಳನ್ನು ಎದುರಿಸುತ್ತಿರುವ ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸ್ಸಾಂಜ್ ಅವರನ್ನು ಅಮೆರಿಕಕ್ಕೆ ಗಡಿಪಾರು ಮಾಡುವ ಒಪ್ಪಂದಕ್ಕೆ ಇಂಗ್ಲೆಂಡ್ ಸಹಿಹಾಕಿದೆ.

ಇಂಗ್ಲೆಂಡ್‌ನ ಗೃಹ ಕಾರ್ಯದರ್ಶಿ ಸಾಜಿದ್ ಜಾವಿದ್ ಅವರು ಬುಧವಾರ ಗಡಿಪಾರು ಒಪ್ಪಂದ ಪತ್ರಗಳಿಗೆ ಸಹಿ ಹಾಕಿದರು. ಆಸ್ಟ್ರೇಲಿಯಾ ಮೂಲದ 47 ವರ್ಷದ ಅಸ್ಸಾಂಜ್ ಅವರನ್ನು ಗಡಿಪಾರು ಮಾಡುವಂತೆ ಮಂಗಳವಾರ ಅಮೆರಿಕದ ನ್ಯಾಯಾಂಗ ಇಲಾಖೆ ಕೋರಿತ್ತು.

ಜಾಮೀನು ಷರತ್ತು ಉಲ್ಲಂಘನೆ: ಜೂಲಿಯನ್ ಅಸಾಂಜ್‌ಗೆ 50 ವಾರ ಶಿಕ್ಷೆಜಾಮೀನು ಷರತ್ತು ಉಲ್ಲಂಘನೆ: ಜೂಲಿಯನ್ ಅಸಾಂಜ್‌ಗೆ 50 ವಾರ ಶಿಕ್ಷೆ

ಅಸ್ಸಾಂಜ್ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವುದಕ್ಕೆ ಪೊಲೀಸರನ್ನು ಮೊದಲು ಅಭಿನಂದಿಸುತ್ತೇನೆ. ಇಂಗ್ಲೆಂಡ್ ಕಾನೂನುಗಳನ್ನು ಉಲ್ಲಂಘಿಸಿದ ಕಾರಣಕ್ಕೆ ಅಸ್ಸಾಂಜ್ ಈಗ ಕಂಬಿಯ ಹಿಂದಿದ್ದಾರೆ. ಅವರನ್ನು ಗಡಿಪಾರು ಮಾಡುವಂತೆ ಅಮೆರಿಕದಿಂದ ಮನವಿ ಬಂದಿತ್ತು. ಅವರ ಗಡಿಪಾರಿಗೆ ನಿನ್ನೆ ನಾನು ಸಹಿ ಹಾಕಿ ಪ್ರಮಾಣೀಕರಿಸಿದ್ದೇನೆ. ನಾಳೆ ಇದು ನ್ಯಾಯಾಲಯದ ಮುಂದೆ ಹೋಗಲಿದೆ ಎಂದು ಜಾವಿದ್ ತಿಳಿಸಿದ್ದಾರೆ.

United Kingdom signs extradition of Julian assange to America

ಜೂಲಿಯನ್ ಅಸಾಂಜೆಗೆ ಪೌರತ್ವ ನೀಡಿದ ಈಕ್ವೆಡಾರ್ ಜೂಲಿಯನ್ ಅಸಾಂಜೆಗೆ ಪೌರತ್ವ ನೀಡಿದ ಈಕ್ವೆಡಾರ್

ಶುಕ್ರವಾರ ಲಂಡನ್ ನ್ಯಾಯಾಲಯದಲ್ಲಿ ಅಮೆರಿಕವು ಅಸ್ಸಾಂಜ್‌ನ ಗಡಿಪಾರಿನ ಅಗತ್ಯದ ಕುರಿತು ಹಾಗೂ ಅವರ ವಿರುದ್ಧದ ಆರೋಪಗಳ ಕುರಿತು ವಿವರ ನೀಡಲಿದೆ.

ಈಕ್ವೆಡಾರ್ : ವಿಕಿಲೀಕ್ಸ್ ಸಂಸ್ಥಾಪಕ ಜ್ಯೂಲಿಯನ್ ಅಸ್ಸಾಂಜೆ ಬಂಧನ ಈಕ್ವೆಡಾರ್ : ವಿಕಿಲೀಕ್ಸ್ ಸಂಸ್ಥಾಪಕ ಜ್ಯೂಲಿಯನ್ ಅಸ್ಸಾಂಜೆ ಬಂಧನ

ಅತ್ಯಾಚಾರದ ಆರೋಪ ಎದುರಿಸುತ್ತಿದ್ದ ಅಸ್ಸಾಂಜ್, 2012ರಲ್ಲಿ ಸ್ವೀಡನ್‌ನಿಂದ ಗಡಿಪಾರಾಗುವುದನ್ನು ತಪ್ಪಿಸಿಕೊಳ್ಳಲು ಲಂಡನ್‌ನಲ್ಲಿರುವ ಈಕ್ವೆಡಾರ್ ರಾಯಭಾರ ಕಚೇರಿಯಲ್ಲಿ ಏಳು ವರ್ಷ ಆಶ್ರಯ ಪಡೆದಿದ್ದರು. ಆದರೆ, ಜಾಮೀನು ನಿಯಮ ಉಲ್ಲಂಘನೆ ಮಾಡಿದ ಪ್ರಕರಣದಲ್ಲಿ ಈಕ್ವೆಡಾರ್‌ನ ಅಧಿಕಾರಿಗಳು ಕಳೆದ ಏಪ್ರಿಲ್‌ನಲ್ಲಿ ಬ್ರಿಟನ್ ಪೊಲೀಸರಿಗೆ ಒಪ್ಪಿಸಿದ್ದರು. ಸದ್ಯ ಅವರು 50 ವಾರಗಳ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ.

English summary
United Kingdom home secretary Sajid Javid signed an extradition request of Wikileaks founder Julian Assange by the US.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X