ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ ಕಥೆ ಬೇಡ, ನಾವು WHOಗೆ ಸಪೋರ್ಟ್ ಮಾಡ್ತೀವಿ - ಯುಕೆ

|
Google Oneindia Kannada News

ಲಂಡನ್, ಏಪ್ರಿಲ್ 15: ಕೊರೊನಾ ವೈರಸ್‌ ವಿಚಾರದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಚೀನಾ ದೇಶದ ಪರ ಕೆಲಸ ಮಾಡುತ್ತಿದೆ ಎಂದು ಆರೋಪಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಡಬ್ಲ್ಯೂ ಎಚ್ ಒಗೆ ನೀಡುತ್ತಿದ್ದ ಆರ್ಥಿಕ ನೆರವು ಸ್ಥಗಿತಗೊಳಿಸಿದ್ದಾರೆ. ಅಮೆರಿಕದ ಈ ನಿರ್ಧಾರ ವಿಶ್ವ ಸಂಸ್ಥೆಯ ಒಕ್ಕೂಟ ರಾಷ್ಟ್ರಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ಟ್ರಂಪ್ ನಿರ್ಧಾರದ ಬಗ್ಗೆ ವಿಶ್ವ ಸಂಸ್ಥೆ ಬೇಸರ ವ್ಯಕ್ತಪಡಿಸಿದೆ. ಇದೀಗ, ಅಮೆರಿಕ ಜೊತೆ ಉತ್ತಮ ಸಂಬಂಧ ಕಾಪಾಡಿಕೊಂಡು ಬಂದಿರುವ ಬ್ರಿಟನ್ ಸರ್ಕಾರ ವಿಶ್ವ ಆರೋಗ್ಯ ಸಂಸ್ಥೆಗೆ ನಮ್ಮ ಬೆಂಬಲ ಮುಂದುವರಿಯಲಿದೆ ಎಂದು ಹೇಳಿ ಅಮೆರಿಕ ನಿಲುವನ್ನು ವಿರೋಧಿಸಿದೆ.

WHOಗೆ ಅರ್ಥಿಕ ನೆರವು ಸ್ಥಗಿತಗೊಳಿಸಿರುವ ಅಮೆರಿಕ ನಿರ್ಧಾರ ಸರಿಯಲ್ಲ: ವಿಶ್ವಸಂಸ್ಥೆWHOಗೆ ಅರ್ಥಿಕ ನೆರವು ಸ್ಥಗಿತಗೊಳಿಸಿರುವ ಅಮೆರಿಕ ನಿರ್ಧಾರ ಸರಿಯಲ್ಲ: ವಿಶ್ವಸಂಸ್ಥೆ

ಅಮೆರಿಕ ಜೊತೆ ಯುಕೆ ಸರ್ಕಾರ ಬಹಳ ಹತ್ತಿರದ ಸಂಬಂಧ ಇಟ್ಟುಕೊಂಡಿದೆ. ವಾಷಿಂಗ್ಟನ್ ವಿದೇಶಿ ನೀತಿಯನ್ನು ಯುಕೆ ಸರ್ಕಾರ ಬಲವಾಗಿ ಅನುಸರಿಸುತ್ತೆ ಎಂಬ ವಿಮರ್ಶೆ ಜಗತ್ತಿನಲ್ಲಿದೆ. ಯುಎಸ್ ಜೊತೆ ಹೀಗೆ ಬಾಂಧವ್ಯ ಬೆಳಸಿಕೊಂಡಿರುವ ಬ್ರಿಟನ್, ಈಗ ವಿಶ್ವ ಸಂಸ್ಥೆ ವಿಚಾರದಲ್ಲಿ ತನ್ನದೇ ಸ್ವಂತ ನಿಲುವು ತೋರಿರುವುದು ಗಮನ ಸೆಳೆಯುತ್ತಿದೆ.

United Kingdom Not To Stop Fund For Who

ಈ ಬಗ್ಗೆ ಮಾತನಾಡಿದ ಬ್ರಿಟನ್ ಸರ್ಕಾರದ ವಕ್ತಾರರು ''ಜಾಗತಿಕ ಮಟ್ಟದಲ್ಲಿ ಆರೋಗ್ಯವ ಕ್ಷೇತ್ರವನ್ನು ಮುನ್ನಡೆಸುವ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಬಹಳ ಪ್ರಮುಖವಾದದು. ಅದಕ್ಕೆ ನೀಡಲಾಗುತ್ತಿರುವ ಆರ್ಥಿಕ ನೆರವನ್ನು ನಿಲ್ಲಿಸುವ ಕುರಿತು ನಾವು ನಿರ್ಧರಿಸಿಲ್ಲ. ಸಂಪ್ರದಾಯದಂತೆ ನಮ್ಮ ದೇಶದ ಕಡೆಯಿಂದ ನೀಡುವ ಹಣ ನೀಡುತ್ತೇವೆ. ಕೊರೊನಾ ವೈರಸ್ ಸಾಂಕ್ರಾಮಿಕ ರೋಗ. ಜಗತ್ತನ್ನು ಕಾಡುತ್ತಿರುವ ಈ ಕಾಯಿಲೆ ವಿರುದ್ಧ ಎಲ್ಲ ರಾಷ್ಟ್ರಗಳು ಒಗ್ಗಟ್ಟಾಗಿ ಹೋರಾಡಬೇಕಿದೆ'' ಎಂದಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಗೆ ನೀಡುತ್ತಿದ್ದ ಆರ್ಥಿಕ ನೆರವು ನಿಲ್ಲಿಸಿದ ಟ್ರಂಪ್ವಿಶ್ವ ಆರೋಗ್ಯ ಸಂಸ್ಥೆಗೆ ನೀಡುತ್ತಿದ್ದ ಆರ್ಥಿಕ ನೆರವು ನಿಲ್ಲಿಸಿದ ಟ್ರಂಪ್

ಬೋರಿಸ್ ಜಾನ್ಸನ್ ಸರ್ಕಾರವೂ ಟ್ರಂಪ್ ನಿರ್ಧಾರದ ಬಗ್ಗೆ ಬೇಸರ ಮಾಡಿಕೊಂಡಿದ್ಯಾ ಎಂದು ಕೇಳಿದ್ದಕ್ಕೆ ''ನಾವು ಯುಕೆ ಸರ್ಕಾರದ ನಿಲುವಿನ ಬಗ್ಗೆ ಮಾತ್ರ ಹೇಳುತ್ತೇವೆ. ನಾವು ನಮ್ಮ ನೆರವು ಮುಂದುವರಿಸುತ್ತಿದ್ದೇವೆ' ಎಂದು ಹೇಳಿ ಅಮೆರಿಕ ನಿರ್ಧಾರದ ಬಗ್ಗೆ ಮೌನವಹಿಸಿದರು.

ಮೂಲಗಳ ಪ್ರಕಾರ, ವಿಶ್ವಸಂಸ್ಥೆಗೆ ಯುಕೆ ಸರ್ಕಾರದಿಂದ ವಾರ್ಷಿಕ USD 10 ಮಿಲಿಯನ್ ಆರ್ಥಿಕ ನೆರವು ನೀಡುತ್ತಿದೆ.

English summary
United Kingdom does not to stop WHO Funding said Britain Government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X