ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೂನ್‌ 1ರವರೆಗೂ ಬ್ರಿಟನ್‌ನಲ್ಲಿ ಲಾಕ್‌ಡೌನ್‌ ಮುಂದುವರಿಕೆ!

|
Google Oneindia Kannada News

ಲಂಡನ್, ಮೇ 11: ಬ್ರಿಟನ್‌ನಲ್ಲಿ ಕೊರೊನಾ ವೈರಸ್‌ ಲಾಕ್‌ಡೌನ್‌ ಮತ್ತಷ್ಟು ದಿನಗಳ ಕಾಲ ಮುಂದುವರಿಯಲಿದೆ ಎಂದು ಪ್ರಧಾನಿ ಬೋರಿಸ್ ಜಾನ್ಸನ್ ಭಾನುವಾರ ಹೇಳಿದ್ದಾರೆ.

ಬ್ರಿಟನ್‌ ನಾಗರಿಕರಿಗೆ ಈ ವಾರ ಲಾಕ್‌ಡೌನ್‌ನಿಂದ ವಿಮುಕ್ತಿ ಸಿಗುವ ನಿರೀಕ್ಷೆಯ ಇತ್ತು. ಆದರೆ, ಯುಕೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಬಾರದ ಹಿನ್ನೆಲೆ ''ಸದ್ಯಕ್ಕೆ ಲಾಕ್‌ಡೌನ್‌ ತೆರೆವುಗೊಳಿಸಲು ಸಾಧ್ಯವಿಲ್ಲ. ಇದು ಲಾಕ್‌ಡೌನ್‌ ವಿನಾಯ್ತಿ ಬಗ್ಗೆ ಯೋಚಿಸುವ ಸಮಯವಲ್ಲ' ಎಂದು ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ.

ಜೂನ್‌ 1ರ ಬಳಿಕ ಶಾಲೆಗೆ ಮಕ್ಕಳು ಮರಳಬಹುದು, ಕೆಲವು ಅಂಗಡಿಗಳು ತೆರೆಯಬಹುದು ಎಂದು ಮಾಹಿತಿ ನೀಡಿದರು. ಜೊತೆಗೆ ಕೆಲವು ಸಾರ್ವಜನಿಕ ಚಟುವಟಿಕೆಗಳಿಗೂ ಅವಕಾಶ ಮಾಡಿಕೊಡಲಾಗುವುದು. ಆದರೆ, ವಿದೇಶಿ ಪ್ರಯಾಣ ಮಾಡುವವರು ಕ್ವಾರೆಂಟೈನ್‌ ಆಗಲೇಬೇಕು ಎಂದು ತಿಳಿಸಿದರು.

united-kingdom-extand-lockdown-to-till-june-1

ತಿಂಗಳುಗಳ ಕಾಲ ಆರ್ಥಿಕ ಚಟುವಟಿಕೆ ಸ್ಥಗಿತಗೊಳಿಸಿರುವುದರಿಂದ ಆರ್ಥಿಕವಾಗಿ ದೇಶಕ್ಕೆ ಭಾರಿ ನಷ್ಟ ತಂದಿದೆ. ಹಾಗಾಗಿ, ಲಾಕ್‌ಡೌನ್‌ನಿಂದ ಸರ್ಕಾರ ಹೊರಬರಬೇಕಾದ ಒತ್ತಡದಲ್ಲಿದೆ. ಈ ಬಗ್ಗೆ ಚಿಂತಿಸಿ ಕೆಲವು ಮಾರ್ಗಸೂಚಿಯನ್ನು ಬ್ರಿಟನ್ ಸಿದ್ದಪಡಿಸುತ್ತಿದೆ.

ಯುನೈಟೆಡ್ ಕಿಂಗ್‍ಡಮ್‌ನಲ್ಲಿ ಈವರೆಗೂ 32 ಸಾವಿರಕ್ಕೂ ಅಧಿಕ ಜನರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಯೂರೋಪ್‌ ದೇಶಗಳ ಪೈಕಿ ಬ್ರಿಟನ್‌ನಲ್ಲಿ ಅತಿ ಹೆಚ್ಚು ಸಾವು ಸಂಭವಿಸಿದೆ. 2.1 ಲಕ್ಷಕ್ಕೂ ಅಧಿಕ ಜನರಿಗೆ ಸೋಂಕು ತಗುಲಿದೆ.

English summary
Prime Minister Boris Johnson says United Kingdom will remain under lockdown till at least June 1
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X