ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರಿಟನ್‌ನಲ್ಲಿ ಮತ್ತೆ ರೂಪಾಂತರಗೊಂಡ ರೂಪಾಂತರಿ ವೈರಸ್

|
Google Oneindia Kannada News

ಲಂಡನ್, ಫೆಬ್ರವರಿ 2: ಬ್ರಿಟನ್‌ನಲ್ಲಿ ಕಾಣಿಸಿಕೊಂಡಿರುವ ಮಾರಕ ರೂಪಾಂತರಿ ಕೊರೊನಾ ವೈರಸ್ ಮತ್ತೊಮ್ಮೆ ರೂಪಾಂತರವಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಕೋವಿಡ್-19 ರೂಪಾಂತರ ತಳಿಯಲ್ಲಿ ಹೊಸ ವಂಶವಾಹಿ ಬದಲಾವಣೆಗಳು ಪತ್ತೆಯಾಗಿದೆ. ಈಗಾಗಲೇ ಹೆಚ್ಚು ಸಾಂಕ್ರಾಮಿಕ ಮತ್ತು ಹೆಚ್ಚು ಮಾರಕ ಎಂದು ಗುರುತಿಸಲಾಗಿರುವ ರೂಪಾಂತರಿಯಲ್ಲಿನ ಈ ಹೊಸ ಬೆಳವಣಿಗೆ ಆತಂಕ ಮೂಡಿಸಿದೆ.

ರೂಪಾಂತರಿ ತಳಿಯ ಮೇಲೆ ನಡೆಸಿದ ಸಂಶೋಧನೆಯಲ್ಲಿ ಇ484ಕೆ ಎಂಬ ಹೊಸ ರೂಪಾಂತರ ಕಂಡುಬಂದಿದೆ. ಈ ರೂಪಾಂತರವು ಈಗಾಗಲೇ ದಕ್ಷಿಣ ಆಫ್ರಿಕಾ ಮತ್ತು ಬ್ರೆಜಿಲ್‌ನಲ್ಲಿನ ಕೋವಿಡ್-19 ವೈರಸ್‌ನ ರೂಪಾಂಪತರಿಗಳಲ್ಲಿ ಪತ್ತೆಯಾಗಿದೆ ಎಂದು ಬಿಬಿಸಿ ವರದಿ ಮಾಡಿದೆ.

ದೆಹಲಿ: ಶೇ.56ರಷ್ಟು ಮಂದಿಯಲ್ಲಿ ಕೊರೊನಾ ವಿರುದ್ಧ ಹೋರಾಡುವ ಪ್ರತಿಕಾಯಗಳು ಪತ್ತೆದೆಹಲಿ: ಶೇ.56ರಷ್ಟು ಮಂದಿಯಲ್ಲಿ ಕೊರೊನಾ ವಿರುದ್ಧ ಹೋರಾಡುವ ಪ್ರತಿಕಾಯಗಳು ಪತ್ತೆ

ಈ ಹೊಸ ರೂಪಾಂತರಿಯ ರೂಪಾಂತರವು ಲಸಿಕೆಗಳ ದಕ್ಷತೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಈಗ ಹರಡಿದ್ದ ರೂಪಾಂತರಿ ವೈರಸ್ ಲಸಿಕೆಗೆ ಬಗ್ಗಬಲ್ಲದೇ ಅಥವಾ ಇಲ್ಲವೇ ಎನ್ನುವುದು ಇನ್ನೂ ದೃಢಪಟ್ಟಿಲ್ಲ. ಅದರ ನಡುವೆಯೇ ಮತ್ತೊಂದು ರೂಪಾಂತರ ಸೃಷ್ಟಿಯಾಗಿದೆ.

 UK Variant Of Coronavirus Has Mutated Again, Said To Be More Contagious

ಇ484ಕೆ ರೂಪಾಂತರದ ಕೆಲವೇ ಪ್ರಕರಣಗಳು ಬ್ರಿಟನ್‌ನಲ್ಲಿ ಪತ್ತೆಯಾಗಿವೆ. ಹೀಗಾಗಿ ರೂಪಾಂತರದ ಎಲ್ಲ ಆವೃತ್ತಿಗಳಲ್ಲಿಯೂ ಹೊಸ ರೂಪಾಂತರ ಇದೆ ಎಂದು ಹೇಳಲು ಸಾಧ್ಯವಿಲ್ಲ. ವೈರಸ್‌ಗಳು ಪದೇ ಪದೇ ರೂಪಾಣತರಗೊಳ್ಳುವುದು ಸಾಮಾನ್ಯ. ಕೆಲವು ವೈರಸ್‌ಗಳು ರೂಪಾಂತರ ಹೊಂದುತ್ತಿದ್ದಂತೆಯೇ ಹೆಚ್ಚು ಪ್ರಭಾವಶಾಲಿ, ಸಾಂಕ್ರಾಮಿಕ ಹಾಗೂ ಅಪಾಯಕಾರಿಯಾಗಬಲ್ಲವು.

ಕೊರೊನಾ ವೈರಸ್‌ಗಳು ಹಲವು ರೂಪಾಂತರಗಳನ್ನು ಕಾಣಬಹುದು ಎಂದು ಈ ಹಿಂದೆಯೇ ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದರು. ಅದರ ಆರಂಭಿಕ ಹಂತ ಪತ್ತೆಯಾಗಿದೆ. ಈಗಾಗಲೇ ಇ484 ದಕ್ಷಿಣ ಆಫ್ರಿಕಾ, ಬ್ರೆಜಿಲ್‌ಗಳಲ್ಲಿ ವರದಿಯಾಗಿದ್ದು, ಈಗ ಬ್ರಿಟನ್‌ನಲ್ಲಿ ಕೂಡ ಪತ್ತೆಯಾಗಿದೆ.

English summary
Scientists said UK variant of Covid-19 virus has mutated again. The latest test have shown a mutation called E484K.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X