ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಿಂದ 1 ಕೋಟಿ ಅಸ್ಟ್ರಾಜೆನೆಕಾ ಕೊರೊನಾ ಲಸಿಕೆ ಪಡೆಯಲಿರುವ ಬ್ರಿಟನ್

|
Google Oneindia Kannada News

ಲಂಡನ್, ಮಾರ್ಚ್ 03: ಬ್ರಿಟನ್ ಸರ್ಕಾರವು ಭಾರತದಿಂದ 1 ಕೋಟಿ ಕೊರೊನಾ ಲಸಿಕೆಗಳನ್ನು ಪಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಬ್ರಿಟನ್ ಸರ್ಕಾರವು ಪುಣೆಯ ಸೆರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಅಭಿವೃದ್ಧಿಪಡಿಸಿರುವ ಅಸ್ಟ್ರಾಜೆನೆಕಾ ಕೊರೊನಾ ಲಸಿಕೆಯ 1 ಕೋಟಿ ಡೋಸ್‌ಗಳನ್ನು ಪಡೆಯಲಿದೆ.

ಭಾರತದಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆ ಬಗ್ಗೆ ಅಂಕಿ-ಅಂಶಭಾರತದಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆ ಬಗ್ಗೆ ಅಂಕಿ-ಅಂಶ

10 ಕೋಟಿ ಅಸ್ಟ್ರಾಜೆನೆಕಾ ಕೋವಿಡ್ 19 ಲಸಿಕೆಗಳಿಗಾಗಿ ಬ್ರಿಟನ್ ಸರ್ಕಾರ ಆರ್ಡರ್ ಮಾಡಿದೆ, ಈ ಪೈಕಿ 1 ಕೋಟಿ ಎಸ್‌ಐಐನಿಂದ ಪೂರೈಕೆಯಾಗಲಿದೆ ಎಂದು ಬ್ರಿಟನ್ ಸರ್ಕಾರದ ವಕ್ತಾರರು ಮಾಹಿತಿ ನೀಡಿದ್ದಾರೆ.

Corona vaccine

ವಿಶ್ವದ ಅತಿದೊಡ್ಡ ಲಸಿಕೆ ತಯಾರಿಕಾ ಕಂಪನಿಗಳಲ್ಲಿ ಒಂದಾದ ಸೆರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ, ಬಡ ಹಾಗೂ ಮಧ್ಯಮ ವರ್ಗದ ದೇಶಗಳಿಗಾಗಿ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಅಸ್ಟ್ರಾಜೆನೆಕಾ ಕೊರೊನಾ ಲಸಿಕೆಗಳನ್ನು ಉತ್ಪಾದಿಸುತ್ತಿದೆ.

ವಿಶ್ವ ಆರೋಗ್ಯ ಸಂಸ್ಥೆಯ ನೇತೃತ್ವದಲ್ಲಿ ಕೋವ್ಯಾಕ್ಸ್ ಅಭಿಯಾನಕ್ಕೂ ಎಸ್‌ಐಐ ಕೋವಿಡ್ ಲಸಿಕೆಗಳನ್ನು ಪೂರೈಸುತ್ತಿದೆ. ಈ ನಡುವೆ ಪಾಶ್ಚಿಮಾತ್ಯ ಶ್ರೀಮಂತ ದೇಶಗಳ ವೆಚ್ಚದಲ್ಲಿ ಕೋವಿಡ್ 19 ಲಸಿಕೆಗಳನ್ನು ಸಂಗ್ರಹಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಬಡ ದೇಶಗಳಿಗೆ ಲಸಿಕೆಗಳನ್ನು ನೀಡುವ ಬದ್ಧತೆಯ ಮೇಲೆ ಯಾವುದೇ ರೀತಿ ಪರಿಣಾಮ ಬೀರುವುದಿಲ್ಲ ಎಂಬ ಸೆರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ವಾಗ್ದಾನದ ಮೇರೆಗೆ ಕೋವಿಡ್ 19 ಲಸಿಕೆ ಡೋಸ್‌ಗಳನ್ನು ಸ್ವೀಕರಿಸಲು ಮುಂದಾಗಿದ್ದೇವೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಫೆಬ್ರವರಿಯಲ್ಲಿ ಬ್ರಿಟನ್‌ನ ಮೆಡಿಸಿನ್ಸ್ ಹಾಗೂ ಹೆಲ್ತ್‌ಕೇರ್ ಉತ್ಪನ್ನಗಳ ನಿಯಂತ್ರಣ ಏಜೆನ್ಸಿ ಎಸ್‌ಐಐನಲ್ಲಿ ಉತ್ಪಾದನಾ ಪ್ರಕ್ರಿಯೆಗಳನ್ನು ಪರಿಶೋಧಿಸಿತ್ತು.

ಬಾಂಗ್ಲಾದೇಶದಿಂದ ಬ್ರೆಜಿಲ್‌ವರೆಗಿನ ಕಡಿಮೆ ಹಾಗೂ ಮಧ್ಯಮ ಆದಾಯದ ದೇಶಗಳು ಎಸ್‌ಐಐನ ಅಸ್ಟ್ರಾಜೆನೆಕಾ ಕೋವಿಶೀಲ್ಡ್ ಲಸಿಕೆಗಳನ್ನು ಅವಲಂಬಿಸಿವೆ. ಆದರೆ ಈಗ ಪಾಶ್ಚಿಮಾತ್ಯ ದೇಶಗಳಿಂದ ಬೇಡಿಕೆ ಹೆಚ್ಚುತ್ತಿದೆ.

English summary
The UK will receive 10 million AstraZeneca COVID-19 vaccine doses made by the Serum Institute of India (SII), the UK government said in a statement on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X