ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವಯಂಸೇವಕರಿಗೆ ಕೊರೊನಾ ಸೋಂಕು ತಗುಲಿಸಿ ಹೊಸ ಪ್ರಯೋಗ

|
Google Oneindia Kannada News

ಕೊರೊನಾ ಸೋಂಕಿಗೆ ಒಳಗಾಗಿರುವ ಸ್ವಯಂ ಸೇವಕರ ಮೇಲೆ ಹೊಸ ಹೊಸ ಲಸಿಕೆಗಳ ಪ್ರಯೋಗ ನಡೆಸುವುದು ಸಾಮಾನ್ಯವಾಗಿದೆ. ಆದರೆ ಕೊರೊನಾ ಸೋಂಕಿನ ಗಂಭೀರತೆಯನ್ನು ಅಳೆಯಲು ಆರೋಗ್ಯವಂತ ವ್ಯಕ್ತಿಗೆ ಕೊರೊನಾ ಸೋಂಕು ತಗುಲುವಂತೆ ಮಾಡಿ ಪರೀಕ್ಷೆ ನಡೆಸಲಾಗುತ್ತಿದೆ. ಇಡೀ ವಿಶ್ವದಲ್ಲೇ ಮೊದಲ ಬಾರಿಗೆ ಯುಕೆಯಲ್ಲಿ ಇಂಥದ್ದೊಂದು ಪ್ರಯೋಗ ನಡೆಯುತ್ತಿದೆ.

ಈ ಕುರಿತು ಫಿನಾನ್ಶಿಯಲ್ ಟೈಮ್ಸ್ ವರದಿ ಮಾಡಿದ್ದು, ಕೊವಿಡ್ 19 ಮಾನವ ಚಾಲೆಂಜ್ ಟ್ರಯಲ್ ಇದಾಗಿದೆ. ಈ ಪರೀಕ್ಷೆ ಜನವರಿಯಲ್ಲಿ ಲಂಡನ್‌ನಲ್ಲಿ ಆರಂಭವಾಗಿತ್ತು. ಈ ಪ್ರಯೋಗಕ್ಕೆ ಒಳಗಾಗಲು 2 ಸಾವಿರ ಮಂದಿ ಮುಂದೆ ಬಂದಿದ್ದಾರೆ. ಅಮೆರಿಕ ಮೂಲದ ಗುಂಪೊಂದು ಕೊವಿಡ್ 19 ಪ್ರಯೋಗಗಳಿಗಾಗಿ ಪ್ರಚಾರ ಮಾಡುತ್ತಿದೆ. 100-200 ಮಂದಿಗೆ ಸೌಲಭ್ಯವನ್ನು ಕೋರಿ ಬ್ರಿಟಿಷ್ ಸಂಸತ್ತಿಗೆ ಮನವಿ ಮಾಡಿದೆ.

ಕೊರೊನಾ ಸೋಂಕಿರುವ ಲಸಿಕೆ ನೀಡುವುದು

ಕೊರೊನಾ ಸೋಂಕಿರುವ ಲಸಿಕೆ ನೀಡುವುದು

ಪ್ರಯೋಗಗಳಿಗೆ ಅರ್ಹತೆ ಪಡೆದ ಸ್ವಯಂಸೇವಕರಿಗೆ ಕೊವಿಡ್ 19ಗೆ ಕಾರಣವಾಗುವ ವೈರಸ್ ಸಾರ್ಸ್ ಕೋವ್ 2 ಇರುವ ಲಸಿಕೆ ಹಾಕಲಾಗುತ್ತದೆ. ಆ ಲಸಿಕೆ ಹೆಸರನ್ನು ಬಹಿರಂಗಪಡಿಸಿಲ್ಲ. ಬ್ರಿಟಿಷ್ ಲಸಿಕೆ ತಯಾರಕ ಆಸ್ಟ್ರಾಜೆನೆಕಾ ಮತ್ತು ಫ್ರೆಂಚ್ ಸಂಸ್ಥೆ ಸನೋಫಿ ಇಬ್ಬರೂ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿಲ್ಲ.

ಡೆಂಗ್ಯೂ ಜ್ವರ ಬಂದು ಹೋಗಿದ್ದರೆ ಕೊರೊನಾ ಬರೋದು ಡೌಟು: ಅಧ್ಯಯನಡೆಂಗ್ಯೂ ಜ್ವರ ಬಂದು ಹೋಗಿದ್ದರೆ ಕೊರೊನಾ ಬರೋದು ಡೌಟು: ಅಧ್ಯಯನ

ಕೊವಿಡ್ ಚಾಲೆಂಜ್ ಪ್ರಯೋಗಕ್ಕೆ ಒಪ್ಪಿಗೆ ಸಿಕ್ಕಿಲ್ಲ

ಕೊವಿಡ್ ಚಾಲೆಂಜ್ ಪ್ರಯೋಗಕ್ಕೆ ಒಪ್ಪಿಗೆ ಸಿಕ್ಕಿಲ್ಲ

ಯಾವುದೇ ಕೊವಿಡ್ 19 ಚಾಲೆಂಜ್ ಪ್ರಯೋಗವನ್ನು ಯುಕೆ ಮೆಡಿಸಿನ್ಸ್ ಮತ್ತು ಹೆಲ್ತ್ ಕೇರ್ ಉತ್ಪನ್ನಗಳ ನಿಯಂತ್ರ ಸಂಸ್ಥೆ ಮತ್ತು ಸ್ವತಂತ್ರ ಸಂಶೋಧನಾ ಸಮಿತಿ ಅನುಮೋದಿಸಬೇಕಾಗುತ್ತದೆ, ಇದುವರೆಗೂ ಅನುಮತಿ ಲಭ್ಯವಾಗಿಲ್ಲ.

ಲಸಿಕೆ ತಯಾರಿಕೆಗೆ ಸಹಾಯಕ

ಲಸಿಕೆ ತಯಾರಿಕೆಗೆ ಸಹಾಯಕ

ಹ್ಯೂಮನ್ ಚಾಲೆಂಜ್ ಲಸಿಕೆ ತಯಾರಿಕೆಗೆ ಸಹಾಯ ಮಾಡುತ್ತದೆ. ಕ್ಲಿನಿಕಲ್ ಪರಿಣಾಮಕಾರಿತ್ವದ ಆರಂಭಿಕ ಪುರಾವೆಗಳನ್ನು ಇದು ಒದಗಿಸಬಹುದು.

Recommended Video

KG halli , DJ halli ಪ್ರಕರಣದ ಆರೋಪಿ Naveenಗೆ Bail ನಿರಾಕರಣೆ | Oneindia Kannada
ಪ್ರಯೋಗದಲ್ಲಿ ಭಾಗವಹಿಸುವವರ ಸುರಕ್ಷತೆಗೆ ಮೊದಲ ಆದ್ಯತೆ

ಪ್ರಯೋಗದಲ್ಲಿ ಭಾಗವಹಿಸುವವರ ಸುರಕ್ಷತೆಗೆ ಮೊದಲ ಆದ್ಯತೆ

ಪ್ರಯೋಗದಲ್ಲಿ ಭಾಗವಹಿಸುವವರ ಸುರಕ್ಷತೆಯು ನಮ್ಮ ಪ್ರಮುಖ ಆದ್ಯತೆಯಾಗಿರುತ್ತದೆ. ಮತ್ತು ಲಸಿಕೆ ಅಭಿವೃದ್ಧಿಗಾಗಿ ಕ್ಲಿನಿಕಲ್ ಪ್ರಯೋಗದ ಭಾಗವಾಗಿ ಮಾನವನ ಮೇಲೆ ಈ ಪ್ರಯೋಗ ನಡೆಸಲಾಗುತ್ತದೆ. ಅಪಾಯಗಳನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ.

English summary
The United Kingdom could become the first in the world to deliberately infect healthy volunteers with coronavirus to study the effectiveness of vaccine candidates.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X