• search
  • Live TV
ಲಂಡನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ತುರ್ತು ಸಂದರ್ಭದಲ್ಲಿ ಕೊರೊನಾ ಲಸಿಕೆ ಬಳಕೆಗೆ ಬ್ರಿಟನ್ ಅನುಮತಿ

|

ಲಂಡನ್, ಆಗಸ್ಟ್ 29: ಕೊರೊನಾ ಲಸಿಕೆ ತುರ್ತು ಸಂದರ್ಭದಲ್ಲಿ ಬಳಕೆ ಮಾಡಲು ಬ್ರಿಟನ್ ಅನುಮತಿ ನೀಡಿದೆ.

ಮಾನವ ಬಳಕೆಗೆ ಸುರಕ್ಷಿತ ಹಾಗೂ ಕೋವಿಡ್​ ವಿರುದ್ಧ ಪರಿಣಾಮಕಾರಿ ಎನಿಸಿದ ಲಸಿಕೆಗಷ್ಟೇ ವೈದ್ಯಕೀಯ ಹಾಗೂ ಆರೋಗ್ಯ ಉತ್ಪನ್ನಗಳ ನಿಯಂತ್ರಣಾ ಮಂಡಳಿ ತುರ್ತು ಪರವಾನಗಿ ನೀಡಬಹುದು ಎಂದು ಸರ್ಕಾರ ಮಾಹಿತಿ ನೀಡಿದೆ.

ಅಮೆರಿಕದಲ್ಲಿ ವರ್ಷಾಂತ್ಯಕ್ಕೆ ಕೊರೊನಾ ಲಸಿಕೆ ಸಿದ್ಧ: ಡೊನಾಲ್ಡ್ ಟ್ರಂಪ್

ಇದಲ್ಲದೇ, ಲಸಿಕೆ ನೀಡಲು ಹೆಚ್ಚು ಮಾನವ ಸಂಪನ್ಮೂಲಕ್ಕೆ ತರಬೇತಿ ನೀಡಲಾಗುತ್ತದೆ. ಇದರಿಂದ ಎಲ್ಲ ಜನರಿಗೆ ಆದಷ್ಟೂ ಬೇಗ ಲಸಿಕೆ ನೀಡಲು ಸಾಧ್ಯವಾಗಲಿದೆ ಎಂದು ಗಾರ್ಡಿಯನ್​ನಲ್ಲಿ ಪ್ರಕಟಿಸಲಾಗಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಅತ್ಯುತ್ಕೃಷ್ಠ ಸುರಕ್ಷತಾ ಮಾನದಂಡ ಹಾಗೂ ಪರಿಣಾಮಕಾರಿಯಾಗಬಲ್ಲ ಕೊರೊನಾ ವೈರಸ್​ ನಿಗ್ರಹ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡುವುದಾಗಿ ಬ್ರಿಟನ್​ ಸರ್ಕಾರ ಘೋಷಿಸಿದೆ.

ಇದರಿಂದಾಗಿ ಲಸಿಕೆಯು ಎಲ್ಲ ಸಾಮಾನ್ಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಯುರೋಪಿಯನ್​ ರಾಷ್ಟ್ರಗಳ ಪರವಾನಗಿ ಪಡೆಯುವ ಮುನ್ನವೇ ಬ್ರಿಟನ್​ ಅದರ ತುರ್ತು ಬಳಕೆಗೆ ಅನುಮತಿ ನೀಡಲು ಸಾಧ್ಯವಾಗಲಿದೆ.

ವೈದ್ಯರು, ಆರೋಗ್ಯ ಕ್ಷೇತ್ರದ ತಜ್ಞರು ನೀಡಿದ ಸಲಹೆಗಳನ್ವಯ ಮಾನವ ಔಷಧ ನಿಯಂತ್ರಣ ಕಾಯ್ದೆಗೆ ಅಗತ್ಯ ತಿದ್ದುಪಡಿ ತರುವ ಪ್ರಕ್ರಿಯೆಗಳಿಗೆ ಶುಕ್ರವಾರ ಚಾಲನೆ ದೊರೆತಿದೆ. ಇದು ಮೂರು ವಾರಗಳವರೆಗೆ ನಡೆಯಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಕೊವಿಡ್​ ಲಸಿಕೆ ಸಂಶೋಧನೆಯಲ್ಲಿ ಭಾರಿ ಪ್ರಗತಿ ಸಾಧಿಸಿದ್ದೇವೆ. ಇದು ಜನರ ಜೀವ ಉಳಿಸಲು ಶಕ್ತವಾಗಿದ್ದು, ಆರೋಗ್ಯ ಕಾರ್ಯಕರ್ತರನ್ನು ರಕ್ಷಿಸಬಲ್ಲುದು ಮಾತ್ರವಲ್ಲದೇ, ಸಾಮಾನ್ಯ ಸ್ಥಿತಿ ಮರುಕಳಿಸಲು ಸಹಕಾರಿಯಾಗಲಿದೆ ಎಂದು ಬ್ರಿಟನ್​ ಮುಖ್ಯ ಆರೋಗ್ಯಾಧಿಕಾರಿ ಪ್ರೊ. ಜೊನ್ನಾಥನ್​ ವ್ಯಾನ್​-ಟ್ಯಾಮ್​ ಹೇಳಿದ್ದಾರೆ.

ಪರಿಣಾಮಕಾರಿ ಲಸಿಕೆ ಸಂಶೋಧನಾ ಮಾತ್ರವಲ್ಲ, ಅದನ್ನೂ ಅಷ್ಟೇ ತ್ವರಿತವಾಗಿ ಜನರಿಗೆ ತಲುಪಿಸಬೇಕು. ಆದರೆ, ಇದಕ್ಕೆ ಕಠಿಣ ಸುರಕ್ಷತಾ ಮಾನದಂಡಗಳನ್ನು ಪಾಲಿಸಲೇಬೇಕು ಎಂದು ಹೇಳಿದ್ದಾರೆ.

English summary
Britain is preparing to revise its laws to allow the emergency use of any effective coronavirus vaccine before it is fully licensed - but only if the shots meet required safety and quality standards.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X