ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ ವೈರಸ್ ರೂಪಾಂತರಕ್ಕೆ ಲಸಿಕೆ ಪರಿಣಾಮಕಾರಿಯಲ್ಲ

|
Google Oneindia Kannada News

ಲಂಡನ್, ಜನವರಿ 5: ದಕ್ಷಿಣ ಆಫ್ರಿಕಾದಲ್ಲಿ ಇತ್ತೀಚೆಗೆ ಕಾಣಿಸಿಕೊಂಡಿರುವ ಕೊರೊನಾ ವೈರಸ್‌ನ ಹೊಸ ರೂಪಾಂತರ ತಳಿ ವಿರುದ್ಧ ಲಸಿಕೆ ಪರಿಣಾಮಕಾರಿಯಾಗುವುದರ ಬಗ್ಗೆ ಬ್ರಿಟನ್‌ನ ವಿಜ್ಞಾನಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಬ್ರಿಟನ್ ಮತ್ತು ದಕ್ಷಿಣ ಆಫ್ರಿಕಾಗಳಲ್ಲಿ ಕೊರೊನಾ ವೈರಸ್‌ನ ಹೆಚ್ಚು ಸಾಂಕ್ರಾಮಿಕ ಹಾಗೂ ಹೊಸ ಮಾದರಿಯ ರೂಪಾಂತರಗಳು ಪತ್ತೆಯಾಗಿದ್ದು, ಅದರ ಪರಿಣಾಮವಾಗಿ ಕೋವಿಡ್ ಪ್ರಕರಣಗಳಲ್ಲಿ ಏರಿಕೆಯಾಗಿದೆ.

ದೇಶದಲ್ಲಿ ಕಂಡುಬಂದಿರುವ ಹೊಸ ಕೊರೊನಾ ವೈರಸ್ ರೂಪಾಂತರವನ್ನು ತಡೆಯಲು ಈಗಿರುವ ಕೋವಿಡ್ ಲಸಿಕೆಗಳು ಪರಿಣಾಮಕಾರಿಯಾಗುತ್ತವೆ ಎಂದು ಬ್ರಿಟನ್ ಅಧಿಕಾರಿಗಳು ಹೇಳಿದ್ದರು. ಆದರೆ ದಕ್ಷಿಣ ಆಫ್ರಿಕಾದಲ್ಲಿ ಕಂಡುಬಂದಿರುವ ರೂಪಾಂತರಿ ವೈರಸ್ ವಿರುದ್ಧ ಲಸಿಕೆ ಕಾರ್ಯ ನಿರ್ವಹಿಸುವುದು ಕಷ್ಟಕರ ಎಂದು ಬ್ರಿಟಿಷ್ ಆರೋಗ್ಯ ಕಾರ್ಯದರ್ಶಿ ಮ್ಯಾಟ್ ಹನ್ಕಾಕ್ ಹೇಳಿದ್ದಾರೆ.

ಹೆಚ್ಚಿದ ಸೋಂಕು: ಬ್ರಿಟನ್‌ನಲ್ಲಿ ಮತ್ತೆ ಕಠಿಣ ಲಾಕ್‌ಡೌನ್ ಜಾರಿಹೆಚ್ಚಿದ ಸೋಂಕು: ಬ್ರಿಟನ್‌ನಲ್ಲಿ ಮತ್ತೆ ಕಠಿಣ ಲಾಕ್‌ಡೌನ್ ಜಾರಿ

ಸಾರ್ಸ್-ಕೋವ್-2ದ ಹೊಸ ರೂಪಾಂತರ ತನ್ನಲ್ಲಿ ಕಂಡುಬಂದಿದೆ ಎಂದು ಡಿ. 18ರಂದು ದಕ್ಷಿಣ ಆಫ್ರಿಕಾ ಪ್ರಕಟಿಸಿತ್ತು. ಇದು ಅಲ್ಲಿನ ಮೂರು ಪ್ರಾಂತ್ಯಗಳಲ್ಲಿ ತ್ವರಿತವಾಗಿ ವ್ಯಾಪಿಸಿತ್ತು. ಈ ರೂಪಾಂತರಕ್ಕೆ ದಕ್ಷಿಣ ಆಫ್ರಿಕಾ 501Y.V2 ಎಂಬ ಹೆಸರು ಇರಿಸಿತ್ತು. ದಕ್ಷಿಣ ಆಫ್ರಿಕಾದಲ್ಲಿ ಕಂಡುಬಂದ ರೂಪಾಂತರ ವೈರಸ್ ಇದುವರೆಗೂ ಇನ್ನೂ ನಾಲ್ಕು ದೇಶಗಳಲ್ಲಿ ಪತ್ತೆಯಾಗಿದೆ.

UK Scientists Says Vaccines May Not Work On South African Coronavirus Variant

ಬ್ರಿಟನ್‌ನಲ್ಲಿ ಕಂಡುಬಂದ ರೂಪಾಂತರ ವೈರಸ್‌ಗೂ ದಕ್ಷಿಣ ಆಫ್ರಿಕಾದಲ್ಲಿನ ರೂಪಾಂತರಕ್ಕೂ ವ್ಯತ್ಯಾಸವಿದೆ. ಹೀಗಾಗಿ ಬ್ರಿಟನ್‌ನಲ್ಲಿನ ರೂಪಾಂತರಕ್ಕೆ ಲಸಿಕೆ ಪರಿಣಾಮಕಾರಿಯಾಗುವಂತೆ ದಕ್ಷಿಣ ಆಫ್ರಿಕಾದಲ್ಲಿ ಕೂಡ ಸಫಲವಾಗುವುದು ಕಷ್ಟ ಎನ್ನುವುದು ಚಿಂತೆಗೀಡುಮಾಡಿದೆ.

ವೈರಸ್ ರೂಪಾಂತರ: ಲಸಿಕೆಗಳ ಪರಿವರ್ತನೆಗೆ ನಿಮಿಷಗಳು ಸಾಕು ವೈರಸ್ ರೂಪಾಂತರ: ಲಸಿಕೆಗಳ ಪರಿವರ್ತನೆಗೆ ನಿಮಿಷಗಳು ಸಾಕು

ದಕ್ಷಿಣ ಆಫ್ರಿಕಾದಲ್ಲಿನ ಹೊಸ ತಳಿಯು ಹಲವು ರೂಪಾಂತರಗಳನ್ನು ಹೊಂದಿದ್ದು, ವೈರಸ್‌ಗಳು ಮನುಷ್ಯನ ಕೋಶಗಳಿಗೆ ಹಾನಿ ಮಾಡುವಷ್ಟು ಪ್ರಬಲವಾಗಿದೆ. ಹಾಗೆಯೇ ವೈರಸ್‌ಗಳು ದೇಹದ ಪೂರ್ತಿ ವ್ಯಾಪಿಸಲು ಪ್ರಯತ್ನಿಸುತ್ತದೆ. ಇದರಿಂದ ಅದು ಹರಡುವ ಅಪಾಯ ಕೂಡ ಹೆಚ್ಚು ಎನ್ನಲಾಗಿದೆ.

English summary
UK scientists are worried that the available vaccines will not work on a new variant of coronavirus found in South Africa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X