ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಕೆಯಲ್ಲಿ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ ಮತ್ತಷ್ಟು ಏರಿಕೆ

|
Google Oneindia Kannada News

ಲಂಡನ್, ಡಿಸೆಂಬರ್ 20: ಯುಕೆಯಲ್ಲಿ ಓಮಿಕ್ರಾನ್ ಸೋಂಕಿತ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿದೆ.

ಭಾನುವಾರ 12,133 ಪ್ರಕರಣಗಳು ಪತ್ತೆಯಾಗಿದ್ದವು, ಇಲ್ಲಿಯವರೆಗಿನ ಅತಿ ಹೆಚ್ಚು ಪ್ರಕರಣ ಇದಾಗಿದೆ. ಸಧ್ಯಕ್ಕೆ ಯುಕೆಯಲ್ಲಿ 37,101 ಮಂದಿ ಓಮಿಕ್ರಾನ್ ಸೋಂಕಿತರಿದ್ದಾರೆ.

ವಿಶ್ವದ ಮೊದಲ ಓಮಿಕ್ರಾನ್‌ ಸಾವು ಪ್ರಕರಣ ಯುಕೆಯಲ್ಲಿ ದಾಖಲುವಿಶ್ವದ ಮೊದಲ ಓಮಿಕ್ರಾನ್‌ ಸಾವು ಪ್ರಕರಣ ಯುಕೆಯಲ್ಲಿ ದಾಖಲು

ಯುಕೆಯಲ್ಲಿ 82,886 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ, ಇದುವರೆಗೂ ಒಟ್ಟು 11,361,387 ಮಂದಿ ಕೊರೊನಾ ಸೋಂಕಿತರಿದ್ದಾರೆ. ಶನಿವಾರ 90,418 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದರು, ವಾರಾಂತ್ಯದಲ್ಲಿ ಸೋಂಕಿನ ಪ್ರಮಾಣ ಸ್ವಲ್ಪ ಕಡಿಮೆಯಾಗಿತ್ತು. ಶುಕ್ರವಾರ 93,045 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದರು.

UK Records Biggest Daily Jump Of Omicron Cases

ಕ್ರಿಸ್‌ಮಸ್‌ಗೂ ಮುನ್ನ ಕೊರೊನಾ ಸೋಂಕು ಹೆಚ್ಚಳ: ಸಚಿವ ಸಾಜಿದ್ ಜಾವಿದ್ ನೀಡಿರುವ ಮಾಹಿತಿ ಪ್ರಕಾರ, ಓಮಿಕ್ರಾನ್ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಕ್ರಿಸ್‌ಮಸ್ ಆಚರಣೆಗೆ ಕೆಲವು ನಿರ್ಬಂಧಗಳನ್ನು ಹಾಕಲಾಗುತ್ತಿದೆ.

ಯುಕೆಯಿಂದ ಬರುವವರಿಗೆ ಜರ್ಮನಿ ನಿರ್ಬಂಧ: ಬ್ರಿಟನ್‌ನಲ್ಲಿ ಓಮಿಕ್ರಾನ್ ಸೋಂಕು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಯುಕೆಯಿಂದ ಬರುವ ಪ್ರಯಾಣಿಕರಿಗೆ ಜರ್ಮನಿ ನಿರ್ಬಂಧ ಹೇರಿದೆ. ಒಂದೊಮ್ಮೆ ಯುಕೆಯಿಂದ ಜರ್ಮನಿಗೆ ಬಂದರೆ 14 ದಿನ ಕ್ವಾರಂಟೈನ್‌ನಲ್ಲಿರಲು ತಿಳಿಸಲಾಗಿದೆ.

ಕೊರೊನಾದ ಹೊಸ ರೂಪಾಂತರ ಓಮಿಕ್ರಾಸ್​​ ವೈರಸ್​​ ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಪತ್ತೆಯಾಗಿ ಆತಂಕ ಮೂಡಿಸಿರುವ ಬೆನ್ನಲ್ಲೇ, ಅಘಾತಕಾರಿ ಸುದ್ದಿ ಹೊರ ಬಿದ್ದಿದೆ. ಓಮಿಕ್ರಾನ್​​ಗೆ ಮೊದಲ ಬಲಿಯಾಗಿದೆ. ಓಮಿಕ್ರಾನ್​​ ಸೋಂಕಿಗೆ ತುತ್ತಾಗಿದ್ದ ಬ್ರಿಟನ್​ನ ವ್ಯಕ್ತಿ ಮೃತಪಟ್ಟಿದ್ದಾರೆ.

ಓಮಿಕ್ರಾನ್ ಸೋಂಕಿಗೆ ಒಳಗಾದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ ಅವರೇ ದೃಢಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ದೇಶದಲ್ಲಿ ರೂಪಾಂತರದ ಓಮಿಕ್ರಾನ್​​ ವಿರುದ್ಧ ಮಹತ್ವಾಕಾಂಕ್ಷೆಯ ಬೂಸ್ಟರ್ ಲಸಿಕೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ ಎಂದೂ ಇದೇ ವೇಳೆ ಜಾನ್ಸನ್​ ಘೋಷಿಸಿದರು.

ಲಸಿಕಾ ಕೇಂದ್ರವೊಂದಕ್ಕೆ ಭೇಟಿ ನೀಡಿದ್ದ ವೇಳೆ ಮಾತನಾಡಿದ ಪ್ರಧಾನಿ ಬೋರಿಸ್,​ ದುಃಖಕರ ವಿಷಯ ಬ್ರಿಟನ್​ನಲ್ಲಿ ಸಂಭವಿಸಿದೆ. Omicronಗೆ ತುತ್ತಾಗಿದ್ದ ರೋಗಿಯು ಸಾವನ್ನಪ್ಪಿದ್ದಾರೆ.

ಆದರೂ ಹೊಸ ರೂಪಾಂತರಿ ಹೆಚ್ಚು ಅಪಾಯಕಾರಿ ಎಂದು ನಾನು ಭಾವಿಸೋದಿಲ್ಲ, ಸೌಮ್ಯ ಲಕ್ಷಗಳೇ ಇವೆ. ಓಮಿಕ್ರಾನ್​​ ಹೆಚ್ಚು ಜನರಿಗೆ ಹಬ್ಬದಂತೆ ತಡೆಯುವ ನಿಟ್ಟಿನಲ್ಲಿ ಎಲ್ಲರೂ ಬೂಸ್ಟರ್​ ಡೋಸ್​ಗೆ ಮುಂದಾಗಬೇಕು ಎಂದು ಬ್ರಿಟನ್​ ಪ್ರಜೆಗಳಲ್ಲಿ ಮನವಿ ಮಾಡಿಕೊಂಡರು. ಭಾರತದಲ್ಲಿ ಈವರೆಗೆ 38 ಮಂದಿಯಲ್ಲಿ ಓಮಿಕ್ರಾನ್​ ರೂಪಾಂತರಿ ಇರುವುದು ದೃಢಪಟ್ಟಿದೆ.

ಓಮಿಕ್ರಾನ್ ಎಷ್ಟು ವೇಗವಾಗಿ ಹರಡುತ್ತಿದೆ..? ದಕ್ಷಿಣ ಆಫ್ರಿಕಾದಲ್ಲಿ ಓಮಿಕ್ರಾನ್‌ನ ತ್ವರಿತ ಏರಿಕೆಯು ಸಂಶೋಧಕರನ್ನು ಹೆಚ್ಚು ಚಿಂತೆ ಮಾಡುತ್ತದೆ. ಏಕೆಂದರೆ ಈ ರೂಪಾಂತರವು ಬೇರೆಡೆ COVID-19 ಪ್ರಕರಣಗಳಲ್ಲಿ ಸ್ಫೋಟಕ ಹೆಚ್ಚಳ ಉಂಟುಮಾಡಬಹುದು ಎಂದು ಸೂಚಿಸುತ್ತದೆ. ಡಿಸೆಂಬರ್ 1ರಂದು, ದಕ್ಷಿಣ ಆಫ್ರಿಕಾದಲ್ಲಿ 8,561 ಪ್ರಕರಣಗಳು ದಾಖಲಾಗಿವೆ.

ಇದು, ನವೆಂಬರ್ 26ರಂದು 3,402 ಮತ್ತು ನವೆಂಬರ್ ಮಧ್ಯದಲ್ಲಿ ದಿನಕ್ಕೆ ಹಲವಾರು ನೂರು ಪ್ರಕರಣಗಳು ವರದಿಯಾಗಿದ್ದಕ್ಕಿಂತ ಹಲವು ಪಟ್ಟು ಹೆಚ್ಚು. ಹೆಚ್ಚಿನ ಬೆಳವಣಿಗೆಯು ಜೋಹಾನ್ಸ್‌ಬರ್ಗ್‌ನ ನೆಲೆಯಾದ ಗೌಟೆಂಗ್ ಪ್ರಾಂತ್ಯದಲ್ಲಿ ಸಂಭವಿಸಿದೆ.

ಓಮಿಕ್ರಾನ್‌ ರೋಗಿಗಳು ತೀವ್ರ ಸುಸ್ತು, ಸೌಮ್ಯವಾದ ಸ್ನಾಯು ನೋವು, ಗಂಟಲು ಕೆರೆತ ಮತ್ತು ಒಣ ಕೆಮ್ಮನ್ನು ವರದಿ ಮಾಡಿದ್ದಾರೆ ಎಂದು ವೈದ್ಯೆ AFPಗೆ ತಿಳಿಸಿದ್ದಾರೆ. ಕೆಲವರು ಮಾತ್ರ ಸ್ವಲ್ಪ ಹೆಚ್ಚಿನ ತಾಪಮಾನ ಹೊಂದಿದ್ದರು ಎಂದೂ ಮಾಹಿತಿ ನೀಡಿದ್ದಾರೆ.

ಹೆಚ್ಚಿನ ರೋಗಿಗಳು ಲಕ್ಷಣ ರಹಿತರಾಗಿದ್ದಾರೆ. ವರದಿಗಳ ಪ್ರಕಾರ, ಇತರ ದೇಶಗಳಲ್ಲಿ ಈ ಹೊಸ ರೂಪಾಂತರದೊಂದಿಗೆ ಕಂಡುಬಂದ ರೋಗಿಗಳು ತೀವ್ರ ಅನಾರೋಗ್ಯವನ್ನು ವರದಿ ಮಾಡಿಲ್ಲ ಮತ್ತು ಆಸ್ಪತ್ರೆಗೆ ದಾಖಲಾಗದೆ ಚೇತರಿಸಿಕೊಂಡಿದ್ದಾರೆ. ಗಂಟಲು ಕೆರೆತ, ವಿಪರೀತ ಸುಸ್ತು, ಲಘು ಜ್ವರ ಇವು ಈ ಓಮಿಕ್ರಾನ್​​ನ ಕೆಲವು ಲಕ್ಷಣಗಳಾಗಿವೆ. ದೇಶದಲ್ಲಿ ಪತ್ತೆಯಾದ ಒಮಿಕ್ರಾನ್ ಕೊರೋನಾ ವೈರಸ್ ರೂಪಾಂತರದ ಒಟ್ಟು 19 ಪ್ರಕರಣಗಳಲ್ಲಿ 16 ಲಕ್ಷಣರಹಿತವಾಗಿವೆ.

English summary
The UK Health Security Agency on Sunday reported 12,133 new Omicron cases, marking the biggest daily increase since the COVID-19 variant was detected in the country. This brings the total number of Omicron cases in the United Kingdom to 37,101.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X