ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರಿಟನ್ ಪ್ರಧಾನಿ ಚೇತರಿಕೆ, ಸೋಮವಾರದಿಂದ ಕರ್ತವ್ಯಕ್ಕೆ ಹಾಜರ್

|
Google Oneindia Kannada News

ಲಂಡನ್, ಏಪ್ರಿಲ್ 24: ಕೊರೊನಾ ಸೋಂಕಿಗೆ ಒಳಗಾಗಿದ್ದ ಬ್ರಿಟನ್ ಪ್ರಧಾನಿ ಬೊರೀಸ್ ಜಾನ್ಸನ್ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ ಎಂದು ದಿ ಟೆಲಿಗ್ರಾಫ್ ವೆಬ್‌ ಸೈಟ್ ವರದಿ ಮಾಡಿದೆ.

ಕೊವಿಡ್ ಸೋಂಕಿನಿಂದ ಯುಕೆ ಪ್ರಧಾನಿ ಹೊರಬಂದಿದ್ದು, ಸೋಮವಾರದಿಂದ ತಮ್ಮ ಕರ್ತವ್ಯಕ್ಕೆ ಹಿಂತಿರುಗಲಿದ್ದಾರೆ ಎಂದು ತಿಳಿದು ಬಂದಿದೆ.

ಅಮೆರಿಕ ಕಥೆ ಬೇಡ, ನಾವು WHOಗೆ ಸಪೋರ್ಟ್ ಮಾಡ್ತೀವಿ - ಯುಕೆಅಮೆರಿಕ ಕಥೆ ಬೇಡ, ನಾವು WHOಗೆ ಸಪೋರ್ಟ್ ಮಾಡ್ತೀವಿ - ಯುಕೆ

ಕಳೆದ ತಿಂಗಳಲ್ಲಿ ಕೊರೊನಾ ಸೋಂಕಿಗೆ ತುತ್ತಾಗಿದ್ದ ಜಾನ್ಸನ್ ಎರಡು ವಾರಕ್ಕೂ ಹೆಚ್ಚು ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಐಸೋಲೇಶನ್ ವಾರ್ಡ್‌ನಲ್ಲಿ ಚಿಕಿತ್ಸೆಗೆ ಒಳಗಾಗಿದ್ದ ಜಾನ್ಸನ್, ಐಸಿಯುಗೂ ದಾಖಲಾಗಿದ್ದರು. ಬಳಿಕ, ನಿಧಾನವಾಗಿ ಚೇತರಿಸಿಕೊಂಡು, ಈ ತಿಂಗಳ ಆರಂಭದಲ್ಲಿ ಡಿಸ್ಚಾರ್ಜ್ ಆಗಿದ್ದರು.

UK PM Ready To Start Work From Monday

ಆಸ್ಪತ್ರೆಯಿಂದ ಮನೆಗೆ ಹೋಗಿದ್ದ ಬ್ರಿಟನ್ ಪ್ರಧಾನಿ, ಈಗ ಪೂರ್ತಿ ಗುಣಮುಖರಾಗಿದ್ದು, ಮತ್ತೆ ಕೆಲಸ ಆರಂಭಿಸಲು ಸಜ್ಜಾಗಿದ್ದಾರೆ. ಯುಕೆಯಲ್ಲಿ ಕೊರೊನಾ ಹರಡುವಿಕೆ ವಿಚಾರದಲ್ಲಿ ಜಾನ್ಸನ್ ನಿಧಾನವಾಗಿ ಎಚ್ಚೆತ್ತುಕೊಂಡರು ಎಂಬ ಕಾರಣಕ್ಕೆ, ವಿರೋಧ ಪಕ್ಷಗಳು ಅವರನ್ನು ತೀವ್ರವಾಗಿ ಟೀಕಿಸಿದ್ದರು.

ಐಸಿಯುನಿಂದ ಹೊರಬಂದ ಕೊವಿಡ್ ಸೋಂಕಿತ ಬ್ರಿಟನ್ ಪ್ರಧಾನಿಐಸಿಯುನಿಂದ ಹೊರಬಂದ ಕೊವಿಡ್ ಸೋಂಕಿತ ಬ್ರಿಟನ್ ಪ್ರಧಾನಿ

ಯುಕೆಯಲ್ಲಿ ಈವರೆಗೂ 1,38,078 ಜನರಿಗೆ ಕೊರೊನಾ ಸೋಂಕು ತಗುಲಿದೆ. 18,738 ಜನರು ಕೊವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ.

English summary
UK Prime minister Boris Johnson cured from COVID 19 and he ready to start work from Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X