ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಸೋಂಕಿತ ಯುಕೆ ಪ್ರಧಾನಿ ಬೋರಿಸ್ ಜಾನ್ಸ್‌ನ್‌ ICUಗೆ ಶಿಫ್ಟ್

|
Google Oneindia Kannada News

ಲಂಡನ್, ಏಪ್ರಿಲ್ 7: ಬ್ರಿಟನ್ ಪ್ರಧಾನಿ (ಯುಕೆ) ಬೋರಿಸ್ ಜಾನ್ಸ್‌ನ್‌ಗೆ ಕೊರೊನಾ ವೈರಸ್ ಸೋಂಕು (ಕೊವಿಡ್ 19) ತಗುಲಿರುವುದು ದೃಢಪಟ್ಟಿತ್ತು. ಹಾಗಾಗಿ ಅವರನ್ನು ಆಸ್ಪತ್ರೆಯಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.

Recommended Video

RCB ಸ್ಪಿನ್ನರ್ ಚಾಹಲ್ ಈಗ ಮನೆಯಲ್ಲಿ ಏನು ಮಾಡುತ್ತಿದ್ದಾರೆ ? | Oneindia Kannada

ಬೋರಿಸ್ ಜಾನ್ಸ್‌ನ್‌ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತಿದೆ ಎಂದು ಹೇಳಲಾಗಿತ್ತು. ಖುದ್ದು ಪ್ರಧಾನಿ ಬೋರಿಸ್ ಜಾನ್ಸ್‌ನ್‌ ಟ್ವಿಟ್ಟರ್ ಮೂಲಕ 'ನಾನು ಆರೋಗ್ಯವಾಗಿದ್ದೇನೆ, ಸ್ವಲ್ಪ ದಿನ ಕ್ವಾರೆಂಟೈನ್‌ನಲ್ಲಿ ಇರಲು ವೈದ್ಯರು ಸೂಚಿಸಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಸರ್ಕಾರ ಮುನ್ನಡೆಸುತ್ತೇನೆ' ಎಂದು ಹೇಳಿದ್ದರು.

ಕೊರೊನಾ ಅಂಟಿಸಿಕೊಂಡಿದ್ದ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸ್‌ನ್ ಚೇತರಿಕೆಕೊರೊನಾ ಅಂಟಿಸಿಕೊಂಡಿದ್ದ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸ್‌ನ್ ಚೇತರಿಕೆ

ಆದ್ರೀಗ, ದಿಢೀರ್ ಅಂತ ಬೋರಿಸ್ ಜಾನ್ಸ್‌ನ್‌ ಅವರನ್ನು ಐಸಿಯು ವಾರ್ಡ್‌ ಗೆ ಶಿಫ್ಟ್ ಮಾಡಲಾಗಿದೆ ಎಂಬ ವಿಚಾರ ಬಹಿರಂಗವಾಗಿದೆ. ಸೋಮವಾರ ಬೋರಿಸ್ ಜಾನ್ಸ್‌ನ್‌ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸ ಕಂಡು ಬಂದ ಹಿನ್ನೆಲೆ, ವೈದ್ಯರ ಸಲಹೆಯಂತೆ ICUಗೆ ಶಿಫ್ಟ್ ಮಾಡಲಾಗಿದೆ.

UK PM Boris Johnson Moved To ICU

ಈ ಕುರಿತು ಪ್ರಧಾನಿ ಕಚೇರಿಯಿಂದ ಹೇಳಿಕೆ ಬಿಡುಗಡೆ ಮಾಡಲಾಗಿದ್ದು, ಸೋಮವಾರ ಮಧ್ಯಾಹ್ನದ ಮೇಲೆ ಬೋರಿಸ್ ಜಾನ್ಸ್‌ನ್‌ ಅವರ ಆರೋಗ್ಯ ಹದೆಗೆಟ್ಟಿತು. ವೈದ್ಯರ ಸಲಹೆ ಮೆರೆಗೆ ಅವರನ್ನು ಐಸಿಯುಗೆ ಶಿಫ್ಟ್ ಮಾಡಲಾಗಿದೆ'' ಎಂದು ಮಾಹಿತಿ ನೀಡಿದ್ದಾರೆ.

ಇನ್ನು ಡೌನಿಂಗ್ ಸೆಂಟ್ ಈ ಬಗ್ಗೆ ಮಾತನಾಡಿದ್ದು, ಬೋರಿಸ್ ಜಾನ್ಸನ್‌ ಅವರ ಪ್ರಜ್ಞೆ ಹೊಂದಿದ್ದಾರೆ. ಸದ್ಯಕ್ಕೆ ಅವರಿಗೆ ವೆಂಟಿಲೇಟರ್ ಅವಶ್ಯಕತೆ ಇಲ್ಲ. ಐಸಿಯು ಅಗತ್ಯವೆನಿಸಿದ ಕಾರಣ ಅವರನ್ನು ಶಿಫ್ಟ್ ಮಾಡಲಾಗಿದೆ' ಎಂದಿದ್ದಾರೆ.

ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸ್‌ನ್‌ಗೂ ಕೊರೊನಾ ಅಟ್ಯಾಕ್..!ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸ್‌ನ್‌ಗೂ ಕೊರೊನಾ ಅಟ್ಯಾಕ್..!

ಅಂದ್ಹಾಗೆ, ಯುಕೆ ಪ್ರಧಾನಿಗೆ ಕೊರೊನಾ ಸೋಂಕು ತಗುಲಿರುವುದು ಮಾರ್ಚ್ 27 ರಂದು ಖಚಿತವಾಗಿತ್ತು. ಅಲ್ಲಿಂದ ಇಲ್ಲಿಯವರೆಗೂ ಐಸೋಲೇಶನ್ ವಾರ್ಡ್‌ನಲ್ಲಿದ್ದಾರೆ. ಒಂದು ಹಂತಕ್ಕೆ ಚೇತರಿಕೆ ಕಂಡಿದ್ದ ಬ್ರಿಟನ್ ಪ್ರಧಾನಿಯನ್ನು, ಮತ್ತೆ ಐಸಿಯುಗೆ ಶಿಫ್ಟ್ ಮಾಡಿರುವುದು ಅನುಮಾನಕ್ಕೆ ಕಾರಣವಾಗಿದೆ.

English summary
United kingdom prime minister Boris Johnson moved to ICU after coronavirus symptoms worsen.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X