ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ರಂಪ್ ಹಾಗೂ ಬೈಡನ್ ಪೈಕಿ ಯುಕೆಗೆ ಯಾರು ಹಿತವರು?

|
Google Oneindia Kannada News

ಲಂಡನ್, ನ .4: ಅಮೆರಿಕ ಚುನಾವಣೆಯ ಅಂತಿಮ ಹಂತದ ಮತದಾನ ನಡೆದಿದ್ದು, ವಿಶ್ವದೆಲ್ಲೆಡೆ ಸಮೀಕ್ಷೆ, ಬೆಟ್ಟಿಂಗ್ ನಡೆದಿದೆ. ಬ್ರಿಟಿಷ್ ಬುಕ್ಕಿಯೊಬ್ಬ ಟ್ರಂಪ್ ಗೆದ್ದೇ ಗೆಲ್ತಾರೆ ಅಂತಾ ಸುಮಾರು 5 ಮಿಲಿಯನ್ ಡಾಲರ್ ಬೆಟ್ ಕಟ್ಟಿರುವ ಸುದ್ದಿ ಓದಿರಬಹುದು. ಈಗ ಯುಕೆಯ ಸಮೀಕ್ಷೆಯೊಂದು ಟ್ರಂಪ್ ಹಾಗೂ ಬೈಡನ್ ಪೈಕಿ ಯುಕೆಗೆ ಯಾರು ಹಿತವರು ಎಂಬ ಪ್ರಶ್ನೆಗೆ ಉತ್ತರ ಕಂಡುಕೊಂಡಿದೆ.

ಯುಎಸ್ ಚುನಾವಣೆ ದಿನ ಪನೀರ್ ಟಿಕ್ಕಾ ಟ್ರೆಂಡ್ ಆಗಿದ್ದೇಕೆ? ಯುಎಸ್ ಚುನಾವಣೆ ದಿನ ಪನೀರ್ ಟಿಕ್ಕಾ ಟ್ರೆಂಡ್ ಆಗಿದ್ದೇಕೆ?

ಯುನೈಟೆಡ್ ಕಿಂಗ್ಡಮ್ ಹಿತದೃಷ್ಟಿಯಿಂದ ಅಮೆರಿಕದ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗಿಂತ ಡೆಮೊಕ್ರಾಟಿಕ್ ಅಭ್ಯರ್ಥಿ ಜೋ ಬೈಡನ್ ಅವರು ಈ ಬಾರಿ ಚುನಾವಣೆಯಲ್ಲಿ ಗೆದ್ದರೆ ಒಳ್ಳೆಯದು ಎಂದು ಯುಕೆ ಜನತೆ ಅಭಿಪ್ರಾಯ ತಿಳಿಸಿದ್ದಾರೆ.

YouGov ಸಮೀಕ್ಷೆ ಸಂಸ್ಥೆ ಆನ್ ಲೈನ್ ಅಭಿಪ್ರಾಯ ಸಂಗ್ರಹಿಸಿದ್ದು, ಲಂಡನ್ ಹಾಗೂ ವಾಷಿಂಗ್ಟನ್ ನಡುವೆ ಉತ್ತಮ ವ್ಯಾಪಾರ ವಹಿವಾಟು ಒಪ್ಪಂದ ಏರ್ಪಡಬೇಕಾದರೆ ಬೈಡನ್ ಗೆಲ್ಲುವುದು ಮುಖ್ಯ ಎಂದು ಹೆಚ್ಚು ಮಂದಿ ಮತ ಹಾಕಿದ್ದಾರೆ. ಯುರೋಪಿಯನ್ ಯೂನಿಯನ್ ನಿಂದ ಹೊರ ಬರಲು ಬ್ರಿಟನ್ ಸಿದ್ಧವಾಗುತ್ತಿರುವ ಸಂದರ್ಭದಲ್ಲಿ ಅಮೆರಿಕದಲ್ಲಿ ಸುಭದ್ರ ಸರ್ಕಾರ ಸ್ಥಾಪನೆಗೊಂಡು ಬೆಂಬಲ ಪಡೆಯುವುದು ಮುಖ್ಯ ಎಂದಿದ್ದಾರೆ.

UK people prefer Biden: YouGov Research

YouGov ಅಂಕಿ ಅಂಶದಂತೆ 10ರಲ್ಲಿ 6 ಮಂದಿ ಸುಮಾರು 59% ಬ್ರಿಟನ್ನರು ಯುಎಸ್ ಚುನಾವಣೆಯಿಂದ ಯುರೋಪ್, ಬ್ರಿಟನ್ ಮೇಲೆ ಪರಿಣಾಮ ಉಂಟಾಗುತ್ತದೆ ಎಂದು ನಂಬಿದ್ದಾರೆ.

ಟ್ರಂಪ್ ಗೆಲುವಿಗೆ ಕೋಟಿ ಬೆಟ್ಟಿಂಗ್ ಕಟ್ಟಿದ ಗ್ಯಾಂಬ್ಲರ್..! ಟ್ರಂಪ್ ಗೆಲುವಿಗೆ ಕೋಟಿ ಬೆಟ್ಟಿಂಗ್ ಕಟ್ಟಿದ ಗ್ಯಾಂಬ್ಲರ್..!

ಒಟ್ಟಾರೆ ಸಾರ್ವಜನಿಕ ಅಭಿಪ್ರಾಯದಂತೆ ಶೇ 61ರಷ್ಟು ಮಂದಿ ಬೈಡನ್ ಪರ ಮತ ಹಾಕಿದ್ದರೆ, ಟ್ರಂಪ್ ಪರ 13% ಮತ ಬಿದ್ದಿವೆ. ಇದೇ ರೀತಿ ಬ್ರಿಟನ್ನಿನ ಪಕ್ಷಗಳ ಪೈಕಿ ಇದೇ ಪ್ರಶ್ನೆಗೆ ಬಂದ ಅಭಿಪ್ರಾಯದಂತೆ ಕನ್ಸರ್ವೇಟಿವ್- ಬೈಡನ್ 45%, ಟ್ರಂಪ್ 26%, ಲೇಬರ್ ಪಾರ್ಟಿ-ಬೈಡನ್ 82%, ಟ್ರಂಪ್ 2% ಬಂದಿದೆ.

English summary
United Kingdom citizens are anxious over the US presidential election and according to YouGov polling company UK prople prefer Biden over Trump.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X