ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರೆಕ್ಸಿಟ್ ಮಸೂದೆ ಅಂಗೀಕಾರ, ಬೊರಿಸ್ ಗೆ ಐತಿಹಾಸಿಕ ಗೆಲುವು

|
Google Oneindia Kannada News

ಲಂಡನ್, ಜನವರಿ 10: ಸತತವಾಗಿ ಮೂರು ದಿನಗಳ ಚರ್ಚೆ ನಂತರ ಮಂಡನೆಯಾದ ಬ್ರೆಕ್ಸಿಟ್ ಮಸೂದೆಯನ್ನು ಬ್ರಿಟನ್ನಿನ ಸಂಸತ್ತು ಅಂಗೀಕರಿಸಿದೆ. ಈ ಮೂಲಕ ಐರೋಪ್ಯ ಒಕ್ಕೂಟದಿಂದ ಹೊರಬರುವ ಪ್ರಧಾನಿ ಬೊರಿಸ್ ಜಾನ್ಸನ್ ಬ್ರೆಕ್ಸಿಟ್ ನಿಲುವಿಗೆ ಐತಿಹಾಸಿಕ ಗೆಲುವು ಲಭಿಸಿದೆ.

ಮಸೂದೆ ಕುರಿತಂತೆ ನಡೆದ ಮತದಾನದಲ್ಲಿ 330ರಲ್ಲಿ 231 ಮತಗಳು ಮಸೂದೆಯ ಪರವಾಗಿ ಚಲಾವಣೆಯಾಗಿವೆ. ಐರೋಪ್ಯ ಒಕ್ಕೂಟದಿಂದ ಹೊರಬರುವ ಒಪ್ಪಂದಕ್ಕೆ ಬಲ ಸಿಕ್ಕಿದ್ದು, ಜನವರಿ 31ಕ್ಕೆ ಜಾರಿಯಾಗಲಿದೆ. ರಾಣಿ ಎರಡನೇ ಎಲಿಜಬೆತ್ ಅಂಕಿತ ಬೀಳುತ್ತಿದ್ದಂತೆ ಕಾನೂನಾಗಿ ಜಾರಿಗೆ ಬರಲಿದೆ.

ಚರ್ಚೆ: ಭಾರತದ ಜತೆ ನಂಟು ಗಟ್ಟಿ ಮಾಡಿಕೊಳ್ಳಲು ತಪ್ಪಿಸಿಕೊಂಡಿತೆ ಯುಕೆ? ಚರ್ಚೆ: ಭಾರತದ ಜತೆ ನಂಟು ಗಟ್ಟಿ ಮಾಡಿಕೊಳ್ಳಲು ತಪ್ಪಿಸಿಕೊಂಡಿತೆ ಯುಕೆ?

ಬ್ರಿಟನ್‌ನಲ್ಲಿ ಐದು ವರ್ಷಗಳಲ್ಲಿ ಮೂರನೇ ಸಾರ್ವತ್ರಿಕ ಚುನಾವಣೆ ನಡೆದಿದೆ. ಬ್ರೆಕ್ಸಿಟ್‌ ಕಾರಣಕ್ಕಾಗಿಯೇ ಕನ್ಸರ್ವೇಟಿವ್‌ ಪಕ್ಷದ ನಾಯಕ, ಪ್ರಧಾನಿ ಬೋರಿಸ್‌ ಜಾನ್ಸನ್‌ ಅವಧಿಗೂ ಮುನ್ನವೇ ಚುನಾವಣೆಗೆ ಹೋಗಿದ್ದನ್ನು ಇಲ್ಲಿ ಸ್ಮರಿಸಬಹುದು. ಈ ಚುನಾವಣೆಯಲ್ಲಿ ಕನ್ಸರ್ವೇಟಿವ್‌ ಪಕ್ಷ ಶೇ 40ರಷ್ಟು ಮತಗಳನ್ನು ಗಳಿಸಿ ಅಧಿಕಾರಕ್ಕೆ ಬಂದಿದ್ದಲ್ಲದೆ, ಬ್ರೆಕ್ಸಿಟ್ ಮಸೂದೆ ಸವಾಲನ್ನು ಗೆದ್ದುಕೊಂಡಿದೆ.

UK Parliament approves Boris Johnsons Brexit deal

2016ರಲ್ಲಿ ಒಕ್ಕೂಟಲ್ಲಿ ಉಳಿದುಕೊಳ್ಳುವಂತೆ ಶೇ. 48 ಮತಗಳು ಬಿದ್ದರೆ, ಹೊರಕ್ಕೆ ಹೋಗಲು ತೊಂದರೆ ಇಲ್ಲ ಎಂದು ಶೇ. 52 ಮತಗಳು ಬಿದ್ದವು. 28 ರಾಷ್ಟ್ರಗಳನ್ನೊಳಗೊಂಡ ಯೂರೋಪಿಯನ್ ಒಕ್ಕೂಟದಿಂದ ಬ್ರಿಟನ್ ಇದಿಗ ಅಧಿಕೃತವಾಗಿ ಹೊರಗುಳಿಯುತ್ತಿರುವ ಮೊದಲ ದೇಶ ಎಂಬ ಹಣೆಪಟ್ಟಿ ಕಟ್ಟಿಕೊಂಡಿದೆ.

English summary
Prime Minister Boris Johnson's Brexit Bill was endorsed by the House of Commons on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X