ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾಗೆ ಮದ್ದು ಕಂಡುಹಿಡಿಯಿತೇ ಬ್ರಿಟನ್, ಮನುಷ್ಯನ ಮೇಲೆ ಪ್ರಯೋಗ!

|
Google Oneindia Kannada News

ಲಂಡನ್, ಏಪ್ರಿಲ್ 22: ಸಾಂಕ್ರಮಿಕ ರೋಗ ಕೊರೊನಾ ವೈರಸ್‌ಗೆ ಇದುವರೆಗೂ ಯಾವ ದೇಶಗಳು ಔಷಧ ಕಂಡು ಹಿಡಿದಿಲ್ಲ. ಜಗತ್ತಿನಾದ್ಯಂತ ಕೋಟ್ಯಾಂತರ ವಿಜ್ಞಾನಿಗಳು ರಾತ್ರಿ-ಹಗಲು ಸಂಶೋಧನೆ ಮಾಡಿ, ಕೊವಿಡ್ ಗೆ ಪರಿಹಾರ ಹುಡುಕುತ್ತಿದ್ದಾರೆ.

ಇದೀಗ, ಬ್ರಿಟನ್ ಸರ್ಕಾರ ಕೊರೊನಾಗೆ ಸಂಭಾವ್ಯ ಔಷಧ ಕಂಡುಹಿಡಿದಿದ್ದು, ಈ ವಾರ ಅದನ್ನು ಮನುಷ್ಯನ ಮೇಲೆ ಪ್ರಯೋಗ ಮಾಡಲಿದೆಯಂತೆ. ಖುದ್ದು ಆರೋಗ್ಯ ಸಚಿವರೇ ಈ ಕುರಿತು ಮಾಹಿತಿ ನೀಡಿದ್ದು, ಜನರಿಗೆ ಭರವಸೆ ಹುಟ್ಟಿಕೊಂಡಿದೆ.

ವಾವ್: ಸಂಭಾವ್ಯ ಕೊರೊನಾ ವೈರಸ್ ಲಸಿಕೆ ಮೊದಲ ಹಂತದಲ್ಲಿ ಪಾಸ್.!ವಾವ್: ಸಂಭಾವ್ಯ ಕೊರೊನಾ ವೈರಸ್ ಲಸಿಕೆ ಮೊದಲ ಹಂತದಲ್ಲಿ ಪಾಸ್.!

''ಕೊರೊನಾ ವೈರಸ್‌ಗೆ ಸಂಬಂಧಪಟ್ಟಂತೆ ಸಂಭಾವ್ಯ ಔಷಧವನ್ನು ಸಿದ್ಧ ಮಾಡಿದ್ದು, ಈ ವಾರದಲ್ಲಿ (ಗುರುವಾರ) ಅದನ್ನು ಜನರ ಮೇಲೆ ಪ್ರಯೋಗ ಮಾಡಲಿದ್ದೇವೆ'' ಎಂದು ಬ್ರಿಟಿಷ್ ಮಂತ್ರಿ ಮ್ಯಾಟ್ ಹ್ಯಾನಿಕ್ ಹೇಳಿದ್ದಾರೆ.

UK Govt To Trial Covid 19 Vaccine On People

'ಸಾಮಾನ್ಯವಾಗಿ ಕೊರೊನಾ ವೈರಸ್‌ಗೆ ಲಸಿಕೆ ಆರಂಭಿಸಲು ಸುಮಾರು 18 ತಿಂಗಳು ಅಥವಾ ಅದಕ್ಕಿಂತ ಹೆಚ್ಚಿನ ಸಾಮಾನ್ಯ ಬೇಕು ಎನ್ನುವುದು ತಜ್ಞರ ಅಭಿಪ್ರಾಯ. ಹಾಗಿದ್ದರೂ, ಪ್ರೊಫೆಸರ್ ಸಾರಾ ಗಿಲ್ಬರ್ಟ್ ನೇತೃತ್ವದ ಆಕ್ಸ್‌ಫರ್ಡ್ ಸಂಶೋಧಕರು, ಸಾಧ್ಯವಾದರೆ ಇದನ್ನು ಸೆಪ್ಟೆಂಬರ್‌ ತಿಂಗಳಿಗೂ ಮುಂಚೆಯೇ ಪ್ರಯೋಗಿಸಬಹುದು' ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಾತನಾಡುತ್ತಾ ಮ್ಯಾಟ್ ಹ್ಯಾನಿಕ್ 'ತನ್ನ ಕ್ಲಿನಿಕಲ್ ಪ್ರಯೋಗಗಳಿಗೆ ಆಕ್ಸ್‌ಫರ್ಡ್ ತಂಡಕ್ಕೆ ಧನಸಹಾಯ ಮಾಡಲು ಸಹಾಯ ಮಾಡಲು 20 ಮಿಲಿಯನ್ ನೀಡುವುದಾಗಿ ಘೋಷಿಸಿದರು, ಇನ್ನು ಲಂಡನ್‌ನ ಇಂಪೀರಿಯಲ್ ಕಾಲೇಜಿನ ಸಂಶೋಧಕರಿಗೆ 22.5 ಮಿಲಿಯನ್ ಪ್ರಕಟಿಸಿದರು.

ಗುಡ್ ನ್ಯೂಸ್: ಕೊರೊನಾ ವೈರಸ್ ಗೆ ಲಸಿಕೆ, ಮನುಷ್ಯರ ಮೇಲೆ ಪ್ರಯೋಗ ಆರಂಭ!ಗುಡ್ ನ್ಯೂಸ್: ಕೊರೊನಾ ವೈರಸ್ ಗೆ ಲಸಿಕೆ, ಮನುಷ್ಯರ ಮೇಲೆ ಪ್ರಯೋಗ ಆರಂಭ!

ಯುಕೆನಲ್ಲಿ ಪ್ರಸ್ತುತ 129,044 ಜನರಿಗೆ ಸೋಂಕು ತಗುಲಿದೆ. 17,337 ಜನರು ಸಾವನ್ನಪ್ಪಿದ್ದಾರೆ. ಜಗತ್ತಿನಾದ್ಯಂತ 177,612 ಜನರು ಈ ಸೋಂಕಿಗೆ ಬಲಿಯಾಗಿದ್ದಾರೆ.

English summary
World pandemic Coronavirus vaccine to be tested in the United Kingdom from Thursday, the government announces.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X