ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನ ಸತ್ತರೂ ಪರವಾಗಿಲ್ವಾ? ನೈಟ್ ಕ್ಲಬ್ ಮುಖ್ಯವಾಯ್ತಾ?

|
Google Oneindia Kannada News

ಲಂಡನ್, ಜುಲೈ 20: ಒಂದ್ಕಡೆ ಕೊರೊನಾ ಸೋಂಕಿಗೆ ಲಕ್ಷ ಲಕ್ಷ ಜನ ಬಲಿಯಾಗಿದ್ದಾರೆ, ಹಾಗೇ ಕೊರೊನಾ ಭೀತಿ ಇನ್ನೂ ಕಡಿಮೆ ಆಗಿಲ್ಲ. ಆದರೆ ಸರ್ಕಾರಕ್ಕೆ ದುಡ್ಡು ಮಾಡುವ ಚಿಂತೆ ಹತ್ತಿದೆಯಾ? ಈ ಕಾರಣಕ್ಕೆ ನೈಟ್ ಕ್ಲಬ್‌ಗಳ ಬಾಗಿಲು ತೆರೆಯೋದಕ್ಕೆ ಸರ್ಕಾರ ಪರ್ಮಿಷನ್ ಕೊಡುತ್ತಿದೆಯಾ? ಇಂತಹದ್ದೊಂದು ಅನುಮಾನ, ಆಕ್ರೋಶ ಬ್ರಿಟನ್ ಜನರಲ್ಲಿ ಸ್ಫೋಟಗೊಂಡಿದೆ.

ಹೌದು ಬ್ರಿಟನ್‌ನಲ್ಲಿ ಕೊರೊನಾ 3 ಅಲೆಗಳ ರೂಪದಲ್ಲಿ ದಾಳಿ ನಡೆಸಿ ಲಕ್ಷ ಲಕ್ಷ ಜನರ ಜೀವ ಬಲಿ ಪಡೆದಿದೆ. ಆದರೆ ಬ್ರಿಟನ್ ಸರ್ಕಾರ ಅವಸರದಲ್ಲೇ ಅನ್‌ಲಾಕ್ ಪ್ರಕ್ರಿಯೆಗೆ ಮುಂದಾಗಿದೆ ಎಂಬ ಆರೋಪ ಕೇಳಿಬಂದಿದೆ.

ಸದ್ಯದ ಮಟ್ಟಿಗೆ ಕೊರೊನಾ 4ನೇ ಅಲೆಯ ಭಯದಲ್ಲಿ ಯುರೋಪ್ ಇದ್ದು, ಬ್ರಿಟನ್ ಕೂಡ ಈ ಆತಂಕದಿಂದ ಹೊರತಾಗಿಲ್ಲ. ಆದರೆ ಇದ್ಯಾವುದನ್ನೂ ಪರಿಗಣಿಸದೆ, ಕೇವಲ ವ್ಯವಹಾರದ ದೃಷ್ಟಿಯಲ್ಲಿ ಅನ್‌ಲಾಕ್‌ಗೆ ಅನುಮತಿ ನೀಡಿರುವ ಆರೋಪ ಕೇಳಿಬಂದಿದೆ.

ಸುಮಾರು 1 ವರ್ಷದ ಬಳಿಕ ಅಲ್ಲಿ ಜನ ನೈಟ್‌ಕ್ಲಬ್‌ಗಳಲ್ಲಿ ಪಾರ್ಟಿ ಮಾಡುತ್ತಿದ್ದಾರೆ. ಆದ್ರೆ ಸರ್ಕಾರದ ಈ ತಪ್ಪು ನಿರ್ಧಾರವೇ ಬ್ರಿಟನ್‌ನಲ್ಲಿ ಮತ್ತೆ ಇನ್ನೊಂದು ಅಲೆ ಅಪ್ಪಳಿಸಲು ಆಹ್ವಾನ ನೀಡುತ್ತಿದೆ ಎಂದು ತಜ್ಞರು ಬೇಸರ ವ್ಯಕ್ತಪಡಿಸಿದ್ದಾರೆ.

ಯಾಕಿಷ್ಟು ಧೈರ್ಯ ಬಂತು..?

ಯಾಕಿಷ್ಟು ಧೈರ್ಯ ಬಂತು..?

ಕೊರೊನಾ ಕೂಪದಲ್ಲಿ ನರಳುತ್ತಿದ್ದ ಬ್ರಿಟನ್‌ನಲ್ಲಿ 2020 ಡಿಸೆಂಬರ್ 8ರಿಂದ ಸಾಮೂಹಿಕ ಲಸಿಕೆ ಕಾರ್ಯಕ್ಕೆ ಚಾಲನೆ ಸಿಕ್ಕಿತ್ತು. ಹೀಗೆ ಲಸಿಕೆ ವಿತರಣೆ ಕಾರ್ಯ ಆರಂಭವಾಗಿ 7 ತಿಂಗಳು ಕಳೆದಿದ್ದು, ಬ್ರಿಟನ್‌ನ ಬಹುತೇಕ ಜನರಿಗೆ ವ್ಯಾಕ್ಸಿನೇಷನ್ ಡಬಲ್ ಡೋಸ್ ಮುಗಿದಿದೆ.

ಇದೇ ಕಾರಣಕ್ಕೆ ಧೈರ್ಯ ತೋರಿಸಿ ಸಂಪೂರ್ಣವಾಗಿ ಅನ್‌ಲಾಕ್ ಮಾಡಲು ಬೋರಿಸ್ ಜಾನ್ಸನ್ ಮುಂದಾಗಿದ್ದಾರೆ. ಆದರೆ ವಿಶ್ವ ಆರೋಗ್ಯ ಸಂಸ್ಥೆ ಬ್ರಿಟನ್ ಸೇರಿ ಯುರೋಪ್‌ನ ಹಲವು ರಾಷ್ಟ್ರಗಳಿಗೆ 4ನೇ ಅಲೆ ಮುನ್ನೆಚ್ಚರಿಕೆ ನೀಡಿದೆ. ಇಂತಹ ಸಂದರ್ಭದಲ್ಲಿ ಅನ್‌ಲಾಕ್ ಅಗತ್ಯತೆ ಏನಿತ್ತು ಎಂಬ ಪ್ರಶ್ನೆ ಮೂಡಿದೆ.

ಆಂಗ್ಲರ ಬುಡ ಅಲುಗಾಡಿತು!

ಆಂಗ್ಲರ ಬುಡ ಅಲುಗಾಡಿತು!

ಕೊರೊನಾ ವೈರಸ್ ಸುಲಭವಾಗಿ ನಾಶವಾಗಲ್ಲ. ಮಾನವರಿಗೆ ಎದುರಾಗಿರುವ ಸಂಕಷ್ಟ ಇನ್ನೂ ಮುಗಿದಿಲ್ಲ. ನವೆಂಬರ್‌ನಲ್ಲಿ ಇದೇ ರೀತಿ ಬ್ರಿಟನ್‌ನ ಸಾಂಕ್ರಾಮಿಕ ರೋಗಗಳ ತಜ್ಞರು ಆಘಾತಕಾರಿ ಸಂಗತಿ ತಿಳಿಸಿದ್ದರು. ಕೊರೊನಾ ಸೋಂಕು ಅಷ್ಟು ಸುಲಭವಾಗಿ ಭೂಮಿಯಿಂದ ನಾಶವಾಗದು ಎಂಬ ಎಚ್ಚರಿಕೆಯನ್ನು ನೀಡಿದ್ದರು.

ಹೀಗೆ ಬ್ರಿಟನ್ ಸಂಶೋಧಕರು ಕೊರೊನಾ ಕುರಿತು ಆಘಾತಕಾರಿ ಹೇಳಿಕೆ ನೀಡಿದ 2 ತಿಂಗಳಲ್ಲಿ ಜರ್ಮನ್ ಹಾಗೂ ಅಮೆರಿಕದ ಸಂಶೋಧಕರು ಕೂಡ ಇದೇ ಮಾತು ಹೇಳುತ್ತಿದ್ದಾರೆ. ಏಕೆಂದರೆ ಈವರೆಗೂ ಯಾವುದೇ ಲಸಿಕೆ ಅಷ್ಟು ಪ್ರಭಾವ ಬೀರುತ್ತಿಲ್ಲ. ಅಕಸ್ಮಾತ್ ವ್ಯಾಕ್ಸಿನ್ ಸಕ್ಸಸ್ ಆದರೂ ಕೊರೊನಾ ತೊಲಗುತ್ತೆ ಎಂಬುದು ಭ್ರಮೆ, ಲಸಿಕೆಯಿಂದ ಸದ್ಯಕ್ಕೆ ಕೊರೊನಾ ನಿಯಂತ್ರಿಸಬಹುದು ಎಂಬುದು ಸಂಶೋಧಕರ ವಾದ.

ಬ್ರಿಟನ್ ಪಾಡು ಯಾರಿಗೂ ಬೇಡ!

ಬ್ರಿಟನ್ ಪಾಡು ಯಾರಿಗೂ ಬೇಡ!

ದ್ವೀಪರಾಷ್ಟ್ರ ಬ್ರಿಟನ್‌ನಲ್ಲಿ ಬರೀ ಚಳಿ ಇರುವುದಿಲ್ಲ, ಅಲ್ಲಿ ತೇವಾಂಶ ಭರಿತ ವಾತಾವರಣ ಮೈಕೊರೆಯುವಂತೆ ಮಾಡುತ್ತದೆ. ಇಂತಹ ವಾತಾವರಣದಲ್ಲಿ ವೈರಸ್ ಬಹುಬೇಗ ಹರಡುತ್ತದೆ. ಹೀಗಾಗಿ ಎಚ್ಚರಿಕೆಯಿಂದ ಇರಲಿ ಎಂಬ ಸಲಹೆ ತಜ್ಞರದ್ದು. ಬ್ರಿಟನ್‌ನಲ್ಲಿ ಈಗಲೂ ಸೋಂಕಿಗೆ ತುತ್ತಾಗುವವರು ಸಂಖ್ಯೆ ಹೆಚ್ಚುತ್ತಿದ್ದು, ಸರ್ಕಾರದ ಬುಡ ಅಲುಗಾಡುತ್ತಿದೆ. ಭವಿಷ್ಯ ಹೇಗಪ್ಪಾ ಅಂತಾ ಜನರು ನಡುಗುತ್ತಿರುವಾಗಲೇ, ಅನ್‌ಲಾಕ್ ಹೆಸರಲ್ಲಿ ಅಲ್ಲಿ ಮತ್ತೊಂದು ಅಲೆಗೆ ಆಹ್ವಾನ ನೀಡಿದಂತಾಗಿದೆ. ಬ್ರಿಟನ್‌ನಲ್ಲಿ ಜನ ಜಾತ್ರೆಯಾದರೆ ಮತ್ತೆ ಆ ದೇಶದ ಪರಿಸ್ಥಿತಿ ಕೈಮೀರುವುದು ಗ್ಯಾರಂಟಿ.

ನಮ್ಮ ಪ್ರಾಣ ನಮ್ಮ ಕೈಯಲ್ಲಿ!

ನಮ್ಮ ಪ್ರಾಣ ನಮ್ಮ ಕೈಯಲ್ಲಿ!

ಲಸಿಕೆ ಸಿಕ್ಕರೂ ಮುಂಜಾಗ್ರತೆ ಅತ್ಯಗತ್ಯ. ಏಕೆಂದರೆ ಕೊರೊನಾ ವೈರಸ್ ಪ್ರತಿ ಕ್ಷಣವೂ ರೂಪಾಂತರ, ಅಂದರೆ ಬಣ್ಣ ಬದಲಿಸಿ ದಾಳಿ ಮಾಡುತ್ತಿದೆ. ಕೊರೊನಾ ರೂಪಾಂತರಿಗಳ ಎದುರು ಲಸಿಕೆ ಅಷ್ಟು ಪ್ರಭಾವಶಾಲಿ ಆಗದು ಎನ್ನುತ್ತಾರೆ ತಜ್ಞರು. ಹೀಗಿರುವಾಗ ಮುನ್ನೆಚ್ಚರಿಕೆ ಕೈಗೊಂಡು, ಕೊವಿಡ್ ರೂಲ್ಸ್ ಫಾಲೋ ಮಾಡೋದೆ ಬೆಸ್ಟ್ ಐಡಿಯಾ. ಆದ್ರೆ ಇಷ್ಟುದಿನ ಕೊರೊನಾ ನಿಯಮಗಳನ್ನ ಕಟ್ಟುನಿಟ್ಟಾಗಿ ಪಾಲಿಸಿದ್ದ ಬ್ರಿಟನ್ ಸರ್ಕಾರ, ಈಗ್ಯಾಕೆ ದಿಢೀರ್ ಸಂಪೂರ್ಣ ಅನ್‌ಲಾಕ್ ಮಾಡಲು ಮುಂದಾಗಿದೆ ಎಂಬುದೇ ಟ್ರಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

English summary
UK govt agreed for more freedom from Covid rules, but experts warned about this decision.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X