ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯೂರೋಪ್‌ನಲ್ಲಿ ಕೊರೊನಾ ರಣಕೇಕೆ, ಯುಕೆಯಲ್ಲಿ ಅತಿ ಹೆಚ್ಚು ಸಾವು

|
Google Oneindia Kannada News

ಲಂಡನ್, ಮೇ 5: ಜಗತ್ತಿನ ಮಾರಣಾಂತಿಕ ರೋಗ ಕೊರೊನಾ ವೈರಸ್‌ಗೆ ಇಡೀ ವಿಶ್ವವೇ ನಲುಗಿ ಹೋಗಿದೆ. ಅದರಲ್ಲೂ ಯೂರೋಪ್‌ ರಾಷ್ಟ್ರಗಳು ಈ ಡೆಡ್ಲಿ ಸೋಂಕಿನಿಂದ ಸಂಪೂರ್ಣ ಸಂಕಷ್ಟಕ್ಕೆ ಸಿಲುಕಿಕೊಂಡಿದೆ. ಸ್ಪೇನ್, ಇಟಲಿ, ಫ್ರಾನ್ಸ್, ಜರ್ಮನ್ ಹಾಗೂ ಯುಕೆ ದೇಶಗಳಲ್ಲಿ ಕೊರೊನಾ ಸೋಂಕು ಅಟ್ಟಹಾಸ ಮೆರೆಯುತ್ತಿದೆ.

Recommended Video

ಪೊಲೀಸನ್ನು ಕಾರ್ ಬಾನೆಟ್ ಮೇಲೆ ಕೂರಿಸಿಕೊಂಡು ಹೋಗಿದ್ದಕ್ಕೆ ವ್ಯಕ್ತಿ ಅರೆಸ್ಟ್ | Oneindia Kannada

ಈ ಪೈಕಿ ಯುನೈಟೆಡ್ ಕಿಂಗ್‍ಡಮ್‌ನಲ್ಲಿ ಅತಿ ಹೆಚ್ಚು ಸಾವು ಸಂಭವಿಸಿದೆ. ಜಗತ್ತಿನಾದ್ಯಂತ ಒಟ್ಟು 36 ಲಕ್ಷ (3,660,476) ಜನರಲ್ಲಿ ಕೊರೊನಾ ದೃಢವಾಗಿದೆ. ಅದರಲ್ಲಿ 252,682 ಜನರು ಸಾವನ್ನಪ್ಪಿದ್ದಾರೆ. ಈ ಪೈಕಿ ಅಮೆರಿಕದಲ್ಲಿ 69,925 ಜನರು ಪ್ರಾಣ ಕಳೆದುಕೊಂಡಿದ್ದಾರೆ.

ಭಾರತಕ್ಕೆ ಯುಎಸ್ ರೀತಿ ಮತ್ತು ನೇರ ಹಣ ವರ್ಗಾವಣೆ ಪ್ಯಾಕೇಜ್‌ ಬೇಕು: ಅಭಿಜಿತ್ ಬ್ಯಾನರ್ಜಿ ಭಾರತಕ್ಕೆ ಯುಎಸ್ ರೀತಿ ಮತ್ತು ನೇರ ಹಣ ವರ್ಗಾವಣೆ ಪ್ಯಾಕೇಜ್‌ ಬೇಕು: ಅಭಿಜಿತ್ ಬ್ಯಾನರ್ಜಿ

ಯುಕೆಯಲ್ಲಿ 32 ಸಾವಿರ ಸಾವು

ಯುಕೆಯಲ್ಲಿ 32 ಸಾವಿರ ಸಾವು

ಯುನೈಟೆಡ್ ಕಿಂಗ್‍ಡಮ್‌ನಲ್ಲಿ ಕೊರೊನಾ ವೈರಸ್‌ನಿಂದ ಈವರೆಗೂ 32,000 ಜನರು ಸಾವನ್ನಪ್ಪಿದ್ದಾರೆ. ಇದು ಯೂರೋಪ್‌ ರಾಷ್ಟ್ರಗಳ ಪೈಕಿ ಅತಿ ಹೆಚ್ಚು ಸಾವು ವರದಿಯಾಗಿರುವ ದೇಶ ಎನಿಸಿಕೊಂಡಿದೆ. ಸ್ಕಾಟ್ಲೆಂಡ್ ಮತ್ತು ಉತ್ತರ ಐರ್ಲೆಂಡ್‌ನಲ್ಲಿ ವರದಿಯಾಗಿರುವ ಸಾವುಗಳು ಸೇರಿದಂತೆ ಯುಕೆನಲ್ಲಿ ಒಟ್ಟು 32,000 ಜನರು ಪ್ರಾಣ ಕಳೆದುಕೊಂಡಿದ್ದಾರೆ.

ಇಟಲಿಯಲ್ಲಿ 29 ಸಾವಿರ ಸಾವು

ಇಟಲಿಯಲ್ಲಿ 29 ಸಾವಿರ ಸಾವು

ಯುಕೆ ನಂತರ ಇಟಲಿ ದೇಶದಲ್ಲಿ ಅತಿ ಹೆಚ್ಚು ಜನರು ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದರು. ಇಟಲಿಯಲ್ಲಿ ಈವರೆಗೂ ಒಟ್ಟು 2,11,938 ಜನರಿಗೆ ಸೋಂಕು ದೃಢಪಟ್ಟಿತ್ತು. ಅದರಲ್ಲಿ 29,079 ಜನರು ಗುಣಮುಖರಾಗದೇ ಪ್ರಾಣ ಕಳೆದುಕೊಂಡಿದ್ದರು.

ಕೊರೊನಾ ರೋಗಿಯ ಅಂತ್ಯ ಸಂಸ್ಕಾರ ಮಾಡಿದರೆ 10 ಸಾವಿರ ಇನ್ಸೆಂಟಿವ್!ಕೊರೊನಾ ರೋಗಿಯ ಅಂತ್ಯ ಸಂಸ್ಕಾರ ಮಾಡಿದರೆ 10 ಸಾವಿರ ಇನ್ಸೆಂಟಿವ್!

ಸ್ಪೇನ್ ದೇಶದಲ್ಲಿ ನರಕ

ಸ್ಪೇನ್ ದೇಶದಲ್ಲಿ ನರಕ

ಯುಕೆ, ಇಟಲಿ ದೇಶಗಳಂತೆ ಸ್ಪೇನ್ ದೇಶದಲ್ಲಿ ಕೊರೊನಾ ವೈರಸ್‌ನಿಂದ ನರಕ ಸೃಷ್ಟಿಯಾಗಿದೆ. ಯೂರೋಪ್ ದೇಶಗಳ ಪೈಕಿ ಸ್ಪೇನ್‌ನಲ್ಲೆ ಹೆಚ್ಚು ಸಂಖ್ಯೆಯ ಸೋಂಕಿತರು ಇದ್ದಾರೆ. ಒಟ್ಟು 2,48,301 ಜನರಲ್ಲಿ ಸೋಂಕು ಖಚಿತವಾಗಿದ್ದು, ಅದರಲ್ಲಿ 25,428 ಜನರು ಮೃತಪಟ್ಟಿದ್ದಾರೆ.

ನಾಲ್ಕನೇ ದೇಶ ಫ್ರಾನ್ಸ್

ನಾಲ್ಕನೇ ದೇಶ ಫ್ರಾನ್ಸ್

ಫ್ರಾನ್ಸ್ ದೇಶದಲ್ಲೂ ಕೊರೊನಾ ರಣಕೇಕೆ ಹಾಕುತ್ತಿದೆ. 1,69,462 ಜನರಿಗೆ ಡೆಡ್ಲಿ ಸೋಂಕು ತಗುಲಿದ್ದು, ಅದರಲ್ಲಿ 25,201 ಜನರು ಜೀವ ಕಳೆದುಕೊಂಡಿದ್ದಾರೆ. ಫ್ರಾನ್ಸ್ ನಂತರ ಜರ್ಮನ್ ದೇಶದಲ್ಲಿ 1,66,152 ಕೇಸ್ ದಾಖಲಾಗಿದ್ದು, ಅಲ್ಲಿ ಸಾವಿನ ಸಂಖ್ಯೆ 6,993 ಸಾವು ಸಂಭವಿಸಿದೆ.

English summary
UK now has highest number of coronavirus deaths in Europe as toll soars above Italy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X