ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿಎನ್‌ಬಿ ಹಗರಣ: ನೀರವ್ ಮೋದಿ ಜಾಮೀನು ಅರ್ಜಿ ಸತತ 7ನೇ ಬಾರಿಗೆ ವಜಾ

|
Google Oneindia Kannada News

ಲಂಡನ್, ಅ. 27: ಪಂಜಾಬ್ ನ್ಯಾಷನಲ್ ಬ್ಯಾಂಕಿನ ಬಹುಕೋಟಿ ಹಗರಣದ ಪ್ರಮುಖ ಆರೋಪಿ, ದೇಶಭ್ರಷ್ಟ ಉದ್ಯಮಿ ನೀರವ್ ಮೋದಿ ಅವರು ಸಲ್ಲಿಸಿದ್ದ ಜಾಮೀನು ಅರ್ಜಿ ಸತತ 7ನೇ ಬಾರಿಗೆ ವಜಾಗೊಂಡಿದೆ. ಲಂಡನ್ನಿನ ಕೋರ್ಟ್ ನೀರವ್ ಅರ್ಜಿಯನು ತಿರಸ್ಕರಿಸಿದೆ.

ಮುಂಬೈ ಶಾಖೆಯೊಂದರಲ್ಲಿ 13,000 ಕೋಟಿ ರೂ.ಗಳ ವಂಚನೆ ಮತ್ತು ಅಕ್ರಮ ವಹಿವಾಟು ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಲಂಡನ್ನಿನಲ್ಲಿ ಬಂಧಿಯಾಗಿದ್ದಾರೆ. ಮಾರ್ಚ್ 19ರಂದು ಲಂಡನ್ನಿನ ಸ್ಕಾಟ್ಲೆಂಡ್ ಯಾರ್ಡ್ ಅಧಿಕಾರಿಗಳು, ನೀರವ್ ಅವರನ್ನು ಬಂಧಿಸಿದ್ದರು.

ಉದ್ಯಮಿ ನೀರವ್ ಮೋದಿ ಪತ್ನಿಗೆ ರೆಡ್ ಕಾರ್ನರ್ ನೋಟಿಸ್ ಉದ್ಯಮಿ ನೀರವ್ ಮೋದಿ ಪತ್ನಿಗೆ ರೆಡ್ ಕಾರ್ನರ್ ನೋಟಿಸ್

ಲಂಡನ್ ನ ವೆಸ್ಟ್ ಮಿನ್ ಸ್ಟರ್ ನ್ಯಾಯಾಲಯದಲ್ಲಿ ಮಾರ್ಚ್ 20, 29 , ಮೇ 8 ಹಾಗೂ ನವೆಂಬರ್ 8 ರಂದು ನಾಲ್ಕು ಬಾರಿ ನೀರವ್ ಮೋದಿ ಜಾಮೀನು ಅರ್ಜಿ ಸಲ್ಲಿಸಿದ್ದರು. ಇದಲ್ಲದೆ 2019ರ ಮಾರ್ಚ್ 5 ಹಾಗೂ ಜೂನ್ 12ರಂದು ಲಂಡನ್ ಹೈಕೋರ್ಟ್ ನಿಂದಲೂ ಜಾಮೀನು ಪಡೆಯಲು ಯತ್ನಿಸಿದ್ದರು. ಆದರೆ ಎರಡು ನ್ಯಾಯಾಲಯದಲ್ಲೂ ಜಾಮೀನು ಅರ್ಜಿ ತಿರಸ್ಕೃತಗೊಂಡಿದೆ.

UK Court rejects Nirav Modis bail plea for seventh time

Recommended Video

Rishab Pant ಅವರನ್ನು ODI ಹಾಗು T20 ಇಂದ ಕೈ ಬಿಟ್ಟ BCCI | Oneindia Kannada

ನೀರವ್ ಮೋದಿ ಅವರಿಗೆ ಸಂಬಂಧಿಸಿದ ಆಸ್ತಿ, ವಸ್ತುಗಳನ್ನು ಜಪ್ತಿ, ಹರಾಜು ಹಾಕಲು ವಿಶೇಷ ಕೋರ್ಟ್ ಅನುಮತಿ ನೀಡಿದೆ. ಇದರ ಬೆನ್ನಲ್ಲೇ ನೀರವ್ ಪತ್ನಿ ಅಮಿ ಮೋದಿಗೆ ಇಂಟರ್ ಪೋಲ್ ಸಂಸ್ಥೆಯಿಂದ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಲಾಗಿದೆ. ಪಿಎನ್ ಬಿ ಹಗರಣಕ್ಕೆ ಸಂಬಂಧಿಸಿದ ಅರೋಪಿಗಳಾದ ನೀರವ್ ಮೋದಿ, ಮೆಹುಲ್ ಚೊಕ್ಸಿ ಅವರು ಭಾರತದಿಂದ ಪರಾರಿಯಾಗಿದ್ದು, ವಿವಿಧ ತನಿಖಾ ಸಂಸ್ಥೆಗಳು ಇವರಿಬ್ಬರನ್ನು ಭಾರತಕ್ಕೆ ಕರೆ ತಂದು ವಿಚಾರಣೆ ನಡೆಸಲು ಯತ್ನಿಸುತ್ತಿವೆ.

English summary
PNB fraud case: A UK Court rejected Wilful defaulter Nirav Modi’s bail plea for the seventh time in a row.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X