ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

''ರಾಯಲ್ ವಿಚ್ಛೇದನ'' ದುಬೈ ಶೇಖ್‌ಗೆ 728 ಮಿಲಿಯನ್ USD ಹೊರೆ

|
Google Oneindia Kannada News

ದುಬೈ, ಡಿಸೆಂಬರ್ 23: ಅತಿದೊಡ್ಡ ಮೊತ್ತದ ವಿವಾಹ ವಿಚ್ಛೇದನ ಇತ್ಯರ್ಥಗಳ ಪಟ್ಟಿಗೆ ದುಬೈ ಶೇಖ್ ರಶೀದ್ ದಂಪತಿ ಹೊಸದಾಗಿ ಸೇರ್ಪಡೆಯಾಗುತ್ತಿದ್ದಾರೆ. ವಿಚ್ಛೇದನ ಇತ್ಯರ್ಥಕ್ಕೆ 5500 ಕೋಟಿ ರೂಪಾಯಿ ಪಾವತಿಸುವಂತೆ ದುಬೈ ಆಡಳಿತಗಾರ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ಟೊಯಮ್(72) ಅವರಿಗೆ ಯುಕೆ ಕೋರ್ಟ್ ಆದೇಶ ನೀಡಿದೆ.

72 ವರ್ಷ ವಯಸ್ಸಿನ ದುಬೈ ಉಪಾಧ್ಯಕ್ಷ ಮತ್ತು ಪ್ರಧಾನಿ ಶೇಖ್ ಮಹಮ್ಮದ್ ಬಿನ್ ರಶೀದ್ ಅಲ್​ ಮುಕ್ತುಮ್ ಅವರ 6ನೆಯ ಪತ್ನಿ ಹಯಾ(47)ಗೆ ವಿಚ್ಛೇದನ ನೀಡಲು ಮುಂದಾಗಿದ್ದಾರೆ. ಈ ವಿಚ್ಛೇದನಕ್ಕೆ ಪ್ರಕ್ರಿಯೆ ಮುಗಿದ ಬಳಿಕ ಶೇಖ್ ಪತ್ನಿಗೆ ಜೀವನಾಂಶ ನೀಡಬೇಕಾಗುತ್ತದೆ. ಈ ಮೊತ್ತ ಈಗ ಎಲ್ಲರ ಹುಬ್ಬೇರುವಂತೆ ಮಾಡಿದೆ.

ದುಬೈ ಶೇಖ್ ತಮ್ಮ ವಿಚ್ಛೇದಿತ ಪತ್ನಿ ಹಯಾ ಬಿನ್ ಅಲ್ ಹುಸೇನ್ ಹಾಗೂ ಇಬ್ಬರು ಮಕ್ಕಳಿಗೆ ಜೀವನಾಂಶ ರೂಪದಲ್ಲಿ 5,500 ಕೋಟಿ ರೂಪಾಯಿ (728 ಮಿಲಿಯನ್​ ಅಮೆರಿಕನ್ ಡಾಲರ್) ನೀಡುವಂತೆ ಲಂಡನ್​ ಕುಟುಂಬ ನ್ಯಾಯಾಲಯ ಇತ್ತೀಚೆಗೆ ಆದೇಶ ನೀಡಿದೆ. ಜೀವನಾಂಶ ನೀಡಿ, ಪ್ರಕರಣ ಇತ್ಯರ್ಥ ಮಾಡಿಕೊಳ್ಳಲು ಲಂಡನ್​ ಕುಟುಂಬ ನ್ಯಾಯಾಲಯ ಮೂರು ತಿಂಗಳ ಗಡುವು ನೀಡಿದೆ.

UK court orders ruler of Dubai to pay Rs 5500 crore in divorce settlement

72 ವರ್ಷ ವಯಸ್ಸಿನ ದುಬೈ ಶೇಖ್ ತನ್ನ ಆರನೆಯ ಪತ್ನಿಗೆ ವಿಚ್ಛೇದನ ಕೊಟ್ಟಿದ್ದು ಏಕೆ ಎಂಬುದು ಕುತೂಹಲಕಾರಿಯಾಗಿದೆ. ರಾಜಕುಮಾರಿ ಹಯಾ ತನ್ನ ಪತಿಯಾದ ದುಬೈ ಪ್ರಧಾನಿ ಶೇಖ್ ಮತ್ತು ಆತನ ಬಾಡಿಗಾರ್ಡ್​ ಜೊತೆ ಸಂಬಂಧ ಹೊಂದಿದ್ದರು. ಈ ವಿಷಯ ತಿಳಿದ ಶೇಖ್ ಕೋಪಗೊಂಡು ದುಬೈನಲ್ಲಿ ರಾಜಕುಮಾರಿ ಹಯಾ ಬದುಕು ನಡೆಸಲು ಕಷ್ಟವಾಗುವಂಥ ಪರಿಸ್ಥಿತಿ ನಿರ್ಮಿಸಿದರು. 2019ರಲ್ಲಿ ಪ್ರಾಣಭೀತಿಯಿಂದ ಜರ್ಮನಿಗೆ ಹಯಾ ವಲಸೆ ಹೋಗಬೇಕಾಯಿತು. ತನ್ನ ಪತ್ನಿಯನ್ನು ಮರಳಿ ಕಳಿಸುವಂತೆ ರಾಜತಾಂತ್ರಿಕ ಮಟ್ಟದಲ್ಲಿ ದುಬೈ ಶೇಖ್ ಯತ್ನಿಸಿದರೂ ಸಾಧ್ಯವಾಗಲಿಲ್ಲ. ನಂತರ ಬ್ರಿಟನ್ನಿನಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ.

ಜೋರ್ಡನ್ ದೊರೆ ಹುಸೇನ್ ಪುತ್ರಿ ಹಯಾ ಅವರು ಹಾಲಿ ರಾಜ ಎರಡನೇ ಅಬ್ದುಲ್ಲಾ ಅವರ ಮಲ ತಂಗಿಯಾಗಿದ್ದು, ಆಕ್ಸ್ ಫರ್ಡ್ ವಿವಿಯಲ್ಲಿ ವ್ಯಾಸಂಗ ಮಾಡಿದ್ದಾರೆ. 2004ರಲ್ಲಿ ಶೇಖ್ ರನ್ನು ವರಿಸಿದ್ದರು. ವಿಶ್ವಸಂಸ್ಥೆ ಶಾಂತಿದೂತರ ಪಟ್ಟಿಯಲ್ಲಿ ಹಯಾ ಹೆಸರಿದೆ. ಮಾಜಿ ಒಲಿಂಪಿಯನ್ ಅಥ್ಲೀಟ್, ಮಾನವತಾವಾದಿ, ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಸದಸ್ಯೆಯಾಗಿದ್ದಾರೆ. ಜೋರ್ಡನ್ ದೇಶದಲ್ಲಿ ಮಹಿಳೆಯರು ಭಾರಿ ಟ್ರಕ್ ಚಲಾಯಿಸಲು ಲೈಸನ್ಸ್ ಸಿಗುವಂತೆ ಮಾಡಿದ್ದರು ಎಂದು ಹಯಾ ವೆಬ್ ತಾಣದಲ್ಲಿ ಬರೆಯಲಾಗಿದೆ.

Recommended Video

IPL 2022 Mega Auction ಬಗ್ಗೆ ಕಂಪ್ಲೀಟ್ ಮಾಹಿತಿ | Oneindia Kannada

ವಿಚ್ಛೇದನ ಪ್ರಕರಣ ನಡೆಯುವಾಗಲೇ ಹಯಾ ಅವರ ಮೊಬೈಲ್ ಫೋನ್ ಹ್ಯಾಕ್ ಮಾಡಿಸಲಾಗಿತ್ತು. ದುಬೈ ಶೇಖ್ ವಿರುದ್ಧ ಸಾಕ್ಷ್ಯಾಧಾರ ಹೆಚ್ಚಿದ್ದರಿಂದ ವಿಚ್ಛೇದನ, ಜೀವನಾಂಶ ನೀಡಲು ಅನಿವಾರ್ಯವಾಗಿ ಒಪ್ಪಿಕೊಳ್ಳಬೇಕಾಯಿತು. ಬ್ರಿಟನ್‌ನ ಅತ್ಯಂತ ದುಬಾರಿ ವಿಚ್ಛೇದನ ಎಂದು ಉಲ್ಲೇಖಿಸಲಾದ ರಷ್ಯಾದ ಬಿಲಿಯನೇರ್ ಫರ್ಖಾದ್ ಅಖ್ಮೆಡೋವ್‌ನಿಂದ 2016 ರ ವಿಚ್ಛೇದನ ಪಡೆದ ಟಟಿಯಾನಾ ಅಖ್ಮೆಡೋವಾ ಅವರಿಗೆ ನೀಡಲಾದ 450 ಮಿಲಿಯನ್ ಪೌಂಡ್ ಪರಿಹಾರವನ್ನು ಈ ಪ್ರಕರಣ ಹಿಂದಿಕ್ಕಲಿದೆ.

ಹಯಾ ಪ್ರಕರಣದಲ್ಲಿ 5.1 ಮಿಲಿಯನ್ ಪೌಂಡ್‌ಗಳ ರಜಾ ಬಜೆಟ್ ಅನ್ನು ಒಳಗೊಂಡಿದೆ, ಮಕ್ಕಳ ಸಿಬ್ಬಂದಿಗೆ ಕೇವಲ 450,000 ಪೌಂಡ್‌ಗಳ ವಾರ್ಷಿಕ ಮೊತ್ತ ಮತ್ತು ಎರಡು ಕುದುರೆಗಳು ಮತ್ತು ಕುದುರೆ ಸೇರಿದಂತೆ ಅವರ ಪ್ರಾಣಿಗಳಿಗೆ ಸುಮಾರು 275,000 ಪೌಂಡ್‌ಗಳು ಹೀಗೆ ಹೆಚ್ಚುವರಿ ಮೊತ್ತ ಸೇರಿ 5,555 ಕೋಟಿ ರು ಅಂದಾಜು ಮೊತ್ತ ದಾಟುತ್ತದೆ. ಮೂರು ತಿಂಗಳಲ್ಲಿ 2516 ಕೋಟಿ ರು ಪಾವತಿಸಬೇಕಾಗುತ್ತದೆ.

English summary
In one of the largest divorce settlement amounts ordered by a court in the UK, Sheikh Mohammed bin Rashid al-Maktoum (72), ruler of Dubai, has been directed to pay more than $728 million over Rs 5500 crore) to his ex-wife Princess Haya bint al-Hussein (47).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X