ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್‌ ವಿರುದ್ಧ ಮೆರ್ಕ್‌ನ ಮಾತ್ರೆ ಅನುಮೋದಿಸಿದ ವಿಶ್ವದ ಮೊದಲ ರಾಷ್ಟ್ರ ಯುಕೆ

|
Google Oneindia Kannada News

ಲಂಡನ್‌, ನವೆಂಬರ್‌ 05: ಕೊರೊನಾ ವೈರಸ್‌ ಸೋಂಕು ಕಾಣಿಸಿಕೊಂಡಾಗಿನಿಂದ ಕೋವಿಡ್ ವಿರುದ್ಧದ ಔಷಧಿಯ ಸಂಶೋಧನೆಗಳು ನಡೆಯುತ್ತಲಿದೆ. ಈಗಾಗಲೇ ಅಮೆರಿಕದ ಔಷಧ ತಯಾರಿಕ ಕಂಪೆನಿ ಮೆರ್ಕ್ ಮಾತ್ರೆಗಳನ್ನು ತಯಾರಿ ಮಾಡಿದೆ. ಈ ಮಾತ್ರೆಗಳನ್ನು ಸೋಂಕಿತರಿಗೆ ನೀಡಲು ಬ್ರಿಟನ್ ಔಷಧ ನಿಯಂತ್ರಣಾ ಸಂಸ್ಥೆ ಗುರುವಾರ ಅನುಮೋದನೆ ನೀಡಿದ್ದು ಈ ಮೂಲಕ ಕೋವಿಡ್‌ ವಿರುದ್ಧದ ಮೆರ್ಕ್‌ನ ಮಾತ್ರೆ ಅನುಮೋದಿಸಿದ ವಿಶ್ವದ ಮೊದಲ ರಾಷ್ಟ್ರ ಎಂಬ ಖ್ಯಾತಿಯನ್ನು ಯುಕೆ ಪಡೆದಿದೆ.

ಕೊರೊನಾ ವೈರಸ್‌ ಸೋಂಕಿನ ವಿರುದ್ಧವಾಗಿ ನೀಡಲಾಗುವ ಈ ಮೆರ್ಕ್‌ನ ಮಾತ್ರೆಯನ್ನು ಯುಕೆಯಲ್ಲಿ ಮೊಲ್ನುಪಿರವಿರ್ ಎಂಬ ಹೆಸರಿನಲ್ಲಿ ಸೋಂಕಿತರಿಗೆ ದೊರೆಯಲಿದೆ. ಈ ಮಾತ್ರೆಯನ್ನು ಕೋವಿಡ್‌ ಸೋಂಕಿತರಿಗೆ ದಿನಕ್ಕೆ ಎರಡು ಬಾರಿ ನೀಡಲಾಗುತ್ತದೆ.

ಜುಲೈ ಬಳಿಕ ಮೊದಲ ಬಾರಿಗೆ ಯುಕೆಯಲ್ಲಿ ದಿನಕ್ಕೆ 50,000 ಕ್ಕೂ ಅಧಿಕ ಕೋವಿಡ್‌ಜುಲೈ ಬಳಿಕ ಮೊದಲ ಬಾರಿಗೆ ಯುಕೆಯಲ್ಲಿ ದಿನಕ್ಕೆ 50,000 ಕ್ಕೂ ಅಧಿಕ ಕೋವಿಡ್‌

ಕ್ಲಿನಿಕಲ್‌ ಪ್ರಯೋಗದ ಸಂದರ್ಭದಲ್ಲಿ ಈ ಮಾತ್ರೆಗಳು ಪರಿಣಾಮಕಾರಿ ಎಂದು ತಿಳಿದು ಬಂದಿದ್ದು, ಈ ಹಿನ್ನೆಲೆ ಯುಕೆ ಈ ಮಾತ್ರೆಯ ಬಳಕೆಗೆ ಅನುಮೋದನೆ ನೀಡಿದೆ. ಜನರಿಗೆ ಕೊರೊನಾ ವೈರಸ್‌ ಸೋಂಕು ಕಾಣಿಸಿಕೊಂಡ ಬಳಿಕ ಐದು ದಿನಗಳ ಒಳಗೆ ಮನೆಯಲ್ಲಿಯೇ ಇದ್ದು ಈ ಮಾತ್ರೆಗಳನ್ನು ಸೇವನೆ ಮಾಡಬೇಕಾಗುತ್ತದೆ. ಇನ್ನು ಈ ಮಾತ್ರೆಯು ಕೊರೊನಾ ವೈರಸ್‌ ಸೋಂಕಿನಿಂದಾಗಿ ಆಸ್ಪತ್ರೆಗೆ ದಾಖಲಾಗುವುದು, ಗಂಭೀರ ಸೋಂಕಿನ ಲಕ್ಷಣಗಳು ಹಾಗೂ ಸಾವಿನ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಎಂದು ಪ್ರಯೋಗದ ಸಂದರ್ಭದಲ್ಲಿ ತಿಳಿದು ಬಂದಿದೆ.

ಒಟ್ಟು 775 ರೋಗಿಗಳ ಮೇಲೆ ಮೆರ್ಕ್ ಮಾತ್ರೆಗಳ ಕ್ಲಿನಿಕಲ್‌ ಪ್ರಯೋಗವನ್ನು ನಡೆಸಲಾಗಿದೆ. ಈ ಸಂದರ್ಭದಲ್ಲಿ ಮೊದಲ 29 ದಿನಗಳಲ್ಲಿ ಯಾರೊಬ್ಬರೂ ಕೂಡಾ ಕೋವಿಡ್‌ ಸೋಂಕಿನಿಂದ ಸಾವನ್ನಪ್ಪಿಲ್ಲ. ಈ ಹಿನ್ನೆಲೆಯಿಂದಾಗಿ ಈ ಮಾತ್ರೆಗಳು ಕೊರೊನಾ ವೈರಸ್‌ ಸೋಂಕಿನ ವಿರುದ್ಧ ಪರಿಣಾಮಕಾರಿ ಎಂದು ತಿಳಿದು ಬಂದಿದೆ.

UK Becomes First Country To Approve Mercks Oral Covid Pill, Details about this drug

ಈ ಬಗ್ಗೆ ಪತ್ರಿಕಾ ಹೇಳಿಕೆಯ ಮೂಲಕ ಮಾಹಿತಿ ನೀಡಿರುವ ಬ್ರಿಟನ್​ನ ಆರೋಗ್ಯ ಇಲಾಖೆ ಕಾರ್ಯದರ್ಶಿ ಸಾಜಿದ್ ಜಾವಿದ್, "ಈ ದಿನವು ಬ್ರಿಟನ್‌ನ ಇತಿಹಾಸದಲ್ಲೇ ಮಹತ್ವದ ದಿನವಾಗಿದೆ. ಕೊರೊನಾ ವೈರಸ್‌ ಸೋಂಕಿಗೆ ಮನೆಯಲ್ಲಿಯೇ ಔಷಧ ಪಡೆದು ಗುಣಮುಖರಾಗಲು ಅವಕಾಶ ನೀಡಿರುವುದು ಮಹತ್ವದ ತೀರ್ಮಾನ," ಎಂದು ಶ್ಲಾಘಿಸಿದ್ದಾರೆ.

<br>ಫೆಬ್ರವರಿ ವೇಳೆಗೆ ಯುರೋಪ್ ರಾಷ್ಟ್ರಗಳಲ್ಲಿ 5 ಲಕ್ಷ ಜನರನ್ನು ಬಲಿ ತೆಗೆದುಕೊಳ್ಳಲಿದೆ ಕೊರೊನಾವೈರಸ್!
ಫೆಬ್ರವರಿ ವೇಳೆಗೆ ಯುರೋಪ್ ರಾಷ್ಟ್ರಗಳಲ್ಲಿ 5 ಲಕ್ಷ ಜನರನ್ನು ಬಲಿ ತೆಗೆದುಕೊಳ್ಳಲಿದೆ ಕೊರೊನಾವೈರಸ್!

"ಇನ್ನು ಕೂಡಾ ಔಷಧದ ಬಗ್ಗೆ ಅಧಿಕ ಪರಿಶೀಲನೆ ನಡೆಸಲಾಗುತ್ತಿದೆ. ಅಮೆರಿಕ ಹಾಗೂ ಐರೋಪ್ಯ ಒಕ್ಕೂಟದ ಹಲವು ನಿಯಂತ್ರಕರು ಈ ಔಷಧಿಯ ಬಗ್ಗೆ ಪರಿಶೀಲನೆ ಮಾಡುತ್ತಿದ್ದಾರೆ. ಈ ತಿಂಗಳ ಕೊನೆಯಲ್ಲಿ ಅಮೆರಿಕ ಔಷಧ ನಿಯಂತ್ರಕರ ಸಮಿತಿ ಸಭೆಯು ನಡೆಯಲಿದೆ. ಈಗಾಗಲೇ ಬೇರೆ ದೇಶದ ಔಷಧ ನಿಯಂತ್ರಕರಿಗೆ ಅರ್ಜಿ ನೀಡುವ ತೀರ್ಮಾನವನ್ನು ಕೈಗೊಳ್ಳಲಾಗಿದೆ," ಎಂದು ಹೇಳಿದರು.

ಬೇಡಿಕೆ ಅಧಿಕವಾಗುತ್ತಿದ್ದಂತೆ ಮೆರ್ಕ್‌ನ ಷೇರು ಮೌಲ್ಯ ಹೆಚ್ಚಳ

ಕೋವಿಡ್‌ ವಿರುದ್ಧದ ಮೆರ್ಕ್‌ನ ಮಾತ್ರೆಗಾಗಿ ಈಗಾಗಲೇ ಅಮೆರಿಕ ಹಾಗೂ ಬ್ರಿಟನ್‌ ಬೇಡಿಕೆಯನ್ನು ಮುಂದಿರಿಸಿದೆ. ಬ್ರಿಟನ್‌ ಸುಮಾರು ಐದು ಲಕ್ಷ ಮೆರ್ಕ್ ಮಾತ್ರೆಗಳಿಗೆ ಬೇಡಿಕೆ ಇಟ್ಟಿದ್ದು, ಅಮೆರಿಕ 17 ಲಕ್ಷ ಮಾತ್ರೆಗಳಿಗಾಗಿ ಬೇಡಿಕೆ ಮುಂದಿಟ್ಟಿದೆ. ಇನ್ನು ಬೇರೆ ರಾಷ್ಟ್ರಗಳು ಕೂಡಾ ಒಪ್ಪಂದವನ್ನು ಮಾಡಿಕೊಂಡಿದೆ. ಆಸ್ಟ್ರೇಲಿಯಾ, ಸಿಂಗಪುರ ಮತ್ತು ದಕ್ಷಿಣ ಕೊರಿಯಾ ದೇಶಗಳು ಈ ಕೋವಿಡ್‌ ಮಾತ್ರೆಗಾಗಿ ಒಪ್ಪಂದ ಮಾಡಿಕೊಂಡಿದೆ. ಬೇಡಿಕೆ ಹೆಚ್ಚಾಗುತ್ತಿದ್ದಂತೆ ಈ ಮಾತ್ರೆ ತಯಾರಿಕ ಸಂಸ್ಥೆಯ ಷೇರು ಮೌಲ್ಯ ಅಧಿಕಾಗಿದೆ. ಷೇರು ಮಾರುಕಟ್ಟೆಯಲ್ಲಿ ಈ ಕಂಪನಿಯ ಷೇರು ಮೌಲ್ಯ ಶೇಕಡ 3 ರಷ್ಟು ಅಧಿಕವಾಗಿದೆ.

ಇನ್ನು ಈ ಬಗ್ಗೆ ಹೇಳಿಕೆ ನೀಡಿರುವ ಮೆರ್ಕ್, "ಈ ವರ್ಷದ ಕೊನೆಯಲ್ಲಿ ಸುಮಾರು ಹತ್ತು ಮಿಲಿಯನ್‌ ಕೋವಿಡ್‌ ಪಿಲ್‌ಗಳನ್ನು ಉತ್ಪಾದನೆ ಮಾಡುವ ನಿರೀಕ್ಷೆ ಇದೆ. 2022 ರಷ್ಟರಲ್ಲಿ ನಾವು ಇಪ್ಪತ್ತು ಮಿಲಿಯನ್‌ ಪಿಲ್‌ಗಳನ್ನು ಉತ್ಪಾದನೆ ಮಾಡುವ ಗುರಿಯನ್ನು ಹೊಂದಿದ್ದೇವೆ," ಎಂದು ತಿಳಿಸಿದೆ.

ವಿಶ್ವದಲ್ಲಿ ಪ್ರಸ್ತುತ ಕೊರೊನಾ ವೈರಸ್‌ ಸೋಂಕಿನ ವಿರುದ್ಧವಾಗಿ ಕೋವಿಡ್‌ ಲಸಿಕೆಗಳನ್ನು ನೀಡಲಾಗುತ್ತಿದೆ. ಈ ಲಸಿಕೆಯನ್ನು ಪಡೆದವರಿಗೆ ಕೋವಿಡ್ ಬಂದರೆ ಸೋಂಕಿನ ಗಂಭೀರ ಲಕ್ಷಣಗಳು ಕಂಡು ಬರುವುದಿಲ್ಲ, ಕೋವಿಡ್‌ನಿಂದ ಸಾವು ಸಂಭವಿಸುವುದು ತೀರಾ ಕಡಿಮೆ ಎಂದು ಸಮೀಕ್ಷೆ, ಸಂಶೋಧನೆಗಳಿಂದ ತಿಳಿದು ಬಂದಿದೆ.(ಒನ್‌ಇಂಡಿಯಾ ಸುದ್ದಿ)

English summary
UK Becomes First Country To Approve Merck's Oral Covid Pill, Details about this drug.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X