• search
  • Live TV
ಲಂಡನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಲಂಡನ್‌ನ ಟಾಟಾ ಸ್ಟೀಲ್ ಘಟಕದಲ್ಲಿ ಬೆಂಕಿ: ಇಬ್ಬರಿಗೆ ಗಾಯ

|

ಲಂಡನ್, ಏಪ್ರಿಲ್ 26: ಇಂಗ್ಲೆಂಡ್‌ನ ಸೌತ್ ವೇಲ್ಸ್‌ನಲ್ಲಿರುವ ಟಾಟಾ ಸ್ಟೀಲ್ ಘಟಕದಲ್ಲಿ ಸಂಭವಿಸಿದ ಸ್ಫೋಟ ಮತ್ತು ಅಗ್ನಿ ದುರಂತದಲ್ಲಿ ಇಬ್ಬರು ಗಾಯಗೊಂಡಿದ್ದಾರೆ.

ಇಂಗ್ಲೆಂಡ್‌ನ ಅತ್ಯಂತ ದೊಡ್ಡ ಉಕ್ಕು ಕೈಗಾರಿಕೆಯಾಗಿರುವ ಟಾಟಾ ಸ್ಟೀಲ್ ಲಿಮಿಟೆಡ್‌ನ ಪೋರ್ಟ್ ಟ್ಯಾಲ್ಬೋಟ್‌ನಲ್ಲಿರುವ ಘಟಕದಲ್ಲಿ ಈ ಘಟನೆ ನಡೆದಿದೆ. ಕನಿಷ್ಠ ಮೂರು ಬಾರಿ ಸ್ಫೋಟದ ಸದ್ದು ಕೇಳಿಸಿದೆ. ಇಬ್ಬರಿಗೆ ಆಗಿರುವ ಗಾಯ ಅಪಾಯಕಾರಿಯೇನಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ರಿಪೇರಿ ವೇಳೆ ಏರ್ ಇಂಡಿಯಾ ವಿಮಾನದಲ್ಲಿ ಬೆಂಕಿ: ವೈರಲ್ ವಿಡಿಯೋ

ಬೆಳಗಿನ 3.35ರ ಸಮಯಕ್ಕೆ ಸ್ಫೋಟ ಸಂಭವಿಸಿದೆ. ಉಕ್ಕು ತಯಾರಿಕೆಗೆ ಸರಕು ಸಾಗಿಸುತ್ತಿದ್ದ ರೈಲು ಒಂದರಿಂದ ಈ ಸ್ಫೋಟ ಸಂಭವಿಸಿದ್ದು, ಅದರಿಂದ ಘಟಕಕ್ಕೆ ಬೆಂಕಿ ತಗುಲಿದೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು.

'ಆರಂಭಿಕ ಮಾಹಿತಿಗಳ ಪ್ರಕಾರ ಮೊಲ್ಟೊನ್ ಮೆಟಲ್ ಸಾಗಿಸುತ್ತಿದ್ದ ರೈಲಿನಿಂದ ಸ್ಫೋಟ ಸಂಭವಿಸಿದೆ. ಈ ಸ್ಫೋಟದಿಂದ ಸಣ್ಣ ಪ್ರಮಾಣದ ಬೆಂಕಿ ಹೊತ್ತಿಕೊಂಡಿದೆ. ಘಟಕದ ಕೆಲವು ಕಟ್ಟಡಗಳಿಗೆ ಇದರಿಂದ ಹಾನಿಯಾಗಿದೆ. ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ' ಎಂದು ಪೊಲೀಸರು ತಿಳಿಸಿದ್ದಾರೆ.

ವೈರಲ್ ವಿಡಿಯೋ: ಚಲಿಸುತ್ತಿದ್ದ ಬೈಕ್ ನಲ್ಲಿ ಬೆಂಕಿ, ಪೊಲೀಸರಿಂದಾಗಿ ಉಳಿದ ಜೀವ!

ಟಾಟಾ ಸ್ಟೀಲ್ 2007ರಲ್ಲಿ ಪೋರ್ಟ್ ಟಾಲ್ಬೋಟ್‌ಅನ್ನು ಖರೀದಿ ಮಾಡಿತ್ತು. ಇದಕ್ಕೆ 12 ಬಿಲಿಯನ್ ಡಾಲರ್ ನೀಡಿತ್ತು. ಇಂಗ್ಲೆಂಡ್‌ನಲ್ಲಿ ಅಷ್ಟೇನೂ ಲಾಭಕರವಾಗಿಲ್ಲದ ಕಾರಣ ಟಾಟಾ ಈ ಪ್ರದೇಶದಲ್ಲಿನ ತನ್ನ ಕೆಲವು ಆಸ್ತಿಗಳನ್ನು ಮಾರುವಂತಾಗಿತ್ತು.

English summary
Two person got miner injuries after a fire broke out following a exposion in Tata Steel Ltd's Europe unit in South Wales Port Talbot.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X