ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಡೆಲ್ಟಾ' ರೂಪಾಂತರಿ ತಡೆಗೆ 2 ಡೋಸ್ ಕೊರೊನಾ ಲಸಿಕೆ ಸಾಕು

|
Google Oneindia Kannada News

ಲಂಡನ್, ಜೂನ್ 16: ಡೆಲ್ಟಾ ರೂಪಾಂತರಿ ತಡೆಗೆ 2 ಡೋಸ್ ಕೊರೊನಾ ಲಸಿಕೆ ಸಾಕು ಎಂದು ಬ್ರಿಟನ್‌ ಆರೋಗ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಎರಡು ಡೋಸ್ ಕೋವಿಡ್ ಲಸಿಕೆ ಪಡೆಯುವುದರಿಂದ ಡೆಲ್ಟಾ ರೂಪಾಂತರಿಯಿಂದ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆಯಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.

ಭಾರತದಲ್ಲಿ ಮೊದಲು ಪತ್ತೆಯಾಗಿದ್ದ B1.617.2 ರೂಪಾಂತರಿ, ಪಬ್ಲಿಕ್ ಹೆಲ್ತ್ ಇಂಗ್ಲೆಂಡ್(ಪಿಎಚ್‌ಇ) ಕೋವಿಡ್ ರೂಪಾಂತರ ನಿಯಮಿತ ವಿಶ್ಲೇಷಣೆ ನಡೆಸುತ್ತಿದೆ.

'ಡೆಲ್ಟಾ ಪ್ಲಸ್' ರೂಪಾಂತರಿ ಬಗ್ಗೆ ಆತಂಕ ಬೇಡ ಎಂದ ತಜ್ಞರು'ಡೆಲ್ಟಾ ಪ್ಲಸ್' ರೂಪಾಂತರಿ ಬಗ್ಗೆ ಆತಂಕ ಬೇಡ ಎಂದ ತಜ್ಞರು

ಇತ್ತೀಚಿನ ವಿಶ್ಲೇಷಣೆಯಲ್ಲಿ ಫೈಜರ್, ಬಯೋಎನ್‌ಟೆಕ್ ಲಸಿಕೆ ಎರಡು ಡೋಸ್ ಪಡೆದರೆ ಆಸ್ಪತ್ರೆಗೆ ದಾಖಲಾಗುವುದರ ವಿರುದ್ಧ ಶೇಕಡಾ 96ರಷ್ಟು ಪರಿಣಾಮಕಾರಿಯಾಗಿದ್ದರೆ, ಆಕ್ಸ್‌ಫರ್ಡ್,ಅಸ್ಟ್ರಾಜೆನೆಕಾ ಲಸಿಕೆ ಎರಡು ಡೋಸ್ ನಿಂದ ಆಸ್ಪತ್ರೆಗೆ ದಾಖಲು ವಿರುದ್ಧ ಶೇಕಡಾ 92ರಷ್ಟು ಪರಿಣಾಮಕಾರಿಯಾಗಿದೆ ಎಂದು ತಿಳಿದುಬಂದಿದೆ.

ಇತ್ತೀಚಿನ ಪಿಹೆಚ್‌ಇ ಮಾಹಿತಿ ಪ್ರಕಾರ ಡೆಲ್ಟಾ ರೂಪಾಂತರದ 14,019 ಪ್ರಕರಣಗಳು ವರದಿಯಾಗಿವೆ. ಅವರಲ್ಲಿ 166 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಏಪ್ರಿಲ್ 12 ಮತ್ತು ಜೂನ್ 4ರ ನಡುವೆ, ಇಂಗ್ಲೆಂಡ್‌ನಲ್ಲಿ ತುರ್ತು ಆಸ್ಪತ್ರೆ ದಾಖಲಾತಿಗಳನ್ನು ಗಮನಿಸುತ್ತಿದ್ದಾರೆ.

''ಎಲ್ಲರೂ ಎರಡೂ ಡೋಸ್ ಪಡೆಯುವುದು, ಅಸ್ತಿತ್ವದಲ್ಲಿರುವ ಮತ್ತು ಮುಂಬರುವ ಎಲ್ಲಾ ರೂಪಾಂತರಗಳ ವಿರುದ್ಧ ಗರಿಷ್ಠ ರಕ್ಷಣೆ ಪಡೆಯಲು ಅತ್ಯಗತ್ಯ'' ಎಂದು ಮೇರಿ ರಾಮ್ಸೆ ತಿಳಿಸಿದ್ದಾರೆ.

 ಲಸಿಕೆ ಕಾರ್ಯಕ್ರಮಕ್ಕೆ ವೇಗ

ಲಸಿಕೆ ಕಾರ್ಯಕ್ರಮಕ್ಕೆ ವೇಗ

ಬ್ರಿಟನ್‌ನಲ್ಲಿ ಲಸಿಕೆ ಕಾರ್ಯಕ್ರಮವು ವೇಗದಲ್ಲಿ ಮುಂದುವರೆದಿದೆ. ಈಗಾಗಲೇ ಸಾವಿರಾರು ಜೀವಗಳನ್ನು ಉಳಿಸಿದೆ. ಈ ಸಾಂಕ್ರಾಮಿಕ ರೋಗದಿಂದ ಹೊರಬರಲು ಇದು ನಮ್ಮ ಮಾರ್ಗವಾಗಿದೆ. 25 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಕರು ತಮ್ಮ ಉಚಿತ ಡೋಸ್ ಗಳನ್ನು ಕಾಯ್ದಿರಿಸುವಂತೆ ಒತ್ತಾಯಿಸಿದರು.

 ಡೆಲ್ಟಾ ರೂಪಾಂತರಿ ವಿರುದ್ಧ ಲಸಿಕೆ ರಕ್ಷಣೆ

ಡೆಲ್ಟಾ ರೂಪಾಂತರಿ ವಿರುದ್ಧ ಲಸಿಕೆ ರಕ್ಷಣೆ

ಲಸಿಕೆಗಳು ಡೆಲ್ಟಾ ರೂಪಾಂತರದಿಂದ ಆಸ್ಪತ್ರೆಗೆ ದಾಖಲು ಮಾಡುವುದರ ವಿರುದ್ಧ ಗಮನಾರ್ಹ ರಕ್ಷಣೆ ನೀಡುತ್ತವೆ ಎಂದು ಈ ಭಾರಿ ಮಹತ್ವದ ಸಂಶೋಧನೆಗಳು ದೃಢಪಡಿಸುತ್ತವೆ ಎಂದು ಪಿಹೆಚ್‌ಇ ರೋಗನಿರೋಧಕ ವಿಭಾಗದ ಮುಖ್ಯಸ್ಥ ಡಾ. ಮೇರಿ ರಾಮ್‌ಸೆ ಹೇಳಿದ್ದಾರೆ.

 ಅಲ್ಫಾಗೆ ಹೋಲಿಕೆ

ಅಲ್ಫಾಗೆ ಹೋಲಿಕೆ

ಅಲ್ಫಾಗೆ ಹೋಲಿಸಿದರೆ ಡೆಲ್ಟಾ ರೂಪಾಂತರದಿಂದ ರೋಗಲಕ್ಷಣದ ಕಾಯಿಲೆಗಳನ್ನು ತಡೆಗಟ್ಟುವಲ್ಲಿ ಒಂದು ಡೋಸ್ ಶೇಕಡಾ 17ರಷ್ಟು ಕಡಿಮೆ ಪರಿಣಾಮಕಾರಿಯಾಗಿದೆ ಎಂದು ಪಿಎಚ್‌ಇ ಈ ಹಿಂದೆ ಪುರಾವೆಗಳನ್ನು ಪ್ರಕಟಿಸಿತ್ತು. ಆದರೆ ಎರಡು ಡೋಸ್‌ಗಳ ನಂತರ ಕೇವಲ ಒಂದು ಸಣ್ಣ ವ್ಯತ್ಯಾಸವಿದೆ.

 ಆಸ್ಪತ್ರೆಯಲ್ಲಿರುವವರ ಸಂಖ್ಯೆ ಕಡಿಮೆ

ಆಸ್ಪತ್ರೆಯಲ್ಲಿರುವವರ ಸಂಖ್ಯೆ ಕಡಿಮೆ

ಈ ಅಂಕಿ ಅಂಶಗಳನ್ನು ಆಲ್ಫಾ ರೂಪಾಂತರದಿಂದ ಆಸ್ಪತ್ರೆಗೆ ದಾಖಲಿಸುವ ಲಸಿಕೆ ಪರಿಣಾಮಕಾರಿತ್ವದೊಂದಿಗೆ ಹೋಲಿಸಬಹುದಾಗಿದೆ. ''ಇದನ್ನು ಮೊದಲು ಇಂಗ್ಲೆಂಡ್‌ನ ಕೆಂಟ್ ಪ್ರದೇಶದಲ್ಲಿ ಗುರುತಿಸಲಾಗಿದೆ. ಈ ಹಿಂದೆ ಇಂಗ್ಲೆಂಡ್ ನಲ್ಲಿ ರೂಪಾಂತರಿ ತೀವ್ರವಾಗಿ ಹರಡಿತ್ತು. ರೂಪಾಂತರಗಳ ವಿರುದ್ಧ ಎರಡು ಡೋಸ್ ಗಳು ಪರಿಣಾಮಕಾರಿ ಎಂಬುದು ಸ್ಪಷ್ಟವಾಗಿದೆ'' ಎಂದು ಯುಕೆ ಆರೋಗ್ಯ ಕಾರ್ಯದರ್ಶಿ ಮ್ಯಾಟ್ ಹ್ಯಾನ್ಕಾಕ್ ಹೇಳಿದರು.

English summary
New analysis by Britain’s health experts concludes for the first time this week that two doses of COVID-19 vaccines are “highly effective” against hospitalisation from the Delta variant – the B1.617.2 extremely transmissible variant first identified in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X