ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರೆಕ್ಸಿಟ್ ಪರಿಣಾಮ: ರಾಜೀನಾಮೆ ನೀಡಲು ಮುಂದಾದ ಥೆರೆಸಾ ಮೇ

|
Google Oneindia Kannada News

ಲಂಡನ್, ಮಾರ್ಚ್ 28: ಸರ್ಕಾರ ಪತನದ ಭೀತಿಯಲ್ಲಿಯೇ ಇಲ್ಲಿ ತನಕ ಅಧಿಕಾರ ನಡೆಸುತ್ತಾ ಬಂದಿದ್ದ ಥೆರೆಸಾ ಮೇ ಅವರು ಬ್ರೆಕ್ಸಿಟ್ ಕುರಿತ ಮುಂದಿನ ಚರ್ಚೆಗೂ ಮುನ್ನವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ.

ಈ ಕುರಿತಂತೆ ತಮ್ಮ ಕನ್ಸರ್ವೇಟಿವ್ ಪಕ್ಷದ ಸಂಸದರ ಜತೆ ನಡೆದ ಸಭೆಯಲ್ಲಿ ಮಾತನಾಡಿದ ಮೇ, ದೇಶ ಹಾಗೂ ಪಕ್ಷದ ಹಿತದೃಷ್ಟಿ ಈ ನಿರ್ಣಯ ಕೈಗೊಂಡಿದ್ದೇನೆ ಎಂದಿದ್ದಾರೆ.

ವಿಶ್ವಾಸಮತ ಗೆದ್ದ ತೆರೆಸಾ ಮೇ, ಉಳಿದ ಬ್ರಿಟನ್ ಸರ್ಕಾರವಿಶ್ವಾಸಮತ ಗೆದ್ದ ತೆರೆಸಾ ಮೇ, ಉಳಿದ ಬ್ರಿಟನ್ ಸರ್ಕಾರ

ಮಾರ್ಚ್ 29ರಂದು ಯುರೋಪಿಯನ್ ಒಕ್ಕೂಟದಿಂದ ಬ್ರಿಟನ್ ಹೊರ ಬರಲು ಮುಹೂರ್ತ ನಿಗದಿಯಾಗಿತ್ತು. ಆದರೆ, ಈಗ ಏಪ್ರಿಲ್ 12ಕ್ಕೆ ಹೊಸ ದಿನಾಂಕ ಸಿದ್ಧವಾಗಿದೆ. ಮೇ ಅವರ ರಾಜತಾಂತ್ರಿಕ ನಡೆಗೆ ಸತತ ಸೋಲುಂಟಾಗಿದೆ.

ಐರೋಪ್ಯ ಒಕ್ಕೂಟದಿಂದ ಬ್ರಿಟನ್‌ ಹೊರಬರುವ ತೀರ್ಮಾನ ಕುರಿತ ಒಪ್ಪಂದಕ್ಕೆ ಬ್ರಿಟನ್ನಿನ ಸಂಸತ್ತಿನಲ್ಲಿ ಈ ಹಿಂದೆ ಎರಡು ಬಾರಿ ಸೋಲುಂಟಾಗಿದೆ. ಇದರಿಂದ ಕನ್ಸರ್ವೇಟಿವ್ ಪಕ್ಷದ ಸರ್ಕಾರ ಅಧಿಕಾರ ಕಳೆದುಕೊಳ್ಳುವ ಭೀತಿ ಎದುರಿಸಿತ್ತು.

'ಬ್ರೆಕ್ಸಿಟ್' ಗದ್ದಲ: ವಿಶ್ವಾಸಮತ ಗೆದ್ದ ತೆರೇಸಾ ಮೇ'ಬ್ರೆಕ್ಸಿಟ್' ಗದ್ದಲ: ವಿಶ್ವಾಸಮತ ಗೆದ್ದ ತೆರೇಸಾ ಮೇ

ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ ವಿಪಕ್ಷ ಲೇಬರ್ ಪಾರ್ಟಿಗೂ ಗೆಲುವು ಸಿಕ್ಕಿರಲಿಲ್ಲ. ಎರಡು ಬಾರಿ ಮೇ ಗೆದ್ದುಕೊಂಡಿದ್ದರು.

ಎರಡು ಬಾರಿ ವಿಶ್ವಾಸಮತ ಗೆದ್ದಿದ್ದ ಪ್ರಧಾನಿ ಥೆರೆಸಾ ಮೇ

ಎರಡು ಬಾರಿ ವಿಶ್ವಾಸಮತ ಗೆದ್ದಿದ್ದ ಪ್ರಧಾನಿ ಥೆರೆಸಾ ಮೇ

ಪ್ರಧಾನಿ ಥೆರೆಸಾ ಮೇ ಅವರು 325-306 ವಿಶ್ವಾಸಮತ ಪಡೆದು, 19 ಮತಗಳ ಅಂತರದಲ್ಲಿ ಗೆದ್ದಿದ್ದಾರೆ. ಆ ಮೂಲಕ ಸರ್ಕಾರವನ್ನು ಉಳಿಸಿಕೊಂಡಿದ್ದಾರೆ. ಮೇ ಅವರ ಕನ್ಸರ್ವೇಟಿವ್ ಪಕ್ಷ ಮತ್ತು ಡೆಮಾಕ್ರಟಿಕ್ ಯೂನಿಯನ್ ಪಕ್ಷದ ಸದಸ್ಯರು ಮೇ ಪರ ಮತ ಚಲಾಯಿಸಿದ್ದರು.

'ಬ್ರೆಕ್ಸಿಟ್' ನಿರ್ಧಾರದ ಬಗ್ಗೆ ಜನಾಭಿಪ್ರಾಯ ಸಂಗ್ರಹ

'ಬ್ರೆಕ್ಸಿಟ್' ನಿರ್ಧಾರದ ಬಗ್ಗೆ ಜನಾಭಿಪ್ರಾಯ ಸಂಗ್ರಹ

ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಬೇರ್ಪಡುವ 'ಬ್ರೆಕ್ಸಿಟ್' ನಿರ್ಧಾರದ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸಲಾಗಿತ್ತು. ಬ್ರೆಕ್ಸಿಟ್ ಪರವಾಗಿ ಹೆಚ್ಚು ಮತಗಳು(2016 ಜೂನ್ 23ರ ಎಣಿಕೆ 51.9%) ಬಿದ್ದಿದ್ದವು. ಜನಾದೇಶದ ಬಳಿಕ ಪ್ರಧಾನಿ ಹುದ್ದೆಗೆ ಡೇವಿಡ್ ಕ್ಯಾಮರೂನ್ ರಾಜೀನಾಮೆ ನೀಡಿದ್ದರು. ಆ ಸ್ಥಾನವನ್ನು ತುಂಬಿದ್ದ ತೆರೇಸಾ ಮೇ ಬ್ರೆಕ್ಸಿಟ್ ಪ್ರಕ್ರಿಯೆಗೆ ಚಾಲನೆ ನೀಡಿದ್ದರು.

ವಿಧೇಯಕ ಪರ ಮತ ಚಲಾಯಿಸುವಂತೆ ಕೋರಿದ್ದ ಮೇ

ವಿಧೇಯಕ ಪರ ಮತ ಚಲಾಯಿಸುವಂತೆ ಕೋರಿದ್ದ ಮೇ

ದೇಶದ ಒಳಿತಿಗಾಗಿ ಈ ವಿಧೇಯಕ ಪರ ಮತ ಚಲಾಯಿಸುವಂತೆ ಮೇ ಸಂಸತ್ ಸದಸ್ಯರಲ್ಲಿ ಮನವಿ ಮಾಡಿದ್ದರು. ಒಂದು ವೇಳೆ ಬ್ರೆಕ್ಸಿಟ್‌ ಒಪ್ಪಂದಕ್ಕೆ ಸಂಸತ್‌ನಲ್ಲಿ ಅನುಮೋದನೆ ದೊರೆಯದಿದ್ದರೆ ಅದು ನಮ್ಮ ಪ್ರಜಾಪ್ರಭುತ್ವದ ದೊಡ್ಡ ದುರಂತ ಮತ್ತು ಕ್ಷಮಿಸಲಾಗದ ನಂಬಿಕೆ ದ್ರೋಹ ಆಗಲಿದೆ ಎಂದು ಮೇ ಎಚ್ಚರಿಕೆ ನೀಡಿದ್ದರು.

ಅಧಿಕೃತವಾಗಿ ಹೊರಗುಳಿಯುತ್ತಿರುವ ಮೊದಲ ದೇಶ

ಅಧಿಕೃತವಾಗಿ ಹೊರಗುಳಿಯುತ್ತಿರುವ ಮೊದಲ ದೇಶ

52: 48 ಒಕ್ಕೂಟಲ್ಲಿ ಉಳಿದುಕೊಳ್ಳುವಂತೆ ಶೇ. 48 ಮತಗಳು ಬಿದ್ದರೆ, ಹೊರಕ್ಕೆ ಹೋಗಲು ತೊಂದರೆ ಇಲ್ಲ ಎಂದು ಶೇ. 52 ಮತಗಳು ಬಿದ್ದವು. 28 ರಾಷ್ಟ್ರಗಳನ್ನೊಳಗೊಂಡ ಯೂರೋಪಿಯನ್ ಒಕ್ಕೂಟದಿಂದ ಬ್ರಿಟನ್ ಇದಿಗ ಅಧಿಕೃತವಾಗಿ ಹೊರಗುಳಿಯುತ್ತಿರುವ ಮೊದಲ ದೇಶ ಎಂಬ ಹಣೆಪಟ್ಟಿ ಕಟ್ಟಿಕೊಂಡಿದೆ.

ಚರ್ಚೆ: ಭಾರತದ ಜತೆ ನಂಟು ಗಟ್ಟಿ ಮಾಡಿಕೊಳ್ಳಲು ತಪ್ಪಿಸಿಕೊಂಡಿತೆ ಯುಕೆ?ಚರ್ಚೆ: ಭಾರತದ ಜತೆ ನಂಟು ಗಟ್ಟಿ ಮಾಡಿಕೊಳ್ಳಲು ತಪ್ಪಿಸಿಕೊಂಡಿತೆ ಯುಕೆ?

English summary
Theresa May tells Conservative MPs she will not remain as UK PM for the next phase of Brexit negotiations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X