ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವಾಸಮತ ಗೆದ್ದ ತೆರೆಸಾ ಮೇ, ಉಳಿದ ಬ್ರಿಟನ್ ಸರ್ಕಾರ

|
Google Oneindia Kannada News

ಲಂಡನ್, ಜನವರಿ 17: ಬ್ರಿಟನ್‌ನ ಕಾರ್ಮಿಕ ಪಕ್ಷವು ಪ್ರಧಾನಿ ತೆರೆಸಾ ಮೇ ವಿರುದ್ಧ ಮಂಡಿಸಿದ್ದ ಅವಿಶ್ವಾಸ ನಿರ್ಣಯಕ್ಕೆ ಸೋಲಾಗಿದ್ದು. ತೆರೆಸಾ ಮೇ ವಿಜಯ ಸಾಧಿಸಿದ್ದಾರೆ.

ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಬರುವ ಬ್ರಿಕ್ಸೆಟ್ ಒಪ್ಪಂದ ಕಳೆದ ವರ್ಷ ಮಾರ್ಚ್‌ ನಲ್ಲಿ ಆಗಿತ್ತು. ಆದರೆ ಇದಕ್ಕೆ ಬ್ರಿಟನ್ ಸಂಸತ್ತಿನ ಒಮ್ಮತ ಇರಲಿಲ್ಲ. ಈ ಒಪ್ಪಂದಕ್ಕೆ ಸಂಸತ್ತಿನಲ್ಲಿ ಸೋಲಾಗಿತ್ತು. ಹಾಗಾಗಿ ವಿರೋಧ ಪಕ್ಷಗಳು ತೆರೆಸಾ ಮೇ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದವು.

Theresa May government survives no-confidence vote after Brexit failure

ಪ್ರಧಾನಿ ತೆರೆಸಾ ವಿರುದ್ಧ ಮಂಡಿಸಿದ್ದ ಅವಿಶ್ವಾಸ ನಿರ್ಣಯಕ್ಕೆ ಇಂದು ಬ್ರಿಟನ್ ಸಂಸತ್ತಿನಲ್ಲಿ ಮತದಾನ ನಡೆದು ಸುಲಭವಾಗಿ ತೆರೆಸಾ ಮೇ ಅವರು ವಿಶ್ವಾಸಮತಗಳನ್ನು ಗಳಿಸಿದ್ದಾರೆ. ಕಾರ್ಮಿಕ ಪಕ್ಷ ಮಂಡಿಸಿದ್ದ ಅವಿಶ್ವಾಸ ನಿರ್ಣಯಕ್ಕೆ ಸೋಲಾಗಿದೆ.

ತೆರೆಸಾ ಮೇ ಸರ್ಕಾರ ಪತನದ ಭೀತಿ, ಮುಳುವಾದ ಬ್ರೆಕ್ಸಿಟ್ ಒಪ್ಪಂದ ತೆರೆಸಾ ಮೇ ಸರ್ಕಾರ ಪತನದ ಭೀತಿ, ಮುಳುವಾದ ಬ್ರೆಕ್ಸಿಟ್ ಒಪ್ಪಂದ

ಪ್ರಧಾನಿ ತೆರೆಸಾ ಮೇ ಅವರು 325-306 ವಿಶ್ವಾಸಮತ ಪಡೆದು, 19 ಮತಗಳ ಅಂತರದಲ್ಲಿ ಗೆದ್ದಿದ್ದಾರೆ. ಆ ಮೂಲಕ ಸರ್ಕಾರವನ್ನು ಉಳಿಸಿಕೊಂಡಿದ್ದಾರೆ. ಮೇ ಅವರ ಕನ್ಸರ್ವೇಟಿವ್ ಪಕ್ಷ ಮತ್ತು ಡೆಮಾಕ್ರಟಿಕ್ ಯೂನಿಯನ್ ಪಕ್ಷದ ಸದಸ್ಯರು ಮೇ ಪರ ಮತ ಚಲಾಯಿಸಿದ್ದಾರೆ.

'ಬ್ರೆಕ್ಸಿಟ್' ಗದ್ದಲ: ವಿಶ್ವಾಸಮತ ಗೆದ್ದ ತೆರೇಸಾ ಮೇ'ಬ್ರೆಕ್ಸಿಟ್' ಗದ್ದಲ: ವಿಶ್ವಾಸಮತ ಗೆದ್ದ ತೆರೇಸಾ ಮೇ

ನಿನ್ನೆಯಷ್ಟೆ (ಜನವರಿ 16)ರಂದು ಇದೇ ಬ್ರಿಟನ್‌ ಸಂಸತ್ತಿನಲ್ಲಿ ಸರ್ಕಾರ ಮಂಡಿಸಿದ ಬ್ರಿಕ್ಸೆಟ್ ಒಪ್ಪಂದಕ್ಕೆ ಭಾರಿ ಸೋಲಾಗಿತ್ತು. ಹಾಗಾಗಿ ಇಂದು ತೆರೆಸಾ ಮೇ ಗೂ ಸೋಲು ಎದುರಾಗುವ ಭೀತಿ ಇತ್ತು. ಆದರೆ ಅವರು ಗೆದ್ದಿದ್ದಾರೆ.

ನೀವು ಗಾಂಧಿ, ನೆಹರೂ ಇರಿಸಿದ್ದ ಜೈಲುಗಳಿವು: ಬ್ರಿಟನ್‌ಗೆ ಮೋದಿ ಖಡಕ್ ಉತ್ತರನೀವು ಗಾಂಧಿ, ನೆಹರೂ ಇರಿಸಿದ್ದ ಜೈಲುಗಳಿವು: ಬ್ರಿಟನ್‌ಗೆ ಮೋದಿ ಖಡಕ್ ಉತ್ತರ

ಜನವರಿ 15ರಂದು ಪ್ರಧಾನಿ ತೆರೇಸಾ ಮೇ ಅವರು ಬ್ರೆಕ್ಸಿಟ್ ಒಪ್ಪಂದ ಪರ ಮತ ಹಾಕುವಂತೆ ಹೌಸ್ ಆಫ್ ಕಾಮನ್ಸ್ ನಲ್ಲಿ ನಿರ್ಣಯ ಮಂಡಿಸಿದ್ದರು. ಇದನ್ನು ಅನುಮೋದಿಸಿ 202 ಮಂದಿ ಮತ ಬಂದಿತ್ತು, 432 ಮಂದಿ ಇದನ್ನು ವಿರೋಧಿಸಿ ಮತ ಚಲಾಯಿಸಿದ್ದಾರೆ. ಹೀಗಾಗಿ, 230ಕ್ಕೂ ಅಧಿಕ ಮತಗಳ ಅಂತರದಲ್ಲಿ ಸರ್ಕಾರಕ್ಕೆ ಮುಖಭಂಗವಾಗಿತ್ತು.

ಅವಿಶ್ವಾಸ ನಿರ್ಣಯದ ವಿರುದ್ಧ ಗೆದ್ದಿರುವ ತೆರೆಸಾ ಮೇ ಅವರು, 'ಸೋಮವಾರದಂದು ಹೊಸ ಮಾದರಿಯ ಬ್ರಿಕ್ಸೆಟ್ ಒಪ್ಪಂದದೊಂದಿಗೆ ಸಂಸತ್ತಿಗೆ ಆಗಮಿಸುವುದಾಗಿ' ಹೇಳಿದ್ದಾರೆ.

English summary
Theresa May government survived no-confidence vote moved by Labour Party leader Jeremy Corbyn a day after the crushing defeat for Brexit deal. Theresa May comfortably won the no-confidence vote, by 325 to 306 - a majority of 19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X