ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಯ್ಯೋ ದೇವರೇ.. HIV, ಡೆಂಘೀ ತರಹ ಕೊರೊನಾಗೂ ಲಸಿಕೆ ಸಿಗುವುದಿಲ್ಲವೇ?

|
Google Oneindia Kannada News

ಲಂಡನ್, ಮೇ 7: ಮಾರಣಾಂತಿಕ ಕೊರೊನಾ ವೈರಸ್ ಆರ್ಭಟ ದಿನೇ ದಿನೇ ಹೆಚ್ಚಾಗುತ್ತಿದೆ. ವಿಶ್ವದಾದ್ಯಂತ ಇಲ್ಲಿಯವರೆಗೂ 38,22,295 ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. 2,65,116 ಜನರನ್ನು ಕೋವಿಡ್-19 ಬಲಿ ಪಡೆದಿದೆ.

ಕೊರೊನಾ ವೈರಸ್ ಅಟ್ಟಹಾಸ ಯಾವಾಗ ನಿಲ್ಲುತ್ತೋ, ಪರಿಣಾಮಕಾರಿ ಲಸಿಕೆ ಯಾವಾಗ ಸಿದ್ಧವಾಗುತ್ತೋ.. ಅಂತ ಪ್ರಪಂಚದಾದ್ಯಂತ ಜನ ದಿನಗಳನ್ನು ಎಣಿಸುತ್ತಿರುವಾಗಲೇ ವಿಶ್ವ ಆರೋಗ್ಯ ಸಂಸ್ಥೆಯ ಮಹಾ ನಿರ್ದೇಶಕರ ವಿಶೇಷ ರಾಯಭಾರಿ ಮತ್ತು ಕೊರೊನಾ ವೈರಸ್ ಎಕ್ಸ್ ಪರ್ಟ್ ಡೇವಿಡ್ ನಬರೋ ನಿರಾಶಾದಾಯಕ ಮಾತುಗಳನ್ನಾಡಿದ್ದಾರೆ.

ಲಾಕ್ ಡೌನ್ ಮುಗಿದ ಬಳಿಕ ಭಾರತಕ್ಕೆ ಕಾದಿದೆ ಡೇಂಜರ್: WHO ಅಲರ್ಟ್ಲಾಕ್ ಡೌನ್ ಮುಗಿದ ಬಳಿಕ ಭಾರತಕ್ಕೆ ಕಾದಿದೆ ಡೇಂಜರ್: WHO ಅಲರ್ಟ್

''ಕೆಲವು ವೈರಸ್ ಗಳಿಗೆ ಇನ್ನೂ ಲಸಿಕೆ ಕಂಡುಹಿಡಿಯಲು ಸಾಧ್ಯವಾಗಿಲ್ಲ. ಹೀಗಾಗಿ, ಕೊರೊನಾ ವೈರಸ್ ಗೂ ಲಸಿಕೆ ಸಿಗುತ್ತೆ ಎಂದು ಹೇಳುವುದು ಕಷ್ಟ. ಒಂದು ವೇಳೆ ಸಿಕ್ಕರೂ, ಅದು ಸುರಕ್ಷತೆಯ ಎಲ್ಲಾ ಪರೀಕ್ಷೆಗಳನ್ನು ಪಾಸ್ ಮಾಡುತ್ತಾ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ'' ಎಂದು ಡೇವಿಡ್ ನಬರೋ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಅತಿ ಕೆಟ್ಟ ಸಂಭವ

ಅತಿ ಕೆಟ್ಟ ಸಂಭವ

''ಕೋವಿಡ್-19ಗೆ ಲಸಿಕೆ ಸಿಗದಿರುವುದೇ ಅತಿ ಕೆಟ್ಟ ಸಂಭವನೀಯ ಸನ್ನಿವೇಶ'' ಎಂದಿದ್ದಾರೆ ಡೇವಿಡ್ ನಬರೋ.

ವಿಜ್ಞಾನಿಗಳ ತಲೆಯಲ್ಲಿ ಕೊರೆಯುತ್ತಿರುವ ಪ್ರಶ್ನೆ

ವಿಜ್ಞಾನಿಗಳ ತಲೆಯಲ್ಲಿ ಕೊರೆಯುತ್ತಿರುವ ಪ್ರಶ್ನೆ

ನೋವೆಲ್ ಕೊರೊನಾ ವೈರಸ್ ಗಾಗಿ 100 ಕ್ಕೂ ಲಸಿಕೆಗಳು ವಿವಿಧ ಹಂತದ ಕ್ಲಿನಿಕಲ್ ಟ್ರೈಯಲ್ ನಲ್ಲಿವೆ. ಆ ಪೈಕಿ ಕೆಲವೊಂದನ್ನು ಈಗಾಗಲೇ ಮನುಷ್ಯರ ಮೇಲೆ ಪ್ರಯೋಗಿಸಲಾಗಿದೆ. ಹೀಗಿರುವಾಗಲೇ, ''ವರ್ಷಗಳ ಕಾಲ ಸಂಶೋಧನೆ ನಡೆಸಿದರೂ, ಎಚ್.ಐ.ವಿ ಮತ್ತು ಡೆಂಘೀಗೆ ಲಸಿಕೆ ಕಂಡು ಹಿಡಿಯಲು ಸಾಧ್ಯವಾಗದಂತೆ, ಕೋವಿಡ್-19 ಗೂ ಲಸಿಕೆ ಸಿಗದಿದ್ದರೆ?'' ಎಂಬ ಪ್ರಶ್ನೆ ಹಲವು ವಿಜ್ಞಾನಿಗಳ ತಲೆಯಲ್ಲಿ ಕೊರೆಯುತ್ತಿದೆ.

ಅಲರ್ಟ್ ಪ್ಲೀಸ್: ಕೊರೊನಾ ವಿಚಾರದಲ್ಲಿ ಮತ್ತೊಂದು ಕರೆಗಂಟೆ ಮೊಳಗಿಸಿದ WHO!ಅಲರ್ಟ್ ಪ್ಲೀಸ್: ಕೊರೊನಾ ವಿಚಾರದಲ್ಲಿ ಮತ್ತೊಂದು ಕರೆಗಂಟೆ ಮೊಳಗಿಸಿದ WHO!

ಲಕ್ಷಾಂತರ ಜನರ ಬಲಿ ಪಡೆದಿರುವ ಎಚ್.ಐ.ವಿ

ಲಕ್ಷಾಂತರ ಜನರ ಬಲಿ ಪಡೆದಿರುವ ಎಚ್.ಐ.ವಿ

ನಾಲ್ಕು ದಶಕಗಳಿಂದ ಸುಮಾರು 32 ಮಿಲಿಯನ್ ಜನರನ್ನು ಬಲಿ ಪಡೆದಿರುವ ಎಚ್.ಐ.ವಿಯ ಲಸಿಕೆಗಾಗಿ ಜಗತ್ತು ಇನ್ನೂ ಎದುರು ನೋಡುತ್ತಿದೆ. ಹಾಗೇ, ಪ್ರತಿ ವರ್ಷ ಸುಮಾರು 4 ಲಕ್ಷ ಜನರನ್ನು ಬಾಧಿಸುವ ಡೆಂಘೀಗೂ ಲಸಿಕೆ ಇನ್ನೂ ಲಭಿಸಿಲ್ಲ.

12-18 ತಿಂಗಳಲ್ಲಿ ಲಸಿಕೆ ಸಿಗುತ್ತಾ.?

12-18 ತಿಂಗಳಲ್ಲಿ ಲಸಿಕೆ ಸಿಗುತ್ತಾ.?

ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಲರ್ಜಿ ಅಂಡ್ ಇನ್ಫೆಕ್ಷಿಯಸ್ ಡಿಸೀಸಸ್ ನ ನಿರ್ದೇಶಕ ಡಾ.ಆಂಥೋನಿ ಫೌಸಿ ಪ್ರಕಾರ, ಮುಂದಿನ 12-18 ತಿಂಗಳ ಒಳಗೆ ಕೊರೊನಾ ವೈರಸ್ ಗೆ ಲಸಿಕೆ ಸಿಗುವ ಸಾಧ್ಯತೆ ಇದೆ. ಲಸಿಕೆ ಕಂಡು ಹಿಡಿಯುವ ನಿಟ್ಟಿನಲ್ಲಿ ಆಕ್ಸ್ ಫರ್ಡ್ ವ್ಯಾಕ್ಸಿನ್ ಗ್ರೂಪ್ ಈಗಾಗಲೇ ಮುನ್ನಡೆ ಸಾಧಿಸಿದೆ. ಅದಕ್ಕೆ ಸದ್ಯಕ್ಕೆ ChAdOx1 nCoV-19 ಎಂದು ಹೆಸರಿಸಲಾಗಿದೆ.

ಚೀನಾಗಿಂತ ಯೂರೋಪ್, USನಲ್ಲಿ ಕೊರೊನಾ ಆರ್ಭಟ ಯಾಕೆ? ಭಯಾನಕ ಮಾಹಿತಿ ಬಯಲು!ಚೀನಾಗಿಂತ ಯೂರೋಪ್, USನಲ್ಲಿ ಕೊರೊನಾ ಆರ್ಭಟ ಯಾಕೆ? ಭಯಾನಕ ಮಾಹಿತಿ ಬಯಲು!

English summary
There may never be a Covid-19 Vaccine says WHO Coronavirus Expert David Nabarro.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X