ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

UK ಸಮುದ್ರತೀರದಲ್ಲಿ ಗ್ರೀನ್‌ಲ್ಯಾಂಡ್ ಶಾರ್ಕ್ ಪತ್ತೆ: ಇದರ ಜೀವಿತಾವಧಿ ಎಷ್ಟು ಗೊತ್ತಾ?

|
Google Oneindia Kannada News

ಲಂಡನ್ ಮಾರ್ಚ್ 18: ಭೂಮಿಯ ಮೇಲೆ ಅತಿ ಉದ್ದದ ಜೀವಿ ಬ್ರಿಟನ್ ಸಮುದ್ರದಲ್ಲಿ ಪತ್ತೆಯಾಗಿದೆ. ಈ ಜೀವಿಯು ಭಯಾನಕ ಗ್ರೀನ್‌ಲ್ಯಾಂಡ್ ಶಾರ್ಕ್ ಎಂದು ಕರೆಯಲಾಗುತ್ತದೆ. ಇದು ಕಾಣಿಸಿಕೊಳ್ಳುವುದು ತೀರಾ ಅಪರೂಪವಾಗಿದ್ದು ಇಂದಿಗೂ ವಿಜ್ಞಾನಿಗಳು ಅದರ ರಹಸ್ಯಗಳನ್ನು ಬಹಿರಂಗಪಡಿಸಲು ಸಾಧ್ಯವಾಗಿಲ್ಲ. ಗ್ರೀನ್‌ಲ್ಯಾಂಡ್ ಶಾರ್ಕ್‌ನ ಜೀವಿತಾವಧಿಯು 250 ವರ್ಷಗಳಿಂದ 500 ವರ್ಷಗಳವರೆಗೆ ಜೀವಿಸಬಹುದು. ಆದರೆ ಈ ಗ್ರೀನ್‌ಲ್ಯಾಂಡ್ ಶಾರ್ಕ್ ಮಾನವರ ಕಣ್ಣಿಗೆ ಬಿದ್ದಾಗ ಸಾವನ್ನಪ್ಪಿರುವುದು ಕಂಡುಬಂದಿದೆ. ಈ ಮೃತ ಶಾರ್ಕ್‌ನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು ಇದು ನೂರಾರು ವರ್ಷಗಳ ಹಿಂದೆ ಜನಿಸಿರಬಹುದು ಎಂದು ಅಂದಾಜಿಸಲಾಗಿದೆ. ಜೊತೆಗೆ ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.

ಮಿರರ್‌ನಲ್ಲಿನ ವರದಿಯ ಪ್ರಕಾರ, ಬ್ರಿಟನ್‌ನ ಸುಂದರವಾದ ಕಡಲತೀರದಲ್ಲಿ ಗ್ರೀನ್‌ಲ್ಯಾಂಡ್ ಶಾರ್ಕ್ ಕಂಡುಬಂದಿದೆ. ಇದು ಎಲ್ಲಾ ವಿಧದ ಜಲ ಜೀವಿಗಳಲ್ಲಿ ಅತಿ ಉದ್ದದ ಜೀವಿಯಾಗಿದೆ. ಇದರ ವಯಸ್ಸು ಕನಿಷ್ಠ 250 ವರ್ಷದಿಂದ 500 ವರ್ಷ ಅಥವಾ ಅದಕ್ಕಿಂತ ಹೆಚ್ಚು ಇರಬಹುದು. ಇದನ್ನು ಮೊದಲು ಸ್ಥಳೀಯರೊಬ್ಬರು ಮಾರ್ಚ್ 13 ರಂದು ಕಾರ್ನ್‌ವಾಲ್‌ನ ಪೆನ್ಜಾನ್ಸ್ ಬಳಿಯ ನ್ಯೂಲಿನ್ ಹಾರ್ಬರ್ ಬೀಚ್‌ನಲ್ಲಿ ಗುರುತಿಸಿದರು. ಆದರೆ, ದುಃಖದ ಸಂಗತಿಯೆಂದರೆ ಇದನ್ನು ನೋಡಿದಾಗ ಅದು ಸಾವನ್ನಪ್ಪಿತ್ತು. ಕಾರ್ನ್‌ವಾಲ್ ವೈಲ್ಡ್‌ಲೈಫ್ ಟ್ರಸ್ಟ್ ಈ ಘಟನೆಯ ಬಗ್ಗೆ ತಕ್ಷಣವೇ ಮೆರೈನ್ ಸ್ಟ್ರಾಂಡಿಂಗ್ಸ್ ನೆಟ್‌ವರ್ಕ್ ಅನ್ನು ಸಂಪರ್ಕಿಸಿದೆ ಮತ್ತು ಅವರು ಬರುವಷ್ಟರಲ್ಲಿ ಸಮುದ್ರದ ಅಲೆಗಳು ಅಪರೂಪದ ಜೀವಿಯನ್ನು ಮತ್ತೆ ಸಮುದ್ರಕ್ಕೆ ಕೊಂಡೊಯ್ದಿದ್ದವು.

ವಿಡಿಯೋ: 'ನಾಗ'ಪ್ಪನ್ನು ಕೆಣಕಿ ಆಸ್ಪತ್ರೆ ಹಾಸಿಗೆ ಹಿಡಿದ ಸಾಯದ್!ವಿಡಿಯೋ: 'ನಾಗ'ಪ್ಪನ್ನು ಕೆಣಕಿ ಆಸ್ಪತ್ರೆ ಹಾಸಿಗೆ ಹಿಡಿದ ಸಾಯದ್!

ಗ್ರೀನ್‌ಲ್ಯಾಂಡ್ ಶಾರ್ಕ್ ಶವ ಪತ್ತೆ

ಗ್ರೀನ್‌ಲ್ಯಾಂಡ್ ಶಾರ್ಕ್ ಶವ ಪತ್ತೆ

ಶವವಾಗಿ ಮತ್ತೆಯಾಗಿದ್ದ ಶಾರ್ಕ್ ಸಾಮಾನ್ಯ ಶಾರ್ಕ್ ಅಲ್ಲ ಎಂದು ಕಂಡುಕೊಂಡ ಸಿಬ್ಬಂದಿಗಳು ಅದಕ್ಕಾಗಿ ಹುಡುಕಾಟ ನಡೆಸಿದ್ದರು. ಹೀಗಾಗಿ ತುರ್ತು ಪರಿಸ್ಥಿತಿಯಲ್ಲಿ ಅದರ ಪತ್ತೆಗೆ ಕಾರ್ಯಾಚರಣೆ ಆರಂಭಿಸಲಾಗಿತ್ತು. ಅಂತಿಮವಾಗಿ ನಾಲ್ಕು ದಿನಗಳ ಹುಡುಕಾಟದ ನಂತರ ಕಳೆದ ಬುಧವಾರ, ಮೆರ್ಮೇಯ್ಡ್ ಪ್ಲೆಷರ್ ಟ್ರಿಪ್ಸ್ ಸಿಬ್ಬಂದಿ ಈ ಶಾರ್ಕ್ನ ಮೃತದೇಹವನ್ನು ಕಂಡು ಅದನ್ನು ಕಷ್ಟಪಟ್ಟು ದಡಕ್ಕೆ ಎಳೆ ತಂದರು.

ಮನುಷ್ಯರ ಕಣ್ಣಿಗೆ ಬೀಳುವುದು ಅಪರೂಪ

ಮನುಷ್ಯರ ಕಣ್ಣಿಗೆ ಬೀಳುವುದು ಅಪರೂಪ

ಗ್ರೀನ್ಲ್ಯಾಂಡ್ ಶಾರ್ಕ್ಗಳು ​​ಮೂಲತಃ ಆರ್ಕ್ಟಿಕ್ ಮತ್ತು ಉತ್ತರ ಅಟ್ಲಾಂಟಿಕ್ ಸಾಗರದಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಯುನೈಟೆಡ್ ಕಿಂಗ್‌ಡಮ್‌ನ ಸುತ್ತ ಆಳ ಸಮುದ್ರದಲ್ಲಿ ಇದನ್ನು ಕಾಣಬಹುದಾದರೂ, UK ಸಮುದ್ರದಲ್ಲಿ ಇದನ್ನು ಮನುಷ್ಯರು ಕಾಣುವುದು ತೀರಾ ಅಪರೂಪ ಎಂದು ಮೆರೈನ್ ಕನ್ಸರ್ವೇಶನ್ ಸೊಸೈಟಿ ಹೇಳಿದೆ. ಇದಕ್ಕೂ ಮೊದಲು ಯುಕೆ ಸಮುದ್ರದಲ್ಲಿ ಒಂದು ಗ್ರೀನ್‌ಲ್ಯಾಂಡ್ ಶಾರ್ಕ್ ಕಾಣಿಸಿಕೊಂಡಿತ್ತು. 2013ರಲ್ಲಿ ಈ ಗ್ರೀನ್‌ಲ್ಯಾಂಡ್ ಶಾರ್ಕ್‌ನ ಮೃತ ದೇಹ ಕಂಡುಬಂದಿತ್ತು.

ಗ್ರೀನ್‌ಲ್ಯಾಂಡ್ ಶಾರ್ಕ್ ಎಷ್ಟು ಕಾಲ ಬದುಕುತ್ತೆ?

ಗ್ರೀನ್‌ಲ್ಯಾಂಡ್ ಶಾರ್ಕ್ ಎಷ್ಟು ಕಾಲ ಬದುಕುತ್ತೆ?

ಈಗ ಈ ಶಾರ್ಕ್‌ನ ಮರಣೋತ್ತರ ಪರೀಕ್ಷೆಯನ್ನು ಕೆಲವು ಕಾರ್ಯವಿಧಾನಗಳ ಅಡಿಯಲ್ಲಿ ಮಾಡಲಾಗುತ್ತದೆ ಎಂದು ಮೆರೈನ್ ಸ್ಟ್ರಾಂಡಿಂಗ್ಸ್ ನೆಟ್‌ವರ್ಕ್ ಹೇಳಿದೆ. ಬಹುಶಃ ಆಗ ಮಾತ್ರ ಅದರ ಪ್ರಸ್ತುತ ವಯಸ್ಸು ಮತ್ತು ಇತರ ವಿಷಯಗಳು ಖಚಿತವಾಗಿ ತಿಳಿಯಬಹುದು. ಮೆರ್ಮೇಯ್ಡ್ ಪ್ಲೆಷರ್ ಟ್ರಿಪ್ಸ್‌ನ ವಕ್ತಾರರು ಹೇಳುವಂತೆ, ಗ್ರೀನ್‌ಲ್ಯಾಂಡ್ ಶಾರ್ಕ್ ಎಲ್ಲಾ ಶಾರ್ಕ್‌ ಜಾತಿಗಳ ದೀರ್ಘಾವಧಿಯ ಜೀವಿತಾವಧಿಯನ್ನು ಮೀರಿದೆ. ಇದರ ವಯಸ್ಸು 250 ರಿಂದ 500 ವರ್ಷಗಳವರೆಗೆ ಇರಬಹುದು ಎಂದು ಅಂದಾಜಿಸಲಾಗಿದೆ. ನೂರಾರು ವರ್ಷಗಳ ಹಿಂದೆ ಅಂದರೆ 'ಇಂಗ್ಲೆಂಡ್ ರಾಜ ಹೆನ್ರಿ VIIIರ ಆಳ್ವಿಕೆಯ(1509-47) ಕಾಲದಲ್ಲಿ ಇದು ಜನಿಸಿರಬಹುದು. ಅಂದರೆ ಅದು ಜೂನ್ 28, 1491 ರಂದು ಜನಿಸಿರುವ ಸಾಧ್ಯತೆ ಇದೆ ಎಂದಿದ್ದಾರೆ.

ವಿಶ್ವದ ಅತಿದೊಡ್ಡ ಪರಭಕ್ಷಕ ಶಾರ್ಕ್

ವಿಶ್ವದ ಅತಿದೊಡ್ಡ ಪರಭಕ್ಷಕ ಶಾರ್ಕ್

ಗ್ರೀನ್‌ಲ್ಯಾಂಡ್ ಶಾರ್ಕ್ ವಿಶ್ವದ ಅತಿದೊಡ್ಡ ಪರಭಕ್ಷಕ ಶಾರ್ಕ್ ಆಗಿದೆ. ಅದರ ದೀರ್ಘಾವಧಿಯ ಜೀವಿತಾವಧಿಯು ವಿಜ್ಞಾನಿಗಳಿಗೆ ರಹಸ್ಯವಾಗಿ ಉಳಿದಿದೆ. ವಿಜ್ಞಾನಿಗಳು ಸಾಮಾನ್ಯವಾಗಿ ಅದರ ಕಣ್ಣಿನ ಮಸೂರವನ್ನು ಕಾರ್ಬನ್ ಡೇಟಿಂಗ್ ಮಾಡುವ ಮೂಲಕ ಅದರ ವಯಸ್ಸನ್ನು ನಿರ್ಧರಿಸುತ್ತಾರೆ. ಇದಕ್ಕೂ ಮೊದಲು, ಇದೇ ರೀತಿಯ ಸತ್ತ ಹೆಣ್ಣು ಗ್ರೀನ್‌ಲ್ಯಾಂಡ್ ಶಾರ್ಕ್ ಸಮುದ್ರದ ಆಳದಲ್ಲಿ ಪತ್ತೆಯಾಗಿತ್ತು, ಇದು 272 ರಿಂದ 512 ವರ್ಷಗಳ ವಯಸ್ಸು ಹೊಂದಿತ್ತು ಎಂದು ಹೇಳಲಾಗಿದೆ.

English summary
In accordance with a report in Mirror, a Greenland shark has been discovered on a good looking seaside in Britain, which is the longest dwelling creature amongst all sorts of vertebrates. Its age can vary from no less than 250 years to 500 years or extra. It was first noticed by an area on March 13 at Newlin Harbor Seaside close to Penzance, Cornwall.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X