ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೆಲಂಗಾಣ ಬಂಡವಾಳ ಹೂಡಿಕೆಗೆ ಮಾಡಲು ವಿದೇಶಿ ಕಂಪನಿಗಳಿಗೆ ಕರೆ ಕೊಟ್ಟ ಕೆಟಿಆರ್‌

|
Google Oneindia Kannada News

ಲಂಡನ್/ಹೈದರಾಬಾದ್, ಮೇ 20: ಹೂಡಿಕೆ ಆಕರ್ಷಿಸುವ ಉದ್ದೇಶದಿಂದ ಯುಕೆ ಪ್ರವಾಸ ಕೈಗೊಂಡಿರುವ ತೆಲಂಗಾಣ ಸಚಿವ ಕೆಟಿ ರಾಮರಾವ್ ಲಂಡನ್‌ನಲ್ಲಿ ವಿವಿಧ ಸಭೆಗಳಲ್ಲಿ ಪಾಲ್ಗೊಂಡಿದ್ದಾರೆ. ಇದು ಅವರ ಮೊದಲ ಯುಕೆ ಪ್ರವಾಸವಾಗಿದ್ದು, ತೆಲಂಗಾಣದಲ್ಲಿನ ವ್ಯಾಪಾರ ಮತ್ತು ವಾಣಿಜ್ಯ ಅವಕಾಶಗಳನ್ನು ಅಲ್ಲಿನ ಕಂಪನಿಗಳ ಲೀಡರ್‌ಶಿಪ್ ತಂಡಗಳಿಗೆ ವಿವರಿಸಿದ್ದಾರೆ.

ಯುಕೆ ಇಂಡಿಯಾ ಬ್ಯುಸಿನೆಸ್ ಕೌನ್ಸಿಲ್ ಮತ್ತು ಸೊಸೈಟಿ ಆಫ್ ಮೋಟಾರ್ ಮ್ಯಾನುಫ್ಯಾಕ್ಚರರ್ಸ್ ಅಂಡ್ ಟ್ರೇಡರ್ಸ್ (ಎಸ್‌ಎಂಎಂಟಿ) ಆಯೋಜಿಸಿದ್ದ ದುಂಡು ಮೇಜಿನ ಸಭೆಯಲ್ಲಿ ಕೆಟಿಆರ್, ಆಟೋಮೊಬೈಲ್ ಉದ್ಯಮದ ಪ್ರಮುಖರೊಂದಿಗೆ ಸಂವಾದ ನಡೆಸಿದರು ಮತ್ತು ತೆಲಂಗಾಣ ಬಂಡವಾಳ ಹೂಡಿಕೆಯ ಸ್ವರ್ಗವಾಗಿದ್ದು, ಬ್ರಿಟನ್ ಸೇರಿದಂತೆ ಜಗತ್ತಿನ ಎಲ್ಲ ರಾಷ್ಟ್ರಗಳು ತಮ್ಮ ಕಂಪನಿಗಳನ್ನು ಆರಂಭಿಸಿ ಯಶಸ್ವಿಯಾಗಿ ನಡೆಸುತ್ತಿವೆ ಎಂದು ಸಚಿವ ಕೆಟಿಆರ್ ಹೇಳಿದ್ದಾರೆ.

ಕೆನಡಾದಲ್ಲಿ ಕನ್ನಡದಲ್ಲಿ ಮಾತನಾಡಿದ ಸಂಸದ!ಕೆನಡಾದಲ್ಲಿ ಕನ್ನಡದಲ್ಲಿ ಮಾತನಾಡಿದ ಸಂಸದ!

ದೇಶದಲ್ಲೇ ಅತ್ಯಂತ ವಾಸಯೋಗ್ಯ ನಗರ

ದೇಶದಲ್ಲೇ ಅತ್ಯಂತ ವಾಸಯೋಗ್ಯ ನಗರ

ಹಲವಾರು ಮಾರ್ಕ್ಯೂ ಎಲೆಕ್ಟ್ರಾನಿಕ್ ವೆಹಿಕಲ್ಸ್‌ ಕಂಪನಿಗಳು ತಮ್ಮ ಉದ್ಯಮಗಳನ್ನು ಸ್ಥಾಪಿಸಲು ಈಗಾಗಲೇ ತೆಲಂಗಾಣವನ್ನು ಆಯ್ಕೆ ಮಾಡಿಕೊಂಡಿವೆ. ತೆಲಂಗಾಣ ಈಸ್ ಆಫ್ ಡೂಯಿಂಗ್ ಬಿಸಿನೆಸ್ (Ease of Doing Business) ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿದೆ ಮತ್ತು ಬಲವಾದ ಪರಿಸರ ವ್ಯವಸ್ಥೆಯನ್ನು ಹೊಂದಿದೆ. ತೆಲಂಗಾಣದಲ್ಲಿ ನವೀನ ಕೈಗಾರಿಕಾ ನೀತಿಗಳ ಜೊತೆಗೆ ಅಗತ್ಯ ಮೂಲಸೌಕರ್ಯ, ಭೂಮಿ, ನೀರು, ವಿದ್ಯುತ್ ಮತ್ತು ಗುಣಮಟ್ಟದ ಮಾನವ ಸಂಪನ್ಮೂಲ ಲಭ್ಯವಿದೆ ಕೆಟಿಆರ್‌ ಸಭೆಯಲ್ಲಿ ತಿಳಿಸಿದರು. ಯಾವುದೇ ಕಂಪನಿಗಳು ತಮ್ಮ ರಾಜ್ಯದಲ್ಲಿ ಹೂಡಿಕೆ ಮಾಡುವುದನ್ನು ಸ್ವಾಗತಿಸುವುದಾಗಿ ಅವರು ತಿಳಿಸಿದರು. ದೇಶದ ಇತರ ನಗರಗಳಲ್ಲಿ ಕಾಣದ ಕಾಸ್ಮೋಪಾಲಿಟನ್ ಸಂಸ್ಕೃತಿ ಹೈದರಾಬಾದ್ ಮಾತ್ರ ಎಂದರು. ದೇಶದಲ್ಲೇ ಅತ್ಯಂತ ವಾಸಯೋಗ್ಯ ನಗರ ಎಂಬ ಹೆಗ್ಗಳಿಕೆಗೆ ಹೈದರಾಬಾದ್ ಅನೇಕ ಪ್ರಶಸ್ತಿಗಳನ್ನು ಪಡೆದಿದೆ ಎಂದು ಪ್ರಸ್ತಾಪಿಸಿದರು.

ಹೈದರಾಬಾದ್‌ನಲ್ಲಿ ದೊಡ್ಡ ಕಚೇರಿಗಳು

ಹೈದರಾಬಾದ್‌ನಲ್ಲಿ ದೊಡ್ಡ ಕಚೇರಿಗಳು

ಹೈದರಾಬಾದ್ ನಗರವು ಐಟಿ ಮತ್ತು ಜೀವ ವಿಜ್ಞಾನಗಳ ಕೇಂದ್ರವಾಗಿ ಮಾರ್ಪಟ್ಟಿದೆ. ಫಾರ್ಮಾ, ಜೈವಿಕ ತಂತ್ರಜ್ಞಾನ, ಏರೋಸ್ಪೇಸ್ ಹೀಗೆ ಅನೇಕ ಬಹುರಾಷ್ಟ್ರೀಯ ಕಂಪನಿಗಳು ಯುಎಸ್ ಹೊರತುಪಡಿಸಿ ತಮ್ಮ ದೊಡ್ಡ ಕಚೇರಿಗಳನ್ನು ಹೈದರಾಬಾದ್‌ನಲ್ಲಿ ಮಾತ್ರ ಸ್ಥಾಪಿಸಿವೆ. ಹೈದರಾಬಾದ್ ಆಹಾರ ಸಂಸ್ಕರಣಾ ಕ್ಷೇತ್ರಗಳಿಗೆ ಆದ್ಯತೆಯ ಹೂಡಿಕೆ ತಾಣಗಳಾಗಿವೆ. ನಿಮ್ಮ ಹೂಡಿಕೆಗಾಗಿ ನೀವು ಭಾರತವನ್ನು ಆಯ್ಕೆಮಾಡುವಾಗ, ನೀವು ಸರಿಯಾದ ಗೇಟ್‌ವೇ ಅನ್ನು ಆಯ್ಕೆಮಾಡುವುದು ಮುಖ್ಯವಾಗಿದೆ. ತೆಲಂಗಾಣವು ಅತ್ಯುತ್ತಮ ನೀತಿ. ವಾತಾವರಣವನ್ನು ಹೊಂದಿರುವುದರ ಜೊತೆಗೆ ಪ್ರಗತಿಪರ ನಾಯಕತ್ವವನ್ನು ಹೊಂದಿರುವ ರಾಜ್ಯವಾಗಿದೆ ಎಂದು ಹೇಳಿ ಗಮನ ಸೆಳೆದರು.

ಪಾಮ್ ಆಯಿಲ್ ರಫ್ತು ನಿರ್ಬಂಧ ತೆರವುಗೊಳಿಸಲಿದೆ ಇಂಡೋನೇಷ್ಯಾಪಾಮ್ ಆಯಿಲ್ ರಫ್ತು ನಿರ್ಬಂಧ ತೆರವುಗೊಳಿಸಲಿದೆ ಇಂಡೋನೇಷ್ಯಾ

ಬ್ರಿಟಿಷ್‌ ಸಚಿವರೊಂದಿಗೆ ಮಾತುಕತೆ

ಬ್ರಿಟಿಷ್‌ ಸಚಿವರೊಂದಿಗೆ ಮಾತುಕತೆ

ಭಾರತ ಮತ್ತು ಇಂಗ್ಲೆಂಡ್ ನಡುವೆ ದಶಕಗಳಿಂದ ಅಸ್ತಿತ್ವದಲ್ಲಿರುವ ವ್ಯಾಪಾರ ಮತ್ತು ವಾಣಿಜ್ಯ ಬಾಂಧವ್ಯದ ಹಿನ್ನೆಲೆಯಲ್ಲಿ ತೆಲಂಗಾಣವನ್ನು ತಮ್ಮ ಮೊದಲ ಆದ್ಯತೆಯನ್ನಾಗಿ ಮಾಡಲು ಹೂಡಿಕೆ ಮಾಡಲು ಬರುವ ಕಂಪನಿಗಳಿಗೆ ಕೆಟಿಆರ್ ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಸಚಿವ ಕೆಟಿಆರ್ ಅವರು ಬ್ರಿಟಿಷ್ ಅಂತಾರಾಷ್ಟ್ರೀಯ ವ್ಯಾಪಾರ ಸಚಿವ ರನಿಲ್ ಜಯವರ್ಧನಾ ಅವರೊಂದಿಗೆ ಸಭೆ ನಡೆಸಿದರು. ತೆಲಂಗಾಣ ರಾಜ್ಯ ಸರ್ಕಾರದ ನೀತಿಗಳು, ಕೈಗಾರಿಕಾ ವಲಯದಲ್ಲಿ ಸರ್ಕಾರದ ಆದ್ಯತೆಗಳು, ರಾಜ್ಯದಲ್ಲಿ ಮೂಲಸೌಕರ್ಯ ಮತ್ತು ಹೂಡಿಕೆ ಅವಕಾಶಗಳಿಗೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಇಬ್ಬರೂ ಕೆಲಕಾಲ ಚರ್ಚಿಸಿದರು.

ಹಲವಾರು ವಿದೇಶಿ ಸಂಸ್ಥೆಗಳ ಜೊತೆಗೆ ಮತ್ತಷ್ಟು ಸಭೆ

ಹಲವಾರು ವಿದೇಶಿ ಸಂಸ್ಥೆಗಳ ಜೊತೆಗೆ ಮತ್ತಷ್ಟು ಸಭೆ

ತೆಲಂಗಾಣ ಆಯೋಜಿಸಿರುವ ಬಯೋ ಏಷ್ಯಾ ಸಮ್ಮೇಳನದಲ್ಲಿ ಭಾಗವಹಿಸುವಂತೆ ಜಯವರ್ಧನೆ ಅವರಿಗೆ ಆಹ್ವಾನ ನೀಡಿದರು. ಎರಡು ವಿಭಿನ್ನ ಸಭೆಗಳಲ್ಲಿ ಪಿಯರ್ಸನ್ ಕಂಪನಿ ಮತ್ತು ಕ್ರಾನ್‌ಫೀಲ್ಡ್ ವಿಶ್ವವಿದ್ಯಾಲಯದ ಉಪಕುಲಪತಿಗಳ ಲೀಡರ್‌ಶಿಪ್‌ ತಂಡವನ್ನು ಕೂಡ ಸಚಿವ ಕೆಟಿಆರ್ ಭೇಟಿಯಾದರು. ಇದೇ ಸಂದರ್ಭದಲ್ಲಿ ಎಚ್‌ಎಸ್‌ಬಿಸಿ ಸಂಸ್ಥೆಯ ಟೆಕ್ನಾಲಜಿ ಮತ್ತು ಸ್ಟ್ರಾಟೆಜಿಕ್‌ ಸರ್ವೀಸ್‌ ಗ್ರೂಪ್ ಅಧಿಕಾರಿಗಳನ್ನು ಭೇಟಿ ಮಾಡಿ ತೆಲಂಗಾಣದಲ್ಲಿ ವ್ಯಾಪಾರವನ್ನು ವಿಸ್ತರಿಸುತ್ತಿರುವ ಸಂಸ್ಥೆಯ ಬದ್ಧತೆಯನ್ನು ಕೊಂಡಾಡಿದರು. ತೆಲಂಗಾಣ ಸಚಿವ ಹಲವಾರು ವಿದೇಶಿ ಸಂಸ್ಥೆಗಳ ಜೊತೆಗೆ ಮತ್ತಷ್ಟು ಸಭೆಯನ್ನು ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

English summary
Telangana Minister KT Rama Rao on Thursday held a series of meetings with the top leadership of various companies in London.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X