ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನನ್ನ ಹಣ ತಗೊಂಡು ಜೆಟ್ ಏರ್‌ವೇಸ್ ಉಳಿಸಿ: ಹೀಗೆಂದಿದ್ದು ವಿಜಯ್ ಮಲ್ಯ!

|
Google Oneindia Kannada News

ಲಂಡನ್, ಮಾರ್ಚ್ 26: ನಿರ್ವಹಣೆ ವೆಚ್ಚ, ಸಿಬ್ಬಂದಿ ವೇತನ ಭರಿಸಲಾಗದೆ ಆರ್ಥಿಕ ಸಂಕಷ್ಟದಿಂದ ಮುಚ್ಚುವ ಹಂತಕ್ಕೆ ತಲುಪಿರುವ ಜೆಟ್ ಏರ್‌ವೇಸ್ ವಿಮಾನಯಾನ ಸಂಸ್ಥೆಯನ್ನು ಉಳಿಸಲು ದೊಡ್ಡ ಉದ್ಯಮಿಯೊಬ್ಬರು ಮುಂದೆ ಬಂದಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಈ ಉದ್ಯಮಿ ಬೇರಾರೂ ಅಲ್ಲ, ಬ್ಯಾಂಕುಗಳಿಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿ ಲಂಡನ್‌ನಲ್ಲಿ ಆಶ್ರಯ ಪಡೆದುಕೊಂಡಿರುವ ಆರೋಪದಡಿ 'ದೇಶ್ರಭ್ರಷ್ಟ ಆರ್ಥಿಕ ಅಪರಾಧಿ' ಎಂದು ಘೋಷಿತವಾಗಿರುವ ಮದ್ಯ ಉದ್ಯಮಿ ವಿಜಯ್ ಮಲ್ಯ.

 ಜೆಟ್ ಏರ್‌ವೇಸ್ ಮಂಡಳಿ ತ್ಯಜಿಸಿದ ಸಂಸ್ಥಾಪಕ ಗೋಯಲ್ ದಂಪತಿ ಜೆಟ್ ಏರ್‌ವೇಸ್ ಮಂಡಳಿ ತ್ಯಜಿಸಿದ ಸಂಸ್ಥಾಪಕ ಗೋಯಲ್ ದಂಪತಿ

ಈ ಸಂಬಂಧ ಅವರು ಸರಣಿ ಟ್ವೀಟ್‌ಗಳನ್ನು ಮಾಡಿದ್ದಾರೆ. ತಾವು ನೀಡುವ ಹಣವನ್ನು ಬಳಸಿಕೊಂಡು ಜೆಟ್ ಏರ್‌ಲೈನ್ಸ್ ಅನ್ನು ಉಳಿಸಿ ಎಂದಿದ್ದಾರೆ.

ಸಾಲದ ಸುಳಿಯಲ್ಲಿ ಸಿಲುಕಿದ್ದ ಕಿಂಗ್ ಫಿಶರ್ ವಿಮಾನಯಾನ ಸಂಸ್ಥೆಯನ್ನು ನಡೆಸಲು ಸಾಧ್ಯವಾಗದೆ ಸ್ಥಗಿತಗೊಳಿಸಿದ್ದ ವಿಜಯ್ ಮಲ್ಯ, ಎನ್‌ಡಿಎ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಎನ್‌ಡಿಎ ಸರ್ಕಾರ ಜೆಟ್ ಏರ್‌ ವೇಸ್ ಉಳಿಸಿಕೊಳ್ಳಲು ಸಾರ್ವಜನಿಕ ಬ್ಯಾಂಕುಗಳ ಮೂಲಕ ಪ್ರಯತ್ನಿಸುತ್ತಿದೆ. ಆದರೆ, ಇದೇ ಪ್ರಯತ್ನವನ್ನು ಕಿಂಗ್‌ಫಿಶರ್‌ಗೆ ಮಾಡಲಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಸಂಬಳವಿಲ್ಲದೆ ಅಮ್ಮನ ಒಡವೆ ಮಾರುವ ಸ್ಥಿತಿಗೆ ಬಂದ ಪೈಲಟ್‌ಗಳುಸಂಬಳವಿಲ್ಲದೆ ಅಮ್ಮನ ಒಡವೆ ಮಾರುವ ಸ್ಥಿತಿಗೆ ಬಂದ ಪೈಲಟ್‌ಗಳು

ನನ್ನ ಆಸ್ತಿ ಮಾರಿ ಹಣ ಕೊಡುತ್ತೇನೆ ಎಂದರೂ ಬ್ಯಾಂಕುಗಳು ತೆಗೆದುಕೊಳ್ಳಲು ಸಿದ್ಧವಿಲ್ಲ. ಅದನ್ನಾದರೂ ಪಡೆದುಕೊಂಡು ಜೆಟ್ ಏರ್‌ವೇಸ್ ಉಳಿಸಲು ಬಳಸಿ ಎಂದು ಸಲಹೆ ನೀಡಿದ್ದಾರೆ.

ಲಂಡನ್‌ನಲ್ಲಿರುವ ವಿಜಯ್ ಮಲ್ಯ ಅವರು ಮಾಡಿರುವ ಸರಣಿ ಟ್ವೀಟ್‌ಗಳಲ್ಲಿ ಏನೇನಿದೆ? ನೋಡಿ..

ಕಿಂಗ್ ಫಿಶರ್‌ಗೂ ಮಾಡಿದ್ದರೆ...?

ಜೆಟ್‌ಏರ್‌ವೇಸ್‌ನ ಉದ್ಯೋಗ, ಸಂಪರ್ಕ ಮತ್ತು ಉದ್ಯಮವನ್ನು ಉಳಿಸಲು ಸಾರ್ವಜನಿಕ ಬ್ಯಾಂಕುಗಳು ಮುಂದಾಗಿರುವುದನ್ನು ಕಂಡು ಸಂತಸವಾಗುತ್ತಿದೆ. ಇದೇ ರೀತಿ ಕಿಂಗ್‌ಫಿಶರ್‌ಗೂ ಮಾಡಬೇಕಿತ್ತೆಂದು ಬಯಸುತ್ತೇನೆ.

ಯುಪಿಎಯಿಂದ ಎನ್‌ಡಿಎಗೆ ಏನು ಬದಲಾಗಿದೆ?

ನಾನು ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಬರೆದ ಪತ್ರಗಳನ್ನು ಬಿಜೆಪಿ ವಕ್ತಾರರು ಸ್ಫುಟವಾಗಿ ಓದಿದ್ದರು. ಯುಪಿಎ ಸರ್ಕಾರದ ಅವಧಿಯಲ್ಲಿ ಸಾರ್ವಜನಿಕ ಬ್ಯಾಂಕುಗಳು ಕಿಂಗ್ ಫಿಶರ್ ಏರ್‌ಲೈನ್ಸ್‌ಗೆ ಬೆಂಬಲ ನೀಡಿ ಪ್ರಮಾದ ಎಸಗಿದ್ದವು ಎಂದು ಆರೋಪಿಸಿದ್ದವು. ಹಾಲಿ ಪ್ರಧಾನಿಗೆ ನಾನು ಪತ್ರ ಬರೆದಿದ್ದಕ್ಕೆ ಮಾಧ್ಯಮಗಳು ನನ್ನನ್ನು ಬಲಿಪಶುವನ್ನಾಗಿ ಮಾಡಿದ್ದವು. ಈಗ ಎನ್‌ಡಿಎ ಸರ್ಕಾರದಡಿ ಏನು ಬದಲಾಗಿದೆ ಎಂದು ನನಗೆ ಅಚ್ಚರಿಯಾಗುತ್ತಿದೆ ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ.

 ಬೆಂಗಳೂರಿನಲ್ಲಿರುವ ವಿಜಯ್ ಮಲ್ಯ ಆಸ್ತಿ ಜಪ್ತಿಗೆ ಆದೇಶ ಬೆಂಗಳೂರಿನಲ್ಲಿರುವ ವಿಜಯ್ ಮಲ್ಯ ಆಸ್ತಿ ಜಪ್ತಿಗೆ ಆದೇಶ

ಎನ್‌ಡಿಎ ದ್ವಂದ್ವ ನೀತಿ

ಕಂಪೆನಿ ಮತ್ತು ಅದರ ಉದ್ಯೋಗಿಗಳನ್ನು ಉಳಿಸಿಕೊಳ್ಳಲು ಕಿಂಗ್‌ಫಿಶರ್ ಮೇಲೆ ನಾನು 4,000 ಕೋಟಿ ರೂಪಾಯಿಗೂ ಹೆಚ್ಚು ಹೂಡಿಕೆ ಮಾಡಿದ್ದೆ. ಅದನ್ನು ಯಾರೂ ಗುರುತಿಸದೆ ಸಾಧ್ಯವಾದ ರೀತಿಯಲ್ಲೆಲ್ಲ ಟೀಕಿಸಲಾಯಿತು. ಇದೇ ಪಿಎಸ್‌ಯು ಬ್ಯಾಂಕುಗಳು ಭಾರತದ ಅತ್ಯುತ್ತಮ ಉದ್ಯೋಗಿಗಳು ಮತ್ತು ಸಂರ್ಪಕಸೇವೆಯ ವಿಮಾನಯಾನ ಸಂಸ್ಥೆಯು ಹೀನಾಯವಾಗಿ ನಷ್ಟಕ್ಕೆ ಸಿಲುಕಲು ಬಿಟ್ಟುಬಿಟ್ಟವು. ಎನ್‌ಡಿಎ ಸರ್ಕಾರದಡಿ ದ್ವಿಮುಖ ನೀತಿ ಅನುಸರಿಸಲಾಗಿದೆ ಎಂದು ಆರೋಪಿಸಿದ್ದಾರೆ.

ನನ್ನ ಹಣ ತೆಗೆದುಕೊಳ್ಳಿ

ಸಾರ್ವಜನಿಕ ಬ್ಯಾಂಕುಗಳು ಮತ್ತು ಇತರೆ ಸಾಲದಾತರಿಗೆ ಹಣ ಮರಳಿಸಲು ನನ್ನ ಸ್ಥಿರ ಆಸ್ತಿಗಳನ್ನು ಗೌರವಾನ್ವಿತ ಕರ್ನಾಟಕ ಹೈಕೋರ್ಟ್ ಮುಂದೆ ಇರಿಸಿದ್ದೇನೆಂದು ಮತ್ತೆ ಪುನರಾವರ್ತಿಸುತ್ತಿದ್ದೇನೆ. ಬ್ಯಾಂಕುಗಳು ನನ್ನ ಹಣವನ್ನೇಕೆ ತೆಗೆದುಕೊಳ್ಳುತ್ತಿಲ್ಲ. ಏನಿಲ್ಲದಿದ್ದರೂ ಅದು ಜೆಟ್ ಎರ್‌ವೇಸ್ ಉಳಿಸಲು ಸಹಾಯಮಾಡುತ್ತದೆ ಎಂದಿದ್ದಾರೆ.

ನಾನು ಹಣ ವಾಪಸ್ ನೀಡಲು ಸಿದ್ಧ, ಆದರೆ ಸರ್ಕಾರವೇ ಬಿಡ್ತಿಲ್ಲ: ವಿಜಯ್ ಮಲ್ಯ ಆರೋಪ ನಾನು ಹಣ ವಾಪಸ್ ನೀಡಲು ಸಿದ್ಧ, ಆದರೆ ಸರ್ಕಾರವೇ ಬಿಡ್ತಿಲ್ಲ: ವಿಜಯ್ ಮಲ್ಯ ಆರೋಪ

English summary
Fugitive businessman Vijay Mallya asked the NDA government and PSU banks to take his money to save Jet Airways.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X