ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರಿಟನ್‌ನಲ್ಲಿ ಕೊರೊನಾ ಪ್ರಕರಣಗಳು ಶೇ.60ರಷ್ಟು ಕುಸಿತ: ಕಾರಣವೇನು?

|
Google Oneindia Kannada News

ಲಂಡನ್, ಏಪ್ರಿಲ್ 8: ಬ್ರಿಟನ್‌ನಲ್ಲಿ ಕೊರೊನಾ ಸೋಂಕಿತ ಪ್ರಕರಣಗಳು ಶೇ.60ರಷ್ಟು ಕಡಿಮೆಯಾಗಿವೆ. ಕಳೆದ ವರ್ಷ ಕೊರೊನಾ ಕಾಟದಿಂದ ನಲುಗಿದ್ದ ಬ್ರಿಟನ್ ಚೇತರಿಸಿಕೊಳ್ಳುವುದು ಕಷ್ಟ ಸಾಧ್ಯ ಎಂಬ ಪರಿಸ್ಥಿತಿಗೆ ತಲುಪಿತ್ತು.

ಆದರೆ ಈಗ ಲಾಕ್ ಡೌನ್ ಹಾಗೂ ಲಸಿಕೆಯಿಂದಾಗಿ ಬ್ರಿಟನ್ ನಲ್ಲಿ ಕೋವಿಡ್-19 ಪ್ರಕರಣಗಳು ಶೇ.60ರಷ್ಟು ಕಡಿಮೆಯಾಗಿದೆ. ಲಂಡನ್ ನ ಇಂಪೀರಿಯಲ್ ಕಾಲೇಜಿನ ಸಂಶೋಧಕರ ಪ್ರಕಾರ ಮಾರ್ಚ್ ತಿಂಗಳಲ್ಲಿ ಕೋವಿಡ್-19 ಸೋಂಕು ಶೇ.60 ರಷ್ಟು ಕುಸಿದಿದ್ದು, ರಾಷ್ಟ್ರೀಯ ಲಾಕ್ ಡೌನ್ ಕ್ರಮಗಳಿಂದಾಗಿ ಸೋಂಕು ಪ್ರಸರಣ ಕಡಿಮೆಯಾಗಿದೆ.

Explained: ಕೊರೊನಾ ನಿಯಂತ್ರಿಸಲು ಸರ್ಕಾರದಿಂದ ಹೊಸ ನಿರ್ಬಂಧ Explained: ಕೊರೊನಾ ನಿಯಂತ್ರಿಸಲು ಸರ್ಕಾರದಿಂದ ಹೊಸ ನಿರ್ಬಂಧ

ಇಂಗ್ಲೆಂಡ್ ನಲ್ಲಿ ಏ.12 ರಿಂದ ಮುಂದಿನ ಹಂತಕ್ಕೆ ಲಾಕ್ ಡೌನ್ ನ್ನು ಸಡಿಲಗೊಳಿಸಲಾಗುತ್ತದೆ. ಮಾ.11 ರಿಂದ ಮಾ.30 ವರೆಗೆ 140,000 ಮಂದಿಯನ್ನು ಪರೀಕ್ಷೆಗೆ ಒಳಪಡಿಸಿ ಈ ಅಧ್ಯಯನ ವರದಿಯನ್ನು ಪ್ರಕಟಿಸಲಾಗಿದೆ.

Study Finds 60 Per Cent Drop In UK Covid-19 Cases Due To Vaccines And Lockdown

ಪ್ರಾರಂಭಿಕ ಹಂತದಲ್ಲಿ ಹಿರಿಯ ನಾಗರಿಕರಿಗೆ ಲಸಿಕೆ ನೀಡಿದ್ದರಿಂದ ಈಗ 65 ಹಾಗೂ ಮೇಲ್ಪಟ್ಟ ನಾಗರಿಕರಿಗೆ ಕಡಿಮೆ ಪ್ರಮಾಣದಲ್ಲಿ ಸೋಂಕು ಹರಡುವ ಸಾಧ್ಯತೆ ಇದೆ. ಇದೇ ವೇಳೆ ಸೋಂಕು, ಮರಣ ಪ್ರಮಾಣಕ್ಕೂ ಅಂತರ ಜಾಸ್ತಿಯಾಗುತ್ತಿದೆ. ಆದರೂ ಜನತೆ ಎಚ್ಚರಿಕೆಯಿಂದ ಇರಬೇಕೆಂದು ಸಂಶೋಧಕರು ಎಚ್ಚರಿಸಿದ್ದಾರೆ.

English summary
In an important development, a study has found that the Covid-19 vaccination programme in Britain along with the national lockdown has managed to snap the link between coronavirus infection and serious illness or death.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X