ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಹದಲ್ಲಿ ಪ್ರತಿಕಾಯ ಸೃಷ್ಟಿಗೆ ಸ್ಪುಟ್ನಿಕ್ V ಲಸಿಕೆಯ ಒಂದೇ ಡೋಸ್ ಸಾಕು

|
Google Oneindia Kannada News

ಲಂಡನ್, ಜುಲೈ 14: ಸ್ಪುಟ್ನಿಕ್ V ಕೊರೊನಾ ಲಸಿಕೆಯ ಒಂದೇ ಒಂದು ಡೋಸ್‌ನಿಂದ ಪ್ರಬಲ ಪ್ರತಿಕಾಯ ಸೃಷ್ಟಿಯಾಗುತ್ತದೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.

ಸೆಲ್ ರಿಪೋರ್ಟ್ಸ್‌ನಲ್ಲಿ ಮಂಗಳವಾರ ಅಧ್ಯಯನ ವರದಿಯೊಂದು ಪ್ರಕಟವಾಗಿದ್ದು, ಅರ್ಜೆಂಟೀನಾದಲ್ಲಿ 289 ಆರೋಗ್ಯ ಕಾರ್ಯಕರ್ತರ ಮೇಲೆ ನಡೆಸಿದ ಪ್ರಯೋಗಗಳ ವಿವರಗಳನ್ನು ನೀಡಲಾಗಿದೆ.

ಸೆಪ್ಟೆಂಬರ್‌ನಿಂದ ಸ್ಪುಟ್ನಿಕ್ V ಲಸಿಕೆ ಉತ್ಪಾದಿಸಲಿದೆ ಸೀರಂ ಇನ್‌ಸ್ಟಿಟ್ಯೂಟ್ಸೆಪ್ಟೆಂಬರ್‌ನಿಂದ ಸ್ಪುಟ್ನಿಕ್ V ಲಸಿಕೆ ಉತ್ಪಾದಿಸಲಿದೆ ಸೀರಂ ಇನ್‌ಸ್ಟಿಟ್ಯೂಟ್

ಆಸ್ಟ್ರಾಜೆನೆಕಾ, ಮಾಡೆರ್ನಾ, ಫೈಜರ್ ಲಸಿಕೆಗಳನ್ನೂ ಅಧ್ಯಯನಕ್ಕೆ ಅಳವಡಿಸಲಾಗಿತ್ತು, ಎರಡು ಡೋಸ್ ಬದಲಿಗೆ ಒಂದು ಡೋಸ್ ಲಸಿಕೆ ಹಾಕಿದರೆ ದೇಹಕ್ಕೆ ಬೇಕಾದ ವೈರಸ್ ವಿರುದ್ಧ ಹೋರಾಡುವ ಪ್ರತಿಕಾಯ ಸೃಷ್ಟಿಯಾಗುತ್ತದೆ ಎಂಬುದು ತಿಳಿದುಬಂದಿದೆ.

Single Dose Of Sputnik V COVID-19 Vaccine Triggers Strong Antibody Response: Study

ಹೀಗಾಗಿ ಈಗಾಗಲೇ ಕೋವಿಡ್ ಸೋಂಕಿಗೆ ಒಳಗಾದವರಿಗೆ ಒಂದೇ ಡೋಸ್ ಲಸಿಕೆ ನೀಡುವ ಮೂಲಕ ಪ್ರತಿಕಾಯ ಸೃಷ್ಟಿಸುವಲ್ಲಿ ಯಾವ ಲಸಿಕೆ ಪರಿಣಾಮಕಾರಿ ಎಂಬ ನಿರ್ದಿಷ್ಟ ಅಧ್ಯಯನ ಕೈಗೊಂಡಾಗ ಸ್ಪುಟ್ನಿಕ್ ಲಸಿಕೆಗೆ ಈ ಅಗ್ರ ಶ್ರೇಯಾಂಕ ದೊರೆತಿದೆ.

ಪ್ರಮುಖವಾಗಿ ಲಸಿಕೆ ಕೊರತೆಯ ಈ ಸನ್ನಿವೇಶದಲ್ಲಿ ದೊಡ್ಡ ಸಂಖ್ಯೆಯ ಜನರಿಗೆ ಲಸಿಕೆ ಸಿಗುವಂತಾಗಬೇಕು, ಹೀಗಾಗಿ ಒಂದೇ ಡೋಸ್ ಲಸಿಕೆಯಲ್ಲೇ ಪ್ರತಿಕಾಯ ಬೆಳೆಯುತ್ತದೆಯೇ ಎಂಬುದನ್ನು ಗಮನಿಸುವುದು ಅಧ್ಯಯನದ ಭಾಗವಾಗಿತ್ತು.

ಸೀರಂ ಇನ್‌ಸ್ಟಿಟ್ಯೂಟ್ ರಷ್ಯಾದ ಸ್ಪುಟ್ನಿಕ್ V ಕೊರೊನಾ ಲಸಿಕೆಯನ್ನು ಸೆಪ್ಟೆಂಬರ್‌ನಿಂದ ಉತ್ಪಾದಿಸಲಿದೆ ಎಂದು ರಷ್ಯಾದ ಮೇಕರ್ ಮಾಹಿತಿ ನೀಡಿದೆ. ಪುಣೆಯಲ್ಲಿ ಲಸಿಕೆ ಉತ್ಪಾದನೆ ಶುರುವಾಗಲಿದೆ, ರಷ್ಯಾದ ಆರ್‌ಡಿಐಎಫ್‌ ನೀಡಿರುವ ಮಾಹಿತಿ ಪ್ರಕಾರ ಪ್ರತಿ ವರ್ಷ ಭಾರತದಲ್ಲಿ 300 ಮಿಲಿಯನ್ ಕೊರೊನಾ ಲಸಿಕೆ ಉತ್ಪಾದಿಸಲಿದೆ ಎಂದಿದೆ.

ತಂತ್ರಜ್ಞಾನ ರವಾನೆ ಈಗಾಗಲೇ ಆರಂಭವಾಗಿದೆ, ಸೆಪ್ಟೆಂಬರ್‌ನಲ್ಲಿ ಉತ್ಪಾದನೆ ಶುರುವಾಗಲಿದೆ, ಸೀರಂ ಈಗಾಗಲೇ ಸೆಲ್ ಹಾಗೂ ವೆಕ್ಟರ್ ಮಾದರಿಗಳನ್ನು ಗಮಾಲಿಯಾ ಕೇಂದ್ರದಿಂದ ಪಡೆದುಕೊಂಡಿದೆ.

ಆದರ್ ಪೂನಾವಾಲ ಮಾತನಾಡಿ, ಆರ್‌ಡಿಐಎಫ್ ಪಾಲುದಾರರಾಗಿರುವುದಕ್ಕೆ ಸಂತೋಷವಾಗಿದೆ, ಸ್ಪುಟ್ನಿಕ್ ಲಸಿಕೆಯು ಭಾರತ ಸೇರಿದಂತೆ ಇಡೀ ವಿಶ್ವಾದ್ಯಂತ ಪ್ರಚಲಿತದಲ್ಲಿರುವ ಲಸಿಕೆಯಾಗಿದೆ.

English summary
A single dose of the Sputnik V vaccine may be enough to elicit strong antibody response against SARS-CoV-2, the virus that causes COVID-19, in already infected people, according to a study.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X