ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಲ್ಕು ಪ್ರಾಂತ್ಯವನ್ನೇ ನಿಭಾಯಿಸಲಾಗುತ್ತಿಲ್ಲ, ಕಾಶ್ಮೀರ ಬೇಕೇ?: ಅಫ್ರಿದಿ ಪ್ರಶ್ನೆ

|
Google Oneindia Kannada News

Recommended Video

ನಾಲ್ಕು ಪ್ರಾಂತ್ಯವನ್ನೇ ನಿಭಾಯಿಸಲಾಗುತ್ತಿಲ್ಲ, ಕಾಶ್ಮೀರ ಬೇಕೇ?: ಅಫ್ರಿದಿ ಪ್ರಶ್ನೆ..? | Oneindia Kannada

ಲಂಡನ್, ನವೆಂಬರ್ 14: ವಿವಾದಾತ್ಮಕ ಹೇಳಿಕೆಗಳನ್ನು ನೀಡುವುದರಲ್ಲಿ ಹೆಸರಾಗಿರುವ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ, ಕಾಶ್ಮೀರದ ವಿವಾದವನ್ನು ಕೆದಕಿದ್ದಾರೆ.

ಆದರೆ, ಅವರು ಈ ಬಾರಿ ತಮ್ಮ ದೇಶದ ಸರ್ಕಾರ ಮತ್ತು ವ್ಯವಸ್ಥೆಯ ವಿರುದ್ಧವೇ ಚಾಟಿ ಬೀಸಿದ್ದಾರೆ.

ಪೋಷಕರ ಭೇಟಿಗೆ ಹೋಗುತ್ತಿದ್ದ ಪೊಲೀಸ್‌ ಉಗ್ರರ ಗುಂಡಿಗೆ ಬಲಿ: ಇಲಾಖೆಯಿಂದಲೇ ಮಾಹಿತಿ ಸೋರಿಕೆ?ಪೋಷಕರ ಭೇಟಿಗೆ ಹೋಗುತ್ತಿದ್ದ ಪೊಲೀಸ್‌ ಉಗ್ರರ ಗುಂಡಿಗೆ ಬಲಿ: ಇಲಾಖೆಯಿಂದಲೇ ಮಾಹಿತಿ ಸೋರಿಕೆ?

ಲಂಡನ್‌ನಲ್ಲಿ ಮಾತನಾಡಿದ ಅಫ್ರಿದಿ, ಪಾಕಿಸ್ತಾನಕ್ಕೆ ತನ್ನ ನಾಲ್ಕು ಪ್ರಾಂತ್ಯಗಳನ್ನೇ ಸರಿಯಾಗಿ ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ಹೀಗಿರುವಾಗ ಕಾಶ್ಮೀರ ಬೇಕೆಂದು ಬೇಡಿಕೆ ಇರಿಸುವುದು ಸರಿಯಲ್ಲ ಎಂದು ಅಫ್ರಿದಿ ಹೇಳಿದ್ದಾರೆ.

'ಪಾಕಿಸ್ತಾನಕ್ಕೆ ಕಾಶ್ಮಿರದ ಅಗತ್ಯವಿಲ್ಲ; ಅದಕ್ಕೆ ತನ್ನಲ್ಲಿರುವ ನಾಲ್ಕು ಪ್ರಾಂತ್ಯಗಳನ್ನೇ ನಿಭಾಯಿಸುವ ಸಾಮರ್ಥ್ಯವಿಲ್ಲ' ಎಂದು ಹೇಳಿದ್ದಾರೆ.

shahid Afridi pakistan cant even handle 4 provinces doesnot need kashmir

ಹಾಗೆಂದು ಅವರು ಭಾರತದೊಂದಿಗೆ ಕೂಡ ಕಾಶ್ಮೀರ ಇರುವುದನ್ನು ಒಪ್ಪಿಕೊಂಡಿಲ್ಲ.

ಕಾಶ್ಮೀರದಲ್ಲಿ ಅವಧಿಗೆ ಮುನ್ನವೇ ಹಿಮಪಾತ; ಸೇಬು ಬೆಳೆಗಾರರ ಕಣ್ಣೀರುಕಾಶ್ಮೀರದಲ್ಲಿ ಅವಧಿಗೆ ಮುನ್ನವೇ ಹಿಮಪಾತ; ಸೇಬು ಬೆಳೆಗಾರರ ಕಣ್ಣೀರು

'ಪಾಕಿಸ್ತಾನಕ್ಕೆ ಕಾಶ್ಮೀರದ ಅಗತ್ಯವಿಲ್ಲ. ಹಾಗೆಂದು ಅದನ್ನು ಭಾರತಕ್ಕೆ ಕೊಡಬಾರದು. ಕಾಶ್ಮೀರ ಸ್ವತಂತ್ರ ದೇಶವಾಗಬೇಕು. ಅಲ್ಲಿ ಸಾಯುತ್ತಿರುವ ಜನರು ಸಾಯಬಾರದು. ಮಾನವೀಯತೆ ಬದುಕುಳಿಯಬೇಕು. ಅಲ್ಲಿನ ಜನರು ಸಾಯುತ್ತಿರುವುದನ್ನು ನೋಡಿದಾಗ ನೋವಾಗುತ್ತದೆ' ಎಂದು ಅಫ್ರಿದಿ ಹೇಳಿದ್ದಾರೆ.

ದೇಶದಲ್ಲಿ ಏಕತೆ ತರಲು ಮತ್ತು ಉಗ್ರರಿಂದ ಸುರಕ್ಷತೆ ಮೂಡಿಸುವ ಪ್ರಯತ್ನದಲ್ಲಿ ಪಾಕಿಸ್ತಾನ ವಿಫಲವಾಗಿದೆ ಎಂದಿದ್ದಾರೆ.

ಭಾರೀ ಶಸ್ತ್ರಾಸ್ತ್ರದೊಂದಿಗೆ ಒಳನುಗ್ಗಲು ಯತ್ನಿಸುತ್ತಿದ್ದ ಪಾಕ್ ಉಗ್ರರ ಹತ್ಯೆಭಾರೀ ಶಸ್ತ್ರಾಸ್ತ್ರದೊಂದಿಗೆ ಒಳನುಗ್ಗಲು ಯತ್ನಿಸುತ್ತಿದ್ದ ಪಾಕ್ ಉಗ್ರರ ಹತ್ಯೆ

ಪಾಕಿಸ್ತಾನದ ವಿರುದ್ಧ ಇದೇ ರೀತಿಯ ಟೀಕೆಗಳು ಭಾರತೀಯರು ಮಾಡುತ್ತಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಕ್ಯಾಚ್ ಬಿಟ್ಟ ವಿಡಿಯೋಗಳನ್ನು ಬಳಸಿ, ಪಾಕಿಸ್ತಾನ ಪಂದ್ಯ ಸೋತಾಗ ಮೀಮ್‌ಗಳನ್ನು ಸೃಷ್ಟಿಸಿ ಇವರಿಗೆ 'ಕಾಶ್ಮೀರ ಬೇಕಂತೆ' ಎಂದು ಲೇವಡಿ ಮಾಡುವ ಅನೇಕ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಹರಿದಾಡುತ್ತಿರುತ್ತವೆ.

English summary
Former Pakistan cricketer Shahid Afridi speaking in London said that, Pakistan doesn't need Kashmir, it can't handle even is 4 provinces.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X