ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾಕ್ಕೆ ಭಾರತ ನಂತರ ಭಾರಿ ಪೆಟ್ಟುಕೊಟ್ಟ ಇಂಗ್ಲೆಂಡ್!

|
Google Oneindia Kannada News

ಲಂಡನ್, ಜುಲೈ 05: ಭಾರತದಲ್ಲಿ ಟೆಲಿಕಾಂ ಟೆಂಡರ್ ನಿಂದ ಚೀನಾ ಮೂಲದ ಕಂಪನಿಗಳು ಹೊರಗುಳಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಈಗ ಬ್ರಿಟನ್ನಿನಲ್ಲಿ 5ಜಿ ಟೆಂಡರ್ ನಿಂದ ಚೀನಾ ಕಂಪನಿ ಹ್ಯುವೈ ಹೊರಗಿಡುವ ಸಾಧ್ಯತೆ ಕಂಡು ಬಂದಿದೆ.

ಯುಕೆಯಲ್ಲಿ 5ಜಿ ನೆಟ್ವರ್ಕ್ ಟೆಂಡರ್ ಪ್ರಕ್ರಿಯೆಯಿಂದ ಚೀನಾದ ಹ್ಯುವೈ ಕಂಪನಿಯನ್ನು ಹೊರಗಿಡಲು ಬ್ರಿಟಿಷ್ ಪ್ರಧಾನಿ ಬೊರಿಸ್ ಜಾನ್ಸನ್ ನಿರ್ಧರಿಸಿದ್ದಾರೆ ಎಂದು ದಿ ಸಂಡೆ ಟೆಲಿಗ್ರಾಫ್ ವರದಿ ಮಾಡಿದೆ.

Setback to China, UK likely to phase out Huaweis 5G infrastructure

ಭಾರತದಲ್ಲಿ ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ನಿಯಮಿತ (ಬಿಎಸ್ ಎನ್ ಎಲ್) 4ಜಿ ಟೆಲಿಕಾಂ ನೆಟ್ವರ್ಕ್ ಅಪ್ ಗ್ರೇಡ್ ಟೆಂಡರ್ ಪ್ರಕ್ರಿಯೆಯಲ್ಲಿ ಚೀನಾ ಕಂಪನಿಗಳಿಗೆ ಪಾಲ್ಗೊಳ್ಳದಂತೆ ನಿರ್ಬಂಧಿಸಲಾಗಿದೆ. ಇದರಿಂದ ಸುಮಾರು 7000-8000 ಕೋಟಿ ರೂ. ವೆಚ್ಚದ ಪ್ರಕ್ರಿಯೆಯಿಂದ ಹೊರಗುಳಿಯಲಿದೆ.

ಚೀನಾಗೆ ಸಾವಿರಾರು ಕೋಟಿ ರು ನಷ್ಟ, ಭಾರತದಿಂದ 4ಜಿ ಅಸ್ತ್ರ!ಚೀನಾಗೆ ಸಾವಿರಾರು ಕೋಟಿ ರು ನಷ್ಟ, ಭಾರತದಿಂದ 4ಜಿ ಅಸ್ತ್ರ!

ಆದರೆ, ಯುಕೆ ಈ ರೀತಿ ದೊಡ್ಡ ನಿರ್ಧಾರ ಕೈಗೊಳ್ಳಲು ಭಾರತದಲ್ಲಿನ ಬೆಳವಣಿಗೆ ಕಾರಣವಲ್ಲ ಬದಲಿಗೆ ಹ್ಯುವೈ ಮೇಲೆ ಯುಎಸ್ ಹೇರಿರುವ ನಿರ್ಬಂಧ ಕಾರಣ ಎಂದು ಜಿಸಿ ಎಚ್ ಕ್ಯೂ ವರದಿ ಹೇಳಿದೆ.

ಚೀನಾದ ತಂತ್ರಜ್ಞಾನ, ಹ್ಯುವೈ ಬಳಸುತ್ತಿರುವ ವಿಧಾನ ಎಲ್ಲವೂ ಸುರಕ್ಷಿತವಾಗಿಲ್ಲ ಎಂದು ಜಿಸಿಎಚ್ ಕ್ಯೂ ವರದಿ ಮಾಡಿದೆ.

ಯುಕೆಯಲ್ಲಿ 5 ಜಿ ನೆಟ್ವರ್ಕ್ ಹೆಣೆಯಲು ಹ್ಯುವೈಗೆ ಟೆಂಡರ್ ನೀಡಲು ಪ್ರಧಾನಿ ಬೋರಿಸ್ ಜಾನ್ಸನ್ ಜನವರಿ ತಿಂಗಳಿನಲ್ಲಿ ನಿರ್ಧರಿಸಿದ್ದರು. ಆದರೆ, ಈಗ ಈ ನಿರ್ಧಾರದಿಂದ ಹಿಂದೆ ಸರಿಯಲಿದ್ದಾರೆ ಎಂದು ತಿಳಿದು ಬಂದಿದೆ.

English summary
British Prime Minister Boris Johnson is all set to begin phasing out the use of Chinese tech giant Huawei's technology in Britain's 5G network report says.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X