ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇವಲ 20 ರೂ.ಗೆ 'ಲಾಲಾರಸ' ಆಧಾರಿತ ಕೋವಿಡ್ ಪರೀಕ್ಷೆ?

|
Google Oneindia Kannada News

ಲಂಡನ್, ಜೂನ್ 19: ಸ್ಕಾಟ್‌ಲೆಂಡ್‌ನ ಸಂಶೋಧಕರು ಕೊರೊನಾ ಸಾಂಕ್ರಾಮಿಕಕ್ಕಾಗಿ ತ್ವರಿತ ಹಾಗೂ ಕಡಿಮೆ ವೆಚ್ಚದ, ಲಾಲಾರಸ(ಎಂಜಿಲು) ಆಧಾರಿತ ಪರೀಕ್ಷೆಯನ್ನು ಅಭಿವೃದ್ಧಿಪಡಿಸುತ್ತಿದ್ದಾರೆ.

ಸ್ಕಾಟ್‌ಲೆಂಡ್‌ ಸ್ಟ್ರಾಥ್‌ಕ್ಲೈಡ್ ವಿಶ್ವವಿದ್ಯಾಲಯದ ಸಂಶೋಧಕರ ತಂಡದ ಪ್ರಕಾರ, ಪ್ರತಿ ಟೆಸ್ಟ್ ಗೆ ಕೇವಲ 20 ರೂಪಾಯಿಯಂತೆ ಸಾಮೂಹಿಕವಾಗಿ ಟೆಸ್ಟ್ ಮಾಡಬಹುದಾಗಿದೆ. ಸಮುದಾಯದ ಜನರು ತಮ್ಮ ಕೋವಿಡ್ -19 ಪರಿಸ್ಥಿತಿ ನಿರ್ಧರಿಸಲು ಅನುವಾಗುವಂತೆ ಕ್ಷೇತ್ರ ಬಳಕೆಯಲ್ಲಿ ತ್ವರಿತವಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ.

ಮಧು ಮೇಹಿಗಳಲ್ಲಿ ಸಕ್ಕರೆ ಪ್ರಮಾಣ ತಪಾಸಣೆಗಾಗಿ ಬಳಸುವ ಗ್ಲೊಕೊಸ್ ಟೆಸ್ಟ್ ನಿಂದ ಪ್ರೇರಣೆಗೊಂಡ ಸಂಶೋಧಕರು, ಕೋವಿಡ್-19 ಸಾಂಕ್ರಾಮಿಕಕ್ಕಾಗಿ ತ್ವರಿತ ಹಾಗೂ ಕಡಿಮೆ ವೆಚ್ಚದ, ಲಾಲಾರಸ ಆಧಾರಿತ ಪರೀಕ್ಷೆಯನ್ನು ಅಭಿವೃದ್ಧಿಪಡಿಸುತ್ತಿದ್ದಾರೆ.

Corona Test

ಒಬ್ಬ ವ್ಯಕ್ತಿಯು ಸ್ವಯಂ-ಪರೀಕ್ಷೆ ಮಾಡಿಸುವಾಗ ಲಾಲಾರಸವನ್ನು ನೇರವಾಗಿ ಪರೀಕ್ಷಾ ಪಟ್ಟಿಯ ಮೇಲೆ ಹಾಕುತ್ತಾರೆ. ಅಲ್ಲಿ ಉಪಕರಣದಿಂದ ಮಾಪನ ಕಾರ್ಯನಿರ್ವಹಿಸುತ್ತಿರುತ್ತದೆ. ಡಿಸ್ ಪ್ಲೇನಲ್ಲಿ ಫಲಿತಾಂಶ ಬರುತ್ತದೆ.

29 ರಾಷ್ಟ್ರಗಳನ್ನು ಕಾಡುತ್ತಿರುವ ಕೊರೊನಾವೈರಸ್ ಹೊಸ ರೂಪಾಂತರ ತಳಿ ಲ್ಯಾಂಬ್ಡಾ!29 ರಾಷ್ಟ್ರಗಳನ್ನು ಕಾಡುತ್ತಿರುವ ಕೊರೊನಾವೈರಸ್ ಹೊಸ ರೂಪಾಂತರ ತಳಿ ಲ್ಯಾಂಬ್ಡಾ!

ಇದರರ್ಥ ತಂತ್ರಜ್ಞಾನದ ಆಧಾರದ ಮೇಲೆ ಕೋವಿಡ್-19 ಪರೀಕ್ಷೆ ಮಾರ್ಗ ಹೆಚ್ಚು ವೇಕೋವಿಡ್-19 ಗಾಗಿ ಸೂಕ್ಷ್ಮ, ನಿರ್ದಿಷ್ಟ, ತ್ವರಿತ ಮತ್ತು ಕಡಿಮೆ-ವೆಚ್ಚದ ಪರೀಕ್ಷೆಗೆ ಉತ್ತಮ ವಿಧಾನವಾಗಿದೆ.

ಆದರೆ ಹೆಚ್ಚುವರಿಯಾಗಿ ಇತರ ಉಸಿರಾಟದ ವೈರಸ್‌ಗಳನ್ನು ತ್ವರಿತವಾಗಿ ಪತ್ತೆಹಚ್ಚಲು ಮತ್ತು ಯಾರಾದರೂ ಕೋವಿಡ್-19 ಜ್ವರವನ್ನು ಹೊಂದಿದ್ದರೆ ಆದನ್ನು ನಿರ್ಧರಿಸಲು ಕಡಿಮೆ ವೆಚ್ಚದ ಸಾಧನವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಮುಂಚೂಣಿ ಸಂಶೋಧಕ ಸ್ಟ್ರಾಥ್‌ಕ್ಲೈಡ್‌ನಲ್ಲಿನ ಬಯೋಮೆಡಿಕಲ್ ಎಂಜಿನಿಯರಿಂಗ್ ವಿಭಾಗದ ಡಾ. ಡಾಮಿಯನ್ ಕೊರಿಗನ್ ಹೇಳುತ್ತಾರೆ.ಗವಾಗಿರುತ್ತದೆ.

ಕಂಪನಿಯು ತುರ್ತು ಬಳಕೆಗಾಗಿ ಪರೀಕ್ಷೆಯ ಮೊದಲ ಆವೃತ್ತಿಯನ್ನು 12 ತಿಂಗಳಲ್ಲಿ ಸಿದ್ಧಪಡಿಸುವ ಗುರಿ ಹೊಂದಿದೆ ಮತ್ತು 18-24 ತಿಂಗಳುಗಳಲ್ಲಿ ಮಾರುಕಟ್ಟೆಯಲ್ಲಿ ಸಂಪೂರ್ಣ ಸಿಇ ಗುರುತು ಪರೀಕ್ಷೆ ಸಿಗಲಿದೆ.

ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿ ಜರ್ನಲ್ 'ಕೆಮಿಕಲ್ ಕಮ್ಯುನಿಕೇಷನ್ಸ್' ನಲ್ಲಿ ಪ್ರಕಟವಾದ ವರದಿಯೊಂದರಲ್ಲಿ ಪರೀಕ್ಷೆ ನಡೆಸಲು ಸಂವೇದಕ ಮೇಲ್ಮೈಗೆ ವಿಶೇಷ ರಾಸಾಯನಿಕ ಚಿಕಿತ್ಸೆಯನ್ನು ಹೇಗೆ ಅನ್ವಯಿಸಲಾಗುತ್ತದೆ ಎಂಬುದನ್ನು ವಿವರಿಸುತ್ತದೆ.

ನಾರ್ಕ್ಲಿಫ್ ಕ್ಯಾಪಿಟಲ್ ಸಹಕಾರದೊಂದಿಗೆ ಔರೆಯಮ್ ಡಯಾಗ್ನೊಸ್ಟಿಕ್ ಕಂಪನಿ ಇದು ನೈಜ-ಪ್ರಪಂಚದ ಬಳಕೆಗಾಗಿ ಸಿಇ ಗುರುತು ಮಾಡಿದ ವಾಣಿಜ್ಯ ಉತ್ಪನ್ನವಾಗಿ ಪರೀಕ್ಷೆಯನ್ನು ಅಭಿವೃದ್ಧಿಪಡಿಸುತ್ತಿದೆ.

English summary
Researchers are developing a rapid, low-cost and mass manufacturable saliva-based biosensor test for COVID-19 inspired by the glucose test strips used to check blood sugar levels in people with diabetes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X