ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನಿ ಹುದ್ದೆಯ ರೇಸ್‌ನಲ್ಲಿ ಟಾಪ್‌ಲ್ಲಿರುವ ರಿಷಿ ಸುನಕ್‌

|
Google Oneindia Kannada News

ಲಂಡನ್, ಜುಲೈ 19; ಬ್ರಿಟನ್‌ನ ಮುಂದಿನ ಪ್ರಧಾನಿಯನ್ನು ನಿರ್ಧರಿಸಲು ಕನ್ಸರ್ವೇಟಿವ್ ಸಂಸದರು ಸೋಮವಾರ ನಡೆದ ಮತದಾನದಲ್ಲಿ ಮಾಜಿ ಹಣಕಾಸು ಸಚಿವ ರಿಷಿ ಸುನಕ್ ಮುನ್ನಡೆ ಸಾಧಿಸಿದ್ದಾರೆ. ಇದೀಗ ಪ್ರಧಾನಿ ಹುದ್ದೆಯ ಸ್ಥಾನಕ್ಕೆ ನಾಲ್ವರ ನಡುವೆ ಸ್ಪರ್ಧೆ ಶುರುವಾಗಿದೆ.

ಟೋರಿ ಬ್ಯಾಕ್‌ಬೆಂಚರ್‌ನ ವಿದೇಶಾಂಗ ವ್ಯವಹಾರಗಳ ಸಮಿತಿ ಅಧ್ಯಕ್ಷ ಟಾಮ್ ತುಗೆಂಧತ್ ಅವರು ಹಿಂದಿನ ಸುತ್ತುಗಳಲ್ಲಿ 31 ಮತಗಳಿಂದ ಹಿಂದುಳಿದಿದ್ದು, ಸ್ಪರ್ಧೆಯಿಂದಲೇ ಹೊರಬಿದ್ದಿದ್ದರು.

ರಿಷಿ ಸುನಕ್‌ಗೆ ಬೆಂಬಲ ನೀಡಬೇಡಿ ಎಂದ ಬೋರಿಸ್‌ ಜಾನ್ಸನ್‌ರಿಷಿ ಸುನಕ್‌ಗೆ ಬೆಂಬಲ ನೀಡಬೇಡಿ ಎಂದ ಬೋರಿಸ್‌ ಜಾನ್ಸನ್‌

ಮೂರನೇ ಸುತ್ತಿನ ಮತದಾನದಲ್ಲಿ ಮಾಜಿ ಹಣಕಾಸು ಸಚಿವ ಬ್ರಿಟಿಷ್ ಭಾರತದ ರಿಷಿ ಸುನಕ್‌ ಅವರು 115 ಮತಗಳನ್ನು ಪಡೆದಿದ್ದರು. ಸಚಿವ ಪೆನ್ನಿ ಮೊರ್ಡಾಂಟ್ 82 ಮತಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ 71 ಮತಗಳೊಂದಿಗೆ ಮತ್ತು ಮಾಜಿ ಸಮಾನತೆ ಸಚಿವ ಕೆಮಿ ಬಡೆನೋಚ್ 58 ಮತಗಳನ್ನು ಪಡೆದು ನಂತರದ ಸ್ಥಾನಗಳಲ್ಲಿದ್ದಾರೆ.

Rishi Sunak is in the race for the post of UK Prime Minister

ಕೊನೆಯವರೆಗೂ ಕಣದಲ್ಲಿರುವ ಇಬ್ಬರು ಅಭ್ಯರ್ಥಿಗಳಿಗೆ ಸಂಸದರು ಮತ ಚಲಾಯಿಸುತ್ತಾರೆ. ಅದರಲ್ಲಿ ಗೆಲುವು ಸಾಧಿಸಿದವರ ಆಯ್ಕೆಯ ಬಗ್ಗೆ ಪಕ್ಷದ ಸದಸ್ಯರು ನಿರ್ಧರಿಸುತ್ತಾರೆ.

ಅನೇಕ ಹಗರಣಗಳು, ಆಡಳಿತ ನಿರ್ವಹಣೆಯಲ್ಲಿನ ಲೋಪದೋಷಗಳ ಕಾರಣ ಬೋರಿಸ್‌ ಜಾನ್ಸನ್‌ ಸರ್ಕಾರ ಪತನವಾಗಿತ್ತು. ಹೊಸ ಪ್ರಧಾನಮಂತ್ರಿಯ ಆಯ್ಕೆಗಾಗಿ ಶುರುವಾಗಿರುವ ರೇಸ್‌ ಈಗ ಕೊನೆಯ ಹಂತಕ್ಕೆ ಬಂದಿದೆ. ಇದೀಗ ಕೇವಲ 4 ಮಂದಿ ಮಾತ್ರ ಪ್ರಧಾನಿ ರೇಸ್‌ನಲ್ಲಿ ಉಳಿದಿದ್ದು, ರಿಷಿ ಸುನಕ್ ಅಗ್ರಸ್ಥಾನದಲ್ಲಿದ್ದಾರೆ. ಮ್ಯಾಜಿಕ್ ಸಂಖ್ಯೆ 120 ಆಗಿದ್ದು, ಯಾವ ಅಭ್ಯರ್ಥಿಯು ಕನಿಷ್ಠ 120 ಮತ ಗಳಿಸುತ್ತಾರೋ ಅವರ ಆಯ್ಕೆಯನ್ನು ಕನ್ಸರ್ವೇಟಿವ್ ಪಕ್ಷದ ಸದಸ್ಯರು ನಿರ್ಧರಿಸಲಿದ್ದಾರೆ.

ಬ್ರಿಟನ್‌ನ ಹಣಕಾಸು ಸಚಿವ ರಿಷಿ ಸುನಕ್ ಮತ್ತು ಆರೋಗ್ಯ ಕಾರ್ಯದರ್ಶಿ ಸಾಜಿದ್ ಜಾವಿದ್ ಇಬ್ಬರೂ ಜುಲೈ ತಿಂಗಳ ಮೊದಲ ವಾರದಲ್ಲಿ ರಾಜೀನಾಮೆ ನೀಡಿದ್ದರು. ಪ್ರಧಾನಿ ಬೋರಿಸ್ ಜಾನ್ಸನ್ ಮೇಲೆ ನಂಬಿಕೆ ಇಲ್ಲ ಎಂಬ ಕಾರಣ ನೀಡಿ ಇಬ್ಬರು ಸಂಪುಟ ಸಚಿವರು ರಾಜೀನಾಮೆ ನೀಡಿದ್ದರು.

Rishi Sunak is in the race for the post of UK Prime Minister

ಇದರಿಂದ ಪ್ರಧಾನಿ ಬೋರಿಸ್ ಜಾನ್ಸನ್ ಸರ್ಕಾರದ ಮೇಲೆ ಬಿಕ್ಕಟ್ಟಿನ ವಾತವಾರಣ ನಿರ್ಮಾಣವಾಗಿತ್ತು. ಈ ಬೆನ್ನಲ್ಲೇ ಮಂತ್ರಿಗಳ ರಾಜೀನಾಮೆ ಪರ್ವವೇ ಆಗಿದ್ದು, ಬೋರಿಸ್‌ ಜಾನ್ಸನ್ ಅವರ ನಾಯಕತ್ವಕ್ಕೆ ದೊಡ್ಡ ಹೊಡೆತ ಬಿದ್ದಿತ್ತು.

ಜಾನ್ಸನ್ ಅವರ ಸಾಮರ್ಥ್ಯದ ಬಗ್ಗೆ ಅನೇಕ ಶಾಸಕರು ಮತ್ತು ಸಾರ್ವಜನಿಕರು ನಂಬಿಕೆ ಕಳೆದುಕೊಂಡಿದ್ದಾರೆ. ಹಾಗೂ ಸರದಿಯಲ್ಲಿ ಹಗರಣಗಳು ಕೇಳಿ ಬಂದ ಹಿನ್ನೆಲೆ ಜಾನ್ಸನ್ ಆಡಳಿತದ ಸಾಮರ್ಥ್ಯದ ಮೇಲೆ ನಂಬಿಕೆ ಕಳೆದುಕೊಂಡಿದ್ದೇನೆ ಎಂದು ಜಾವಿದ್ ಹೇಳಿದ್ದರು.

ಸಚಿವರ ರಾಜೀನಾಮೆ ಪರ್ವದಿ ಮುಂದುವರೆದು ಕೊನೆಗೂ ಬೋರಿಸ್ ಜಾನ್ಸನ್ ಜುಲೈ 7ರಂದು ಕನ್ಸರ್ವೇಟಿವ್ ನಾಯಕತ್ವವನ್ನು ತೊರೆಯುವುದಾಗಿ ಘೋಷಿಸಿದ್ದರು. ಸೆಪ್ಟೆಂಬರ್ 5ರಂದು ತಮ್ಮ ಉತ್ತರಾಧಿಕಾರಿಯನ್ನು ಘೋಷಿಸುವವರೆಗೆ ಜಾನ್ಸ್‌ ಹಂಗಾಮಿ ಪ್ರಧಾನಿಯಾಗಿ ಮುಂದುವರೆಯಲಿದ್ದಾರೆ.

ರಿಷಿ ಸುನಕ್‌ ಪ್ರಧಾನಿ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದು, ದಾಖಲೆ ಮತಗಳನ್ನು ಗಳಿಸಿದ್ದಾರೆ. ಬೋರಿಸ್‌ ಜಾನ್ಸನ್‌ ಈ ಹಿಂದೆಯಷ್ಟೇ ಸುನಕ್‌ ಅವರನ್ನು ಯಾರು ಬೆಂಬಲಿಸಬೇಡಿ ಎಂದು ತಮ್ಮ ಅಭ್ಯರ್ಥಿಗಳಿಗೆ ಸೂಚಿಸಿದ್ದರು. ಇದೀಗ ಹೆಚ್ಚು ಮತಗಳನ್ನು ಗಳಿಸುತ್ತಾ ಬೋರಿಸ್‌ ಜಾನ್ಸನ್‌ ಅವರಿಗೆ ತಿರುಗೇಟು ನೀಡುತ್ತಿದ್ದಾರೆ.

English summary
Former finance minister Rishi Sunak has taken the lead in a vote by Conservative MPs on Monday to decide Britain's next prime minister. Now the competition for the post of Prime Minister has started between four people, Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X