ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

5 ನಿಮಿಷದಲ್ಲೇ ಕೋವಿಡ್ ವರದಿ ಕೊಡುವ ಕಿಟ್ ಸಂಶೋಧನೆ

|
Google Oneindia Kannada News

ಲಂಡನ್, ಅಕ್ಟೋಬರ್ 15: ಕೋವಿಡ್ ಪರೀಕ್ಷೆಯ ವರದಿ ಪಡೆಯು 2 ದಿನ, ಅರ್ಧಗಂಟೆ ಕಾಯುವುದು ತಪ್ಪಲಿದೆ. ಐದು ನಿಮಿಷದಲ್ಲಿ ಕೋವಿಡ್ ಪರೀಕ್ಷೆ ನಡೆಸುವ ಕಿಟ್ ಸಂಶೋಧನೆ ಮಾಡಲಾಗಿದೆ. 6 ತಿಂಗಳಿನಲ್ಲಿ ಇದು ಮಾರುಕಟ್ಟೆಗೆ ಬರಲಿದೆ.

ಲಂಡನ್‌ನ ಆಕ್ಸ್‌ಫರ್ಡ್ ಯೂನಿವರ್ಸಿಟಿ 5 ನಿಮಿಷದಲ್ಲಿ ವ್ಯಕ್ತಿಗಳ ಕೋವಿಡ್ ಪರೀಕ್ಷೆ ನಡೆಸುವ ಕಿಟ್ ಸಂಶೋಧಿಸಿದೆ. ಮಾರುಕಟ್ಟೆ, ವಿಮಾನ ನಿಲ್ದಾಣ ಮುಂತಾದ ಕಡೆ ಹೆಚ್ಚು ಜನರಿರುವ ಪ್ರದೇಶದಲ್ಲಿ ಈ ಕಿಟ್‌ಗಳನ್ನು ಉಪಯೋಗ ಮಾಡಬಹುದಾಗಿದೆ.

ಕೋವಿಡ್ ಸೋಂಕಿತರಿಗೆ 3 ಸಾವಿರ ಕೆಜಿ ಸೇಬು ಹಂಚಿಕೆ! ಕೋವಿಡ್ ಸೋಂಕಿತರಿಗೆ 3 ಸಾವಿರ ಕೆಜಿ ಸೇಬು ಹಂಚಿಕೆ!

ಪ್ರಸ್ತುತ ಆಟಿಪಿಸಿಆರ್ ಪರೀಕ್ಷೆ ಮಾಡಿಸಿದರೆ 24 ಗಂಟೆ, ಆಂಟಿಜೆಟ್ ಟೆಸ್ಟ್ ಮಾಡಿಸಿದರೆ ಸುಮಾರು 30 ನಿಮಿಷಗಳಲ್ಲಿ ಕೋವಿಡ್ ವರದಿ ಪಾಸಿಟಿವ್ ಅಥವ ನೆಗೆಟಿವ್ ಎಂಬುದು ತಿಳಿಯುತ್ತಿದೆ. ಹೊಸ ಕಿಟ್ 5 ನಿಮಿಷದಲ್ಲಿ ವರದಿ ಕೊಡಲಿದೆ.

ಚುನಾವಣಾ ಪ್ರಚಾರದ ಚಿತ್ರಣ ಬದಲಿಸಿದ ಕೋವಿಡ್ ಸೋಂಕು! ಚುನಾವಣಾ ಪ್ರಚಾರದ ಚಿತ್ರಣ ಬದಲಿಸಿದ ಕೋವಿಡ್ ಸೋಂಕು!

Rapid COVID-19 Test Kit Get Report In 5 Minutes

2021ರ ಆರಂಭದಲ್ಲಿಯೇ ಈ ಕಿಟ್‌ಗಳ ಉತ್ಪಾದನೆ ಆರಂಭ ಮಾಡಲಾಗುತ್ತದೆ. 6 ತಿಂಗಳಿನಲ್ಲಿ ಇದು ಮಾರುಕಟ್ಟೆಗೆ ಬರಲಿದೆ. ಈ ಕಿಟ್‌ನಲ್ಲಿನ ಪರೀಕ್ಷೆ ನಿಖರವಾಗಿರಲಿದೆ ಎಂಬುದನ್ನು ಸಂಶೋಧನೆಯಿಂದ ಖಚಿತಪಡಿಸಿಕೊಳ್ಳಲಾಗಿದೆ.

ತವರು ರಾಜ್ಯದಿಂದ ವಾಪಸ್ ಬಂದ ಮೆಟ್ರೋ ಕಾರ್ಮಿಕರಿಗೆ ಕೋವಿಡ್ ಸೋಂಕು ತವರು ರಾಜ್ಯದಿಂದ ವಾಪಸ್ ಬಂದ ಮೆಟ್ರೋ ಕಾರ್ಮಿಕರಿಗೆ ಕೋವಿಡ್ ಸೋಂಕು

Recommended Video

ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಕರೋನಾ | Oneindia Kannada

ಆಂಟಿಜೆನ್ ಟೆಸ್ಟ್‌ ಮಾದರಿಯನ್ನು ಪ್ರಸ್ತುತ ಹೆಚ್ಚು ಜನ ದಟ್ಟಣೆ ಪ್ರದೇಶದಲ್ಲಿ ಬಳಕೆ ಮಾಡಲಾಗುತ್ತಿದೆ. ಹೊಸ ಮಾದರಿ ಅದಕ್ಕಿಂತ ಬೇಗ ನಿಖರವಾ ವರದಿಯನ್ನು ಕೊಡಲಿದೆ ಎಂದು ಆಕ್ಸ್‌ಫರ್ಡ್ ಯೂನಿವರ್ಸಿಟಿ ಹೇಳಿದೆ.

ಕೋವಿಡ್ ಸೋಂಕಿಗೆ ಇನ್ನೂ ಔಷಧಿ ಸಿಕ್ಕಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಮುಂದಿನ ಒಂದು ವರ್ಷ ಕೊರೊನಾ ಜೊತೆಗೆ ನಾವು ಬದುಕಬೇಕಿದೆ. ಆದ್ದರಿಂದ, ಪ್ರತಿ ದೇಶದಲ್ಲಿಯೂ ಕೋವಿಡ್ ಪರೀಕ್ಷೆ ನಡೆಯುತ್ತಲೇ ಇರುತ್ತದೆ.

ಅತಿ ವೇಗವಾಗಿ, ನಿಖರವಾದ ವರದಿ ನೀಡುವ ಕಿಟ್ ಬಂದರೆ ವಿವಿಧ ದೇಶಗಳು ಅದಕ್ಕಾಗಿ ಬೇಡಿಕೆ ಇಡಲಿವೆ. ಇದರಿಂದಾಗಿ ಪರೀಕ್ಷೆಗೆ ಬಳಕೆಯಾಗುತ್ತಿರುವ ಸಮಯ ಉಳಿತಾಯವಾಗಲಿದೆ. ಆದ್ದರಿಂದ, ಆಕ್ಸ್‌ಫರ್ಡ್ ಯೂನಿವರ್ಸಿಟಿಯ ಕಿಟ್‌ ಸಹಾಯಕವಾಗಲಿದೆ.

ಕೋವಿಡ್ ಸೋಂಕಿನ ಲಕ್ಷಣಗಳು ಬದಲಾವಣೆಯಾದರೂ ಈ ಕಿಟ್ ಮೂಲಕ ಸುಲಭವಾಗಿ ಪತ್ತೆ ಹಚ್ಚಬಹುದು ಎನ್ನುತ್ತಾರೆ ವಿಜ್ಞಾನಿಗಳು. ಪ್ರಯೋಗಾಲಯಕ್ಕೆ ಬಂದ ಮಾದರಿಗಳನ್ನು ಈ ಕಿಟ್ ಸಹಾಯದಿಂದ ಈಗಾಲೇ ಪರೀಕ್ಷೆ ನಡೆಸಲಾಗುತ್ತಿದೆ.

English summary
Coronavirus report will available in less than five minutes. Britain's university of Oxford have developed a rapid COVID-19 test kit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X