ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ವೀನ್ ಎಲಿಜಬೆತ್‌ ಭೇಟಿ ಮಾಡಿದ್ದ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸ್‌ನ್‌

|
Google Oneindia Kannada News

ಲಂಡನ್, ಮಾರ್ಚ್ 27: ಬ್ರಿಟನ್ ಪ್ರಧಾನಮಂತ್ರಿ ಬೋರಿಸ್ ಜಾನ್ಸ್‌ನ್‌ಗೆ ಕೊರೊನಾ ಸೋಂಕು ದೃಢವಾಗಿದೆ. ಸೋಂಕು ಖಚಿತವಾದ ಬೆನ್ನಲ್ಲೆ ಬ್ರಿಟನ್ ಪ್ರಧಾನಿ ಭೇಟಿ ಮಾಡಿದವರಿಗೆ ಆತಂಕ ಹೆಚ್ಚಿದೆ.

ಇದೀಗ, ಕ್ವೀನ್ ಎಲಿಜಬೆತ್‌ ಮಾರ್ಚ್ 11 ರಂದು ಬ್ರಿಟನ್ ಪ್ರಧಾನಿ ಅವರನ್ನು ಭೇಟಿ ಮಾಡಿದ್ದರು ಎನ್ನುವ ಸುದ್ದಿ ಹೊರಬಿದ್ದಿದೆ. ಆದರೆ, ಕ್ವೀನ್ ಎಲಿಜಬೆತ್‌ ಅವರ ಆರೋಗ್ಯದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ ಎಂದು ತಿಳಿದುಬಂದಿದೆ.

ಬ್ರಿಟನ್ ರಾಜಕುಮಾರ ಚಾರ್ಲ್ಸ್ ಗೆ ಕೊರೊನಾ ಪಾಸಿಟಿವ್ಬ್ರಿಟನ್ ರಾಜಕುಮಾರ ಚಾರ್ಲ್ಸ್ ಗೆ ಕೊರೊನಾ ಪಾಸಿಟಿವ್

ಎಲಿಜಬೆತ್‌ ಕೊನೆಯದಾಗಿ ಮಾರ್ಚ್ 11 ರಂದು ಪ್ರಧಾನಿಯವರನ್ನು ಭೇಟಿ ಮಾಡಿದ್ದರು. ತಮ್ಮ ಆರೋಗ್ಯದ ಬಗ್ಗೆ ಎಲ್ಲ ರೀತಿಯ ಮುಂಜಾಗ್ರತೆ ಕ್ರಮಗಳನ್ನು ಅವರ ತೆಗೆದುಕೊಂಡಿದ್ದಾರೆ ಎಂದು ಕ್ವೀನ್ ವಕ್ತಾರ ತಿಳಿಸಿದ್ದಾರೆ. 93 ವರ್ಷದ ಕ್ವೀನ್ ಎಲಿಜಬೆತ್‌ ಪ್ರಸ್ತುತ ಲಂಡನ್‌ನ ಪಶ್ಚಿಮದಲ್ಲಿರುವ ವಿಂಡ್ಸರ್ ಕ್ಯಾಸಲ್‌ನಲ್ಲಿ ನೆಲೆಸಿದ್ದು, 98 ವರ್ಷದ ಪತಿ ಪ್ರಿನ್ಸ್ ಫಿಲಿಪ್ ಜೊತೆಯಲ್ಲಿದ್ದಾರೆ.

Queen Elizabeth Met UK PM Boris Johnson On March 11

ಅಂದ್ಹಾಗೆ, ಬ್ರಿಟನ್ ನ ರಾಜಕುಮಾರ ಚಾರ್ಲ್ಸ್ ಗೆ ಬುಧವಾರ ಕೊರೊನಾ ಪರೀಕ್ಷೆ ಪಾಸಿಟಿವ್ ಬಂದಿದೆ ಎಂದು ಅವರ ಕಚೇರಿ ಖಚಿತ ಪಡಿಸಿದೆ. 71 ವರ್ಷದ ಚಾರ್ಲ್ಸ್, ಕ್ವೀನ್ ಎಲಿಜಬೆತ್ II ಹಿರಿಯ ಮಗ ಮತ್ತು ಉತ್ತರಾಧಿಕಾರಿಯೂ ಹೌದು.

ಇನ್ನು ಬ್ರಿಟಮ್ ಪ್ರಧಾನಿ ಕೊರೊನಾ ಕುರಿತು ಸ್ಪಷ್ಟನೆ ನೀಡಿದ್ದು ''ನನಗೆ ನೊವೆಲ್ ಕೊರೊನಾ ವೈರಸ್ ಸೋಂಕು ತಗುಲಿರುವುದು ಖಚಿತವಾಗಿದೆ. ಸಣ್ಣ ಪ್ರಮಾಣದ ಲಕ್ಷಣಗಳು ಕಾಣಿಸಿಕೊಂಡಿದ್ದರಿಂದ ವೈದ್ಯರು ತಪಾಸಣೆ ನಡೆಸಿದ್ದರು. ಈಗ ಸೋಂಕು ಇರುವುದು ದೃಢಪಟ್ಟಿದೆ. ನಾನು ಸೆಲ್ಪ್ ಐಸೋಲೇಷನ್ ಮಾಡಿಕೊಳ್ಳಲಿದ್ದು, ಕೋವಿಡ್ 19 ನಿಯಂತ್ರಣಕ್ಕೆ ವಿಡಿಯೋ ಕಾನ್ಪರೆನ್ಸ್ ಮೂಲಕ ಸರ್ಕಾರವನ್ನು ನಿಭಾಯಿಸಲಿದ್ದೇನೆ'' ಎಂದು ವಿಡಿಯೋ ಮೂಲಕ ಮಾಹಿತಿ ನೀಡಿದ್ದರು.

English summary
United Kingdom Prime Minister Boris Johnson, who has tested positive today. now, latest news 93 Year old Queen Elizabeth met UK's PM On March 11.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X