ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಕಾಏಕಿ ಆಸ್ಪತ್ರೆಗೆ ದಾಖಲಾಗಿದ್ದ ಬ್ರಿಟನ್ ರಾಣಿ ಎರಡನೇ ಎಲಿಜಬೆತ್

|
Google Oneindia Kannada News

ಲಂಡನ್, ಅಕ್ಟೋಬರ್ 22: ಕಳೆದ ಹಲವು ವರ್ಷಗಳಲ್ಲಿ ಇದೇ ಮೊದಲ ಬಾರಿ 95 ವರ್ಷದ ಬ್ರಿಟನ್ ರಾಣಿ ಎರಡನೇ ಎಲಿಜಬೆತ್ ಒಂದು ರಾತ್ರಿಯನ್ನು ಆಸ್ಪತ್ರೆಯಲ್ಲಿ ಕಳೆದಿದ್ದಾರೆ.

ಬಿಲ್ ಗೇಟ್ಸ್ ಸೇರಿದಂತೆ ಕೋಟ್ಯಧಿಪತಿ ಉದ್ಯಮಿ ನಾಯಕರಿಗಾಗಿ ಗುರುವಾರ ರಾತ್ರಿ ವಿಂಡ್ಸರ್‌ನಲ್ಲಿ ಏರ್ಪಡಿಸಲಾದ ಪಾನೀಯ ಕೂಟದಲ್ಲಿ ಎಲಿಜಬೆತ್ ಭಾಗಿಯಾಗಿದ್ದರು. ಹವಾಮಾನ ಬದಲಾವಣೆ ಸಮಾವೇಶದ ಹಿನ್ನೆಲೆಯಲ್ಲಿ ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ಹಸಿರು ಹೂಡಿಕೆ ಸಮಾವೇಶ ನಡೆಸಿದ್ದು, ಅಲ್ಲಿಗೆ ಉದ್ಯಮಿಗಳು ಆಗಮಿಸಿದ್ದರು.

ಬ್ರಿಟನ್ ರಾಣಿ ಎಲಿಜಬೆತ್ ಪತಿ ರಾಜ ಫಿಲಿಪ್ ನಿಧನಬ್ರಿಟನ್ ರಾಣಿ ಎಲಿಜಬೆತ್ ಪತಿ ರಾಜ ಫಿಲಿಪ್ ನಿಧನ

ಹಲವು ವರ್ಷಗಳಲ್ಲಿ ಎಲಿಜಬೆತ್ ಇದೇ ಮೊದಲ ಬಾರಿಗೆ ಆಸ್ಪತ್ರೆಗೆ ದಾಖಲಾಗಿದ್ದರು, ಪ್ರಾಥಮಿಕ ಆರೋಗ್ಯ ತಪಾಸಣೆ ಬಳಿಕ ಅವರು ವಿಂಡ್ಸರ್ ಕೋಟೆಯ ಮನೆಗೆ ಮರಳಿರುವುದಾಗಿ ಮಾಹಿತಿ ಲಭ್ಯವಾಗಿದೆ.

Queen Elizabeth II Spends a Night In Hospital After Years For Tests

ಹಲವು ದಿನಗಳು ವಿಶ್ರಾಂತಿ ಪಡೆಯಬೇಕೆಂಬ ವೈದ್ಯಕೀಯ ಸಲಹೆ ಮೇರೆಗೆ ರಾಣಿ ಎಲಿಜಬೆತ್ ಆಸ್ಪತ್ರೆಯಲ್ಲಿ ಕೆಲವು ಪ್ರಾಥಮಿಕ ಆರೋಗ್ಯ ತಪಾಸಣೆಗೆ ಒಳಗಾಗಿದ್ದರು. ಭೋಜನ ಸಮಯದ ವೇಳೆ ಅವರು ವಿಂಡ್ಸರ್ ಕೋಟೆಗೆ ಮರಳಿದರು ಹಾಗೂ ಉತ್ಸಾಹದಲ್ಲಿಯೇ ಕಾರ್ಯ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು.

ವಿಶ್ವದ ಸುದೀರ್ಘ ಮತ್ತು ಪ್ರಾಚೀನ ಆಡಳಿತ ನಡೆಸಿರುವ ರಾಜಮನೆತನದ ರಾಣಿ ಎಲಿಜಬೆತ್, ಉತ್ತರ ಐರ್ಲೆಂಡ್‌ನ ಅಧಿಕೃತ ಭೇಟಿ ರದ್ದುಪಡಿಸಿದ್ದರು.

ಎಲಿಜಬೆತ್ ಅವರಿಗೆ ವಿಶ್ರಾಂತಿ ಪಡೆಯುವಂತೆ ಅವರ ವೈದ್ಯಕೀಯ ಸಿಬ್ಬಂದಿ ಸಲಹೆ ನೀಡಿದ್ದರು. ಹಾಗೆಯೇ ಅವರ ಅನಾರೋಗ್ಯವು ಕೋವಿಡ್ 19ಗೆ ಸಂಬಂಧಿಸಿದ್ದಲ್ಲ ಎಂಬುದನ್ನೂ ಸ್ಪಷ್ಟಪಡಿಸಿದ್ದಾರೆ.

ಮಾಹಿತಿ ಪ್ರಕಾರ ಅವರು, ಸೆಂಟ್ರಲ್ ಲಂಡನ್‌ನ ಕಿಂಗ್ ಎಡ್ವರ್ಡ್ VII ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಎಲಿಜಬೆತ್ ಅವರ ಪತಿ ಪ್ರಿನ್ಸ್ ಫಿಲಿಪ್ ಇದೇ ವರ್ಷ ವಿಂಡ್ಸರ್‌ನಲ್ಲಿ ಮೃತಪಟ್ಟಿದ್ದರು. ಬಳಿಕವೂ ಎಲಿಜಬೆತ್ ಅಧಿಕೃತ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಹಾಗೆಯೇ ಹೆಚ್ಚುವರಿ ಹೊಣೆಗಾರಿಕೆಯನ್ನು ಅವರ ಮಗ ಪ್ರಿನ್ಸ್ ಚಾರ್ಲ್ಸ್ ಅವರಿಗೆ ವಹಿಸಿದ್ದಾರೆ.

ರಾಣಿ ಎಲಿಜಬೆತ್ ಆರೋಗ್ಯ ಉತ್ತಮವಾಗಿದೆ, ಸಂತೋಷದಿಂದಿದ್ದಾರೆ, ರಾಣಿಯಾಗಿ ಅಧಿಕಾರವಹಿಸಿ ಮುಂದಿನ ವರ್ಷಕ್ಕೆ 70 ವರ್ಷ ಪೂರೈಸಲಿರುವ ಎಲಿಜಬೆತ್ 2013 ಬಳಿಕ ಇದೇ ಮೊದಲ ಬಾರಿಗೆ ಒಂದು ರಾತ್ರಿ ಆಸ್ಪತ್ರೆಯಲ್ಲಿ ಕಳೆದಿದ್ದಾರೆ. 2018ರಲ್ಲಿ ಕಣ್ಣಿನ ಶಸ್ತ್ರಚಿಕಿತ್ಸೆ ಹಾಗೂ 2003ರಲ್ಲಿ ಮಂಡಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಆರೋಗ್ಯ ಸಂಬಂಧಿತ ವಿಚಾರಗಳನ್ನು ಅರಮನೆ ಆಡಳಿತವು ಖಾಸಗಿ ವಿಷಯವೆಂದು ಪರಿಗಣಿಸುತ್ತದೆ, ಹೆಚ್ಚು ಚರ್ಚೆಗಳಿಗೆ ಅವಕಾಶ ನೀಡುವುದಿಲ್ಲ.

ರಾಣಿ ಎಲಿಜಬೆತ್ ಒಂದು ವರ್ಷದಲ್ಲಿ ಎರಡು ಜನ್ಮದಿನಗಳನ್ನು ಆಚರಿಸುತ್ತಾರೆ. ಮೊದಲನೆಯದು ಅವರು 1926 ರಲ್ಲಿ ಏಪ್ರಿಲ್ 21 ರಂದು ಜನಿಸಿದ ದಿನವಾದರೆ, ಮತ್ತೊಂದು, ಜೂನ್ ಎರಡನೇ ಶನಿವಾರದಂದು ಅಧಿಕೃತವಾದ ಹುಟ್ಟುಹಬ್ಬವನ್ನು ಆಚರಿಸುತ್ತಾರೆ.

ರಾಣಿ ಸಾಮಾನ್ಯವಾಗಿ ತನ್ನ ನಿಜವಾದ ಜನ್ಮದಿನವನ್ನು ತನ್ನ ಕುಟುಂಬದೊಂದಿಗೆ ಆಚರಿಸುತ್ತಾರೆ. ಆದರೂ, ಈ ವೇಳೆ ಹೈಡ್ ಪಾರ್ಕ್‌ನಲ್ಲಿ 41-ಗನ್ ಸೆಲ್ಯೂಟ್, ವಿಂಡ್ಸರ್ ಗ್ರೇಟ್ ಪಾರ್ಕ್‌ನಲ್ಲಿ 21-ಗನ್ ಸೆಲ್ಯೂಟ್ ಮತ್ತು ಏಪ್ರಿಲ್ 21 ರಂದು ಲಂಡನ್ ಗೋಪುರದಲ್ಲಿ 62-ಗನ್ ಸೆಲ್ಯೂಟ್ ನಲ್ಲಿರುತ್ತದೆ.

ಆದರೆ, ಅವರ ಅಧಿಕೃತ ಜನ್ಮದಿನದಂದು, ರಾಷ್ಟ್ರದಲ್ಲಿ ಒಂದು ದೊಡ್ಡ ಸಾಂಪ್ರದಾಯಿಕ ಸಮಾರಂಭ, ಟ್ರೂಪಿಂಗ್ ಆಫ್ ಕಲರ್ಸ್ ಪೆರೇಡ್‌ನಿಂದ ಗುರುತಿಸಲಾಗಿದೆ. ಬ್ರಿಟಿಷ್ ರಾಜ ಮನೆತನದವರ ಅಧಿಕೃತ ಜನ್ಮದಿನಗಳನ್ನು ಗುರುತಿಸಲು ಈ ಸಮಾರಂಭವನ್ನು 260 ವರ್ಷಗಳಿಗೂ ಹೆಚ್ಚು ಕಾಲದಿಂದ ಆಚರಿಸಲಾಗುತ್ತಿದೆ.

ಈ ಮೆರವಣಿಗೆ ರಾಣಿ ಎಲಿಜಬೆತ್‌ರ ಅಧಿಕೃತ ನಿವಾಸವಾದ ಬಕಿಂಗ್‌ಹ್ಯಾಮ್‌ ಅರಮನೆಯಿಂದ ಪ್ರಾರಂಭವಾಗುತ್ತದೆ. ಇದು ಡೌನಿಂಗ್ ಸ್ಟ್ರೀಟ್ ಬಳಿಯ ವೈಟ್‌ಹಾಲ್‌ನಲ್ಲಿ ಮಾಲ್‌ನಿಂದ ಹಾರ್ಸ್ ಗಾರ್ಡ್ಸ್ ಪೆರೇಡ್‌ವರೆಗೆ ಚಲಿಸುತ್ತದೆ.

ನಂತರ ಮತ್ತೆ ವಾಪಸ್‌ ಅರಮನೆಗೆ ಮರಳುತ್ತದೆ. ರಾಜಮನೆತನದವರು ಸಾಂಪ್ರದಾಯಿಕ ಸಮಾರಂಭದ ಅಂಗವಾಗಿ ಮಾಲ್‌ನಿಂದ ಪ್ರಯಾಣಿಸುತ್ತಾರೆ. ಜನರನ್ನು ತಮ್ಮ ನಿವಾಸದ ಬಕಿಂಗ್‌ಹ್ಯಾಮ್‌ ಅರಮನೆಯ ಬಾಲ್ಕನಿಯಲ್ಲಿ ಸ್ವಾಗತಿಸುತ್ತಾರೆ. ಈ ಸಂದರ್ಭಕ್ಕಾಗಿ ವೈಮಾನಿಕ ಪ್ರದರ್ಶನವನ್ನು ಆರ್‌ಎಎಫ್‌ ವಿಮಾನಗಳ ಪ್ರದರ್ಶನದೊಂದಿಗೆ ಮೆರವಣಿಗೆ ಮುಕ್ತಾಯವಾಗುತ್ತದೆ.

ರಾಯಲ್ ನಿಯಮಾವಳಿಗಳ ಪ್ರಕಾರ, ಹವಾಮಾನವು ಆಹ್ಲಾದಕರವಾದಾಗ ಬೇಸಿಗೆಯಲ್ಲಿ ಒಂದು ದಿನದಂದು ರಾಯಲ್ ಮೊನಾರ್ಕ್ ಅವರ ಅಧಿಕೃತ ಜನ್ಮದಿನವನ್ನು ಸಾರ್ವಜನಿಕವಾಗಿ ಆಚರಿಸುವುದು ಅವಶ್ಯಕ. ಅಕ್ಟೋಬರ್‌ನಲ್ಲಿ ಜನಿಸಿದ ಕಿಂಗ್ ಜಾರ್ಜ್ II ಈ ಪದ್ಧತಿಯನ್ನು ಪ್ರಾರಂಭಿಸಿದರೆಂದು ನಂಬಲಾಗಿದೆ.

English summary
Britain's Queen Elizabeth II spent a night at a hospital for the first time in years having cancelled her visit to Northern Ireland for some tests, Buckingham Palace said on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X