• search
  • Live TV
ಲಂಡನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬ್ರಿಟನ್ ರಾಣಿ ಎಲಿಜಬೆತ್ ಪತಿ ರಾಜ ಫಿಲಿಪ್ ನಿಧನ

|

ಲಂಡನ್, ಏಪ್ರಿಲ್ 9: ಬ್ರಿಟನ್ ರಾಣಿ ಎಲಿಜಬೆತ್ ಪತಿ ರಾಜ ಫಿಲಿಪ್ (99) ನಿಧನರಾಗಿದ್ದಾರೆ.

ಅವರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು ಇತ್ತೀಚೆಗಷ್ಟೇ ಆಸ್ಪತ್ರೆಗೆ ದಾಖಲಾಗಿದ್ದು, ಹೃದಯ ಶಸ್ತ್ರ ಚಿಕಿತ್ಸೆ ಕೂಡ ನಡೆಸಲಾಗಿತ್ತು.

ಕೊರೊನಾ ಲಸಿಕೆ ಪಡೆದ ಬ್ರಿಟಿನ್ ರಾಣಿ ಎಲಿಜಬೆತ್ ಹಾಗೂ ರಾಜ ಫಿಲಿಪ್ಕೊರೊನಾ ಲಸಿಕೆ ಪಡೆದ ಬ್ರಿಟಿನ್ ರಾಣಿ ಎಲಿಜಬೆತ್ ಹಾಗೂ ರಾಜ ಫಿಲಿಪ್

ಅವರ ನಿಧನದ ಕುರಿತು ಬಕಿಂಗ್‌ಹ್ಯಾಮ್ ಅರಮನೆ ಮಾಹಿತಿ ನೀಡಿದೆ. ಪತಿಯ ಸಾವಿನ ಸುದ್ದಿ ಕೇಳಿ ಬಹಳ ದುಃಖವಾಗಿದೆ ಎಂದು ಎಲಿಜಬೆತ್ ಹೇಳಿದ್ದಾರೆ.

ಇತ್ತೀಚೆಗಷ್ಟೇ ರಾಣಿ ಎಲಿಜಬೆತ್ ಹಾಗೂ ರಾಜ ಫಿಲಿಪ್‌ಗೆ ಕೊರೊನಾ ಲಸಿಕೆ ನೀಡಲಾಗಿತ್ತು. ಲಾಕ್ ಡೌನ್ ಸಮಯದಲ್ಲಿ ಬ್ರಿಟನ್‌ ರಾಜ, ರಾಣಿ ಇದೇ ಅರಮನೆಯಲ್ಲಿ ನೆಲೆಸಿದ್ದರು. ಮಾರ್ಚ್‌ನಿಂದ ಅಕ್ಟೋಬರ್ ವರೆಗೆ ನಡೆದ ಯಾವುದೇ ಬಹಿರಂಗ ಕಾರ್ಯಕ್ರಮಗಳಲ್ಲಿ ಈ ದಂಪತಿ ಕಾಣಿಸಿಕೊಂಡಿರಲಿಲ್ಲ. ಅದೇ ಸಮಯದಲ್ಲಿ ರಾಜ ದಂಪತಿಯ ಹಿರಿಯ ಪುತ್ರ ಪ್ರಿನ್ಸ್ ಚಾರ್ಲ್ಸ್ ಕೋವಿಡ್ ಸೋಂಕಿಗೆ ಒಳಗಾಗಿದ್ದರು.

ರಾಜದಂಪತಿಯ ಮೊಮ್ಮಗ ವಿಲಿಯಮ್ಸ್ ಅವರಿಗೂ ಕೂಡಾ ಕಳೆದ ಏಪ್ರಿಲ್ ನಲ್ಲಿ ಕೊರೊನಾ ಸೋಂಕು ದೃಢಪಟ್ಟಿತ್ತು. ಆದರೆ, ಈ ಕುರಿತು ಅಧಿಕೃತ ಹೇಳಿಕೆ ನೀಡಿರಲಿಲ್ಲ ಎಂದು ಬಿಬಿಸಿ ವರದಿಮಾಡಿತ್ತು.

ರಾಜ, ರಾಣಿ ಕ್ರಿಸ್‌ಮಸ್ ಹಬ್ಬವನ್ನು ಬರ್ಕ್‌ಷೈರ್ ರೆಸಿಡೆನ್ಸಿಯಲ್ಲಿ ಆಚರಿಸಿಕೊಂಡಿದ್ದರು. ಕೊರೊನಾ ಸಾಂಕ್ರಾಮಿಕ ನಂತರ ಮೊದಲ ಬಾರಿಗೆ ಕಳೆದ ತಿಂಗಳು ರಾಣಿ ಎಲಿಜಬತ್ ರಾಜ ಕುಟುಂಬದ ಹಿರಿಯ ಸದಸ್ಯರನ್ನು ಭೇಟಿಯಾಗಿದ್ದರು.

English summary
Queen Elizabeth II's 99-year-old husband Prince Philip, who was recently hospitalised and underwent a successful heart procedure, died on Friday, Buckingham Palace announced.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X