ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಿನ್ಸ್ ಚಾರ್ಲ್ಸ್ ಗುಣಮುಖರಾಗಲು ಆಯುರ್ವೇದ ಚಿಕಿತ್ಸೆ ಕಾರಣವೇ?

|
Google Oneindia Kannada News

ಲಂಡನ್, ಏಪ್ರಿಲ್ 05: ಕೊರೊನಾವೈರಸ್ ಸೋಂಕಿಗೆ ತುತ್ತಾಗಿದ್ದ ಬ್ರಿಟನ್ ಪ್ರಿನ್ಸ್ ಚಾರ್ಲ್ಸ್ ಅವರು ಪ್ರತ್ಯೇಕವಾಗಿ ಉಳಿದು ಸೂಕ್ತ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಚಾರ್ಲ್ಸ್ ಗುಣಮುಖರಾಗಲು ಆಯುರ್ವೇದ ಪದ್ಧತಿ ಬಳಸಲಾಗಿತ್ತು. ಬೆಂಗಳೂರಿನ ತಜ್ಞರ ನೆರವು ಪಡೆಯಲಾಗಿತ್ತು ಎಂಬ ಸುದ್ದಿಇದೆ. ಆದರೆ, ಇದೆಲ್ಲವೂ ಸತ್ಯಕ್ಕೆ ದೂರವಾಗಿವೆ ಎಂದು ಕ್ಲಾರೆನ್ಸ್ ಹೌಸ್ ಸ್ಪಷ್ಟಪಡಿಸಿದೆ.

ಭಾರತದ ಆಯುರ್ವೇದ ವೈದ್ಯ ಪದ್ಧತಿ ಮೊರೆ ಹೋಗಿ ಕೊರೊನಾ ಗೆದ್ದು ಬಂದಿದ್ದಾರೆ. ಕೊರೊನಾ ಸೋಂಕು ಪೀಡಿತರಾಗಿದ್ದ ಬ್ರಿಟನ್‌ನ ರಾಜಕುಮಾರ ಪ್ರಿನ್ಸ್ ಚಾರ್ಲ್ಸ್‌ಗೆ ಬೆಂಗಳೂರು ಮೂಲದ ವೈದ್ಯ ಐಸಾಕ್ ಮಥಾಯ್ ಚಿಕಿತ್ಸೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಸೌಖ್ಯ ಆಯುರ್ವೇದ ರೆಸಾರ್ಟ್ ಹೊಂದಿರುವ ಐಸಾಕ್ ಮಥಾಯ್ ಇಲ್ಲಿಂದಲೇ ಆಯುರ್ವೇದದ ಚಿಕಿತ್ಸೆ ನೀಡಿದ್ದರು ಎಂದು ಕೇಂದ್ರ ಆಯುಷ್ ಸಚಿವ ಶ್ರೀಪಾದ್ ನಾಯ್ಕ್ ಹೇಳಿಕೆ ನೀಡಿದ್ದರು. ಈ ಮೂಲಕ ಆಯುರ್ವೇದ ಹಾಗೂ ಹೋಮಿಯೋಪತಿಯಲ್ಲಿ ಕೊರೊನಾ ವೈರಸ್‌ಗೆ ಚಿಕಿತ್ಸೆ ಇದೆ ಎಂದು ಶ್ರೀಪಾದ್ ನಾಯ್ಕ್ ಹೇಳಿದ್ದರು.

ಬ್ರಿಟನ್‌ನ ಪ್ರಿನ್ಸ್ ಚಾರ್ಲ್ಸ್ ಗೆ ಕೊರೊನಾ: ಬೆಂಗಳೂರಿನ ವೈದ್ಯರಿಂದ ಚಿಕಿತ್ಸೆಬ್ರಿಟನ್‌ನ ಪ್ರಿನ್ಸ್ ಚಾರ್ಲ್ಸ್ ಗೆ ಕೊರೊನಾ: ಬೆಂಗಳೂರಿನ ವೈದ್ಯರಿಂದ ಚಿಕಿತ್ಸೆ

ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ಕ್ಲಾರೆನ್ಸ್ ಹೌಸ್, ಪ್ರಿನ್ಸ್ ಆಫ್ ವೇಲ್ಸ್ ಗುಣಮುಖರಾಗಲು ಆಯುರ್ವೇದ, ಹೋಮಿಯೋಪತಿ ಚಿಕಿತ್ಸಾ ವಿಧಾನ ಬಳಸಿಲ್ಲ ಎಂದು ಹೇಳಿದೆ. ಇಷ್ಟಕ್ಕೂ ಈ ರೀತಿ ಸುದ್ದಿ ಹಬ್ಬಿದ್ದು ಹೇಗೆ? ಏಕೆ? ಮುಂದೆ ಓದಿ...

ಕೊವಿಡ್19 ಪಾಸಿಟಿವ್

ಕೊವಿಡ್19 ಪಾಸಿಟಿವ್

71 ವರ್ಷ ವಯಸ್ಸಿನ ಪ್ರಿನ್ಸ್ ಚಾರ್ಲ್ಸ್ ಅವರಿಗೆ ಕಳೆದ ವಾರ ಕೊವಿಡ್19 ಪಾಸಿಟಿವ್ ಎಂದು ತಿಳಿದು ಬಂದಿತ್ತು. ಬ್ರಿಟನ್ ಪ್ರಧಾನಿ ಬೊರಿಸ್ ಜಾನ್ಸನ್ ಕೂಡಾ ಪಾಸಿಟಿವ್ ಎಂದು ತಿಳಿದು ಬಂದಿದ್ದರಿಂದ ಇಂಗ್ಲೆಂಡಿನಲ್ಲಿ ಆತಂಕ ಮೂಡಿತ್ತು. ಆದರೆ, ತಕ್ಷಣವೇ ಪ್ರತ್ಯೇಕ ಕೊಠಡಿಯಲ್ಲಿರಿಸಿ ಚಿಕಿತ್ಸೆ ನೀಡಲಾಯಿತು. ಯುಕೆಯ ರಾಷ್ಟ್ರೀಯ ಆರೋಗ್ಯ ಸೇವೆ(ಎನ್ಎಚ್ಎಸ್) ನೀಡಿದ ಮಾರ್ಗದರ್ಶನವನ್ನು ಅನುಸರಿಸಿ, ಗುಣಮುಖರಾಗಿದ್ದಾರೆ ಎಂದು ಕ್ಲಾರೆನ್ಸ್ ಹೌಸ್ ವಕ್ತಾರರು ಹೇಳಿದ್ದಾರೆ.

ಆಯುರ್ವೇದ ಚಿಕಿತ್ಸೆ ಸುದ್ದಿ ಹಬ್ಬಿದ್ದು ಹೇಗೆ?

ಆಯುರ್ವೇದ ಚಿಕಿತ್ಸೆ ಸುದ್ದಿ ಹಬ್ಬಿದ್ದು ಹೇಗೆ?

ಆಯುರ್ವೇದ ಚಿಕಿತ್ಸೆ ಸುದ್ದಿ ಹಬ್ಬಲು ಕಾರಣ?: ಚಾರ್ಲ್ಸ್ ಅವರು ಆಯುರ್ವೇದ ಪರ ಅನೇಕ ಬಾರಿ ಬಹಿರಂಗವಾಗಿ ಮೆಚ್ಚುಗೆಯ ಮಾತುಗಳಾನ್ನಾಡಿದ್ದಾರೆ. 2018ರ ಏಪ್ರಿಲ್ ನಲ್ಲಿ ಭಾರತದ ಪ್ರಧಾನಿ ಮೋದಿ ಅವರು ಲಂಡನ್ನಿಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಲಂಡನ್ನಿನ ಸೈನ್ಸ್ ಮ್ಯೂಸಿಯಂನಲ್ಲಿ ಯೋಗ ಮತ್ತು ಆಯುರ್ವೇದ ಸಂಶೋಧನಾ ಕೇಂದ್ರ ಉದ್ಘಾಟಿಸಲಾಗಿತ್ತು.

ಕೊರೊನಾ ಸೋಂಕಿತನಿಗೆ ಚಿಕಿತ್ಸೆ ನೀಡಿದ ವೈದ್ಯ ಬಿಚ್ಚಿಟ್ಟ ಆಘಾತಕಾರಿ ವಿಷ್ಯ!ಕೊರೊನಾ ಸೋಂಕಿತನಿಗೆ ಚಿಕಿತ್ಸೆ ನೀಡಿದ ವೈದ್ಯ ಬಿಚ್ಚಿಟ್ಟ ಆಘಾತಕಾರಿ ವಿಷ್ಯ!

ಬೆಂಗಳೂರಿನ ಆಯುರ್ವೇದ ರೆಸಾರ್ಟ್ ನಂಟು

ಬೆಂಗಳೂರಿನ ಆಯುರ್ವೇದ ರೆಸಾರ್ಟ್ ನಂಟು

ಬೆಂಗಳೂರಿನ ಸೌಖ್ಯ ಆಯುರ್ವೇದ ರೆಸಾರ್ಟ್ ಜೊತೆ ಪ್ರಿನ್ಸ್ ಚಾರ್ಲ್ಸ್ ಹಾಗೂ ಕ್ಯಾಮಿಲಾ ಅವರು ನಂಟು ಹೊಂದಿದ್ದು, ರೆಸಾರ್ಟ್ ನ ವಿವಿಐಪಿ ಪಟ್ಟಿಯಲ್ಲಿ ಹೆಸರು ದಾಖಲಾಗಿದೆ. ಡಾ. ಐಸಾಕ್ ಮಥಾಯಿ ಅವರು ಅನೇಕ ಬಾರಿ ಈ ವಿಷಯವನ್ನು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಆದರೆ, ಚಾರ್ಲ್ಸ್ ಚಿಕಿತ್ಸೆ ನೀಡಲು ಡಾ. ಮಥಾಯಿ ನೆರವು ಪಡೆದಿರುವುದು, ಆಯುರ್ವೇದ ಚಿಕಿತ್ಸೆ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಕೇಂದ್ರ ಸಚಿವ ಶ್ರೀಪಾದ್ ನಾಯ್ಕ್ ಹೇಳಿಕೆ ನಂತರ ಗೊಂದಲ, ಅಚ್ಚರಿ ಮೂಡಿದ್ದಂತೂ ನಿಜ.

ವಾವ್: ಸಂಭಾವ್ಯ ಕೊರೊನಾ ವೈರಸ್ ಲಸಿಕೆ ಮೊದಲ ಹಂತದಲ್ಲಿ ಪಾಸ್.!ವಾವ್: ಸಂಭಾವ್ಯ ಕೊರೊನಾ ವೈರಸ್ ಲಸಿಕೆ ಮೊದಲ ಹಂತದಲ್ಲಿ ಪಾಸ್.!

ಸ್ಕಾಟ್ಲೆಂಡ್ ನಲ್ಲೇ ಉಳಿಯಲಿರುವ ಚಾರ್ಲ್ಸ್ ದಂಪತಿ

ಸ್ಕಾಟ್ಲೆಂಡ್ ನಲ್ಲೇ ಉಳಿಯಲಿರುವ ಚಾರ್ಲ್ಸ್ ದಂಪತಿ

ಸದ್ಯ ಗುಣಮುಖರಾಗಿರುವ ಚಾರ್ಲ್ಸ್ ಅವರು ಸ್ಕಾಟ್ಲೆಂಡ್ ನ ಮನೆಯಿಂದಲೇ ಸದ್ಯಕ್ಕೆ ಕಾರ್ಯ ನಿರ್ವಹಿಸಲಿದ್ದಾರೆ. ಎನ್ಎಚ್ಎಸ್ ಲಂಡನ್ನಿನಲ್ಲಿ ಆರಂಭಿಸಿದ 4000 ಬೆಡ್ ಗಳುಳ್ಳ ನೈಂಟಿಗಲ್ ಆಸ್ಪತ್ರೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಚಾರ್ಲ್ಸ್ ಉದ್ಘಾಟಿಸಿದ್ದಾರೆ. ಚಾರ್ಲ್ಸ್ ಪತ್ನಿ ಕಾರ್ನ್ ವಾಲ್ ನ ರಾಣಿ ಕ್ಯಾಮಿಲಾ ಅವರಿಗೆ ಕೊರೊನಾ ನೆಗಟಿವ್ ಎಂದು ಬಂದಿದ್ದರೂ ಇನ್ನೂ ಕೆಲ ಸಮಯ ಕ್ವಾರಂಟೈನ್ ನಲ್ಲೇ ಇರಲಿದ್ದಾರೆ.

ಚೀನಾದಲ್ಲೊಂದು ವಿಚಿತ್ರ ಕೊರೊನಾ ಕೇಸ್: ವಾಸಿ ಆಗಿದ್ದು ಹೇಗೆ ಗೊತ್ತಾ.?ಚೀನಾದಲ್ಲೊಂದು ವಿಚಿತ್ರ ಕೊರೊನಾ ಕೇಸ್: ವಾಸಿ ಆಗಿದ್ದು ಹೇಗೆ ಗೊತ್ತಾ.?

ಯುಕೆಯಲ್ಲಿ ಕೊರೊನಾವೈರಸ್

ಯುಕೆಯಲ್ಲಿ ಕೊರೊನಾವೈರಸ್

ಯುನೈಟೆಡ್ ಕಿಂಗ್ಡಮ್ ನಲ್ಲಿ ಕೊರೊನಾವೈರಸ್ ಸೋಂಕಿನ ಭೀತಿ ಮುಂದುವರೆದಿದೆ. ಏಪ್ರಿಲ್ 5ರ ಈ ಸಮಯದ ಅಂಕಿ ಅಂಶದಂತೆ, 41, 903 ಪ್ರಕರಣಗಳು ದಾಖಲಾಗಿದ್ದು, 4313 ಮಂದಿ ಮೃತರಾಗಿದ್ದಾರೆ. 135 ಮಂದಿ ಗುಣಮುಖರಾಗಿದ್ದಾರೆ. ವಿಶ್ವದೆಲ್ಲೆಡೆ 12, 01 964 ಪ್ರಕರಣಗಳು ದಾಖಲಾಗಿದ್ದು, 64, 727 ಮಂದಿ ಮೃತರಾಗಿದ್ದರೆ, 246, 638 ಮಂದಿ ಗುಣಮುಖರಾಗಿದ್ದಾರೆ.

ಅಚ್ಚರಿ ತಂದ ಅಧ್ಯಯನ: ಕೊರೊನಾ ವೈರಸ್ ಗೆ BCG ಲಸಿಕೆ ರಾಮಬಾಣ?ಅಚ್ಚರಿ ತಂದ ಅಧ್ಯಯನ: ಕೊರೊನಾ ವೈರಸ್ ಗೆ BCG ಲಸಿಕೆ ರಾಮಬಾಣ?

English summary
Prince Charles, who came out of self-isolation to remotely inaugurate the UK's first makeshift National Health Service field hospital here on Friday, recovered from his COVID-19 symptoms by following NHS advice, his office said on Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X