ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿಎನ್‌ಬಿ ಹಗರಣ: ನೀರವ್ ಮೋದಿ ಜಾಮೀನು ಅರ್ಜಿ 5ನೇ ಬಾರಿ ವಜಾ

|
Google Oneindia Kannada News

ಲಂಡನ್, ಮಾರ್ಚ್ 6: ಪಂಜಾಬ್​ ನ್ಯಾಷನಲ್​ ಬ್ಯಾಂಕ್​ ನ ಬಹುಕೋಟಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ಉದ್ಯಮಿ ನೀರವ್ ಮೋದಿ ಸಲ್ಲಿಸಿದ್ದ ಜಾಮೀನು ಅರ್ಜಿ 5ನೇ ಬಾರಿ ವಜಾಗೊಂಡಿದೆ.

ಮುಂಬೈ ಶಾಖೆಯೊಂದರಲ್ಲಿ 11,500 ಕೋಟಿ ರೂ.ಗಳ ವಂಚನೆ ಮತ್ತು ಅಕ್ರಮ ವಹಿವಾಟು ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಲಂಡನ್ನಿನಲ್ಲಿ ಬಂಧಿಯಾಗಿರುವ ಉದ್ಯಮಿ ನೀರವ್ ಮೋದಿ ಅವರ ಜಾಮೀನು ಅರ್ಜಿಯನ್ನು ಲಂಡನ್ನಿನ ಕೋರ್ಟ್ ಮತ್ತೊಮ್ಮೆ ವಜಾಗೊಳಿಸಿದೆ. ಮಾರ್ಚ್ 19ರಂದು ಲಂಡನ್ನಿನ ಸ್ಕಾಟ್ಲೆಂಡ್ ಯಾರ್ಡ್ ಅಧಿಕಾರಿಗಳು, ನೀರವ್ ಅವರನ್ನು ಬಂಧಿಸಿದ್ದರು.

ಭಾರತದಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಾಗೂ ಇನ್ನೂ ಕೆಲವು ಬ್ಯಾಂಕುಗಳಿಗೆ ವಂಚನೆ ಮಾಡಿ ಪರಾರಿ ಆಗಿರುವ ನೀರವ್ ಮೋದಿ ಸದ್ಯ ಲಂಡನ್‌ನ ವಾಂಡ್ಸ್ ವರ್ಥ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದು, ಜಾಮೀನಿಗಾಗಿ ಅರ್ಜಿ ಹಾಕಿದ್ದರು.

UK court rejects Nirav Modis bail plea for fifth time

ಭಾರತ ತೊರೆದು ಇಂಗ್ಲೆಂಡ್ ಸೇರಿಕೊಂಡಿರುವ ದೇಶಭ್ರಷ್ಟ ಆರ್ಥಿಕ ಅಪರಾಧಿ ಪಟ್ಟಿಯಲ್ಲಿರುವ ಉದ್ಯಮಿ ನೀರವ್ ಮೋದಿ 2 ಬಿಲಿಯನ್ ಡಾಲರ್ ಮೊತ್ತದ ಹಣ ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್‍ನ (ಪಿಎನ್‍ಬಿ) ಬಹು ಕೋಟಿ ವಂಚನೆ ಪ್ರಕರಣದ ಆರೋಪಿ, ವಿಶ್ವ ಪ್ರಸಿದ್ಧ ಆಭರಣ ವಿನ್ಯಾಸಕ ನೀರವ್ ಮೋದಿ (49) ಅವರ ಆಸ್ತಿ ಬಗೆದಷ್ಟು ಸಿಗುತ್ತಲೇ ಇದೆ. ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನೀರವ್ ಮೋದಿಗೆ ಸೇರಿರುವ 523 ಕೋಟಿ ರು ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಂಡಿದ್ದಾರೆ. ಇದಲ್ಲದೆ ಮೋದಿಗೆ ಸೇರಿದ ಆಸ್ತಿಯನ್ನು ಹರಾಜು ಹಾಕಿ 51 ಕೋಟಿ ರು ಗಳಿಸಲಾಗಿದೆ.

English summary
A UK court on Thursday rejected for the fifth time the bail plea of fugitive diamond merchant Nirav Modi, who is fighting his extradition to India on charges over the nearly USD 2 billion Punjab National Bank (PNB) fraud and money laundering case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X