ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೂಪಾಂತರಗೊಂಡಿರುವ ಕೊರೊನಾ ವೈರಸ್‌ ಮೇಲೆ ಫೈಜರ್, ಮಾಡೆರ್ನಾ ಲಸಿಕೆ ಪ್ರಯೋಗ

|
Google Oneindia Kannada News

ಲಂಡನ್, ಡಿಸೆಂಬರ್ 22: ಬ್ರಿಟನ್‌ನಲ್ಲಿ ಪತ್ತೆಯಾಗಿರುವ ರೂಪಾಂತರಗೊಂಡಿರುವ ಕೊರೊನಾ ಸೋಂಕಿನ ಮೇಲೆ ಫೈಜರ್ ಹಾಗೂ ಮಾಡೆರ್ನಾ ಲಸಿಕೆಗಳ ಪರೀಕ್ಷೆ ಮಾಡಲಾಗುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ವೈರಸ್ ಗೆ ಈಗಾಗಲೇ ವಿಶ್ವಾದ್ಯಂತ ಹತ್ತಾರು ಔಷಧ ತಯಾರಿಕಾ ಸಂಸ್ಥೆಗಳು ಮತ್ತು ವಿಜ್ಞಾನಿಗಳು ಲಸಿಕೆ ಕಂಡುಹಿಡಿದಿದ್ದು, ಈ ಪೈಕಿ ಬಹುತೇಕ ಲಸಿಕೆಗಳು ಅಂತಿಮ ಹಂತದ ಪ್ರಯೋಗದಲ್ಲಿ ತೊಡಗಿವೆ. ಇದರ ನಡುವೆಯೇ ಬ್ರಿಟನ್ ನಲ್ಲಿ ಕೊರೊನಾ ರೂಪಾಂತರ ವೈರಸ್ ಬ್ರಿಟನ್ ನಲ್ಲಿ ಭಾರಿ ಅವಾಂತರ ಸೃಷ್ಟಿ ಮಾಡಿದ್ದು, ಬ್ರಿಟನ್ ನಲ್ಲಿ ಹಾಲಿ ಪತ್ತೆಯಾಗುತ್ತಿರುವ ಸೋಂಕು ಪ್ರಕರಣಗಳ ಪೈಕಿ ಶೇ.70ರಷ್ಟು ಸೋಂಕಿತರಲ್ಲಿ ರೂಪಾಂತರ ವೈರಸ್ ಸೋಂಕು ಕಂಡುಬರುತ್ತಿದೆ.

ರೂಪಾಂತರ ವೈರಸ್‌ಗೂ ಆರೇ ವಾರದಲ್ಲಿ ಲಸಿಕೆ: ಬಯೋಎನ್‌ಟೆಕ್ ಹೇಳಿಕೆರೂಪಾಂತರ ವೈರಸ್‌ಗೂ ಆರೇ ವಾರದಲ್ಲಿ ಲಸಿಕೆ: ಬಯೋಎನ್‌ಟೆಕ್ ಹೇಳಿಕೆ

ಆದರೆ ಈ ವಿಚಾರವಾಗಿ ಫೈಜರ್ ಮತ್ತು ಮಾಡರ್ನಾ ತಕ್ಷಣ ಪ್ರತಿಕ್ರಿಯೆಗೆ ಲಭ್ಯವಾಗಿಲ್ಲ. ಬ್ರಿಟನ್‌ನಲ್ಲಿ ಕಂಡುಬಂದಿರುವ ಕೊರೊನಾ ವೈರಸ್‌ನ ಹೊಸ ಸ್ವರೂಪ ಶೇ 40ರಿಂದ 70ರಷ್ಟು ವೇಗವಾಗಿ ಹರಡುತ್ತಿದೆ ಎನ್ನಲಾಗಿದೆ. ಈಗಾಗಲೇ ಅಭಿವೃದ್ಧಿಪಡಿಸಿರುವ ಲಸಿಕೆಗಳು ವೈರಸ್‌ನ ಹೊಸ ಸ್ವರೂಪದ ವಿರುದ್ಧ ಕಾರ್ಯನಿರ್ವಹಿಸದು ಎನ್ನಲು ಪುರಾವೆಗಳಿಲ್ಲ ಎಂದು ಈಗಾಗಲೇ ವಿಜ್ಞಾನಿಗಳು ಹೇಳಿದ್ದಾರೆ.

 Pfizer, Moderna Testing Their Vaccines Against UK Coronavirus Variant

ಇನ್ನು ಈ ಹೊಸ ರೂಪಾಂತರಿತ ಕೊರೋನಾ ವೈರಸ್ ನ ಪ್ರಸರಣ ಹಾಲಿ ವೈರಸ್ ಗಿಂತ ಶೇ.70ರಷ್ಟು ಹೆಚ್ಚಿದೆ ಎಂಬ ತಜ್ಞರ ಎಚ್ಚರಿಕೆ ವಿಶ್ವಾದ್ಯಂತ ಭಾರಿ ಆತಂಕ ಸೃಷ್ಟಿಸಿದೆ. ಅಲ್ಲದೆ ಹಾಲಿ ಬಳಕೆಗೆ ಸಿದ್ಧವಾಗಿರುವ ಲಸಿಕೆಗಳು ನಿರುಪಯೋಗವಾಗಲಿವೆಯೇ ಎಂಬ ಆತಂಕ ಕೂಡ ಕಾಡತೊಡಗಿದೆ.

ಹೀಗಾಗಿ ಹಾಲಿ ಬಳಕೆಗೆ ಸಿದ್ಧವಾಗಿರುವ ಲಸಿಕೆಗಳು ಈ ಹೊಸ ರೂಪಾಂತರಿತ ವೈರಸ್ ಮೇಲೆ ಹೇಗೆ ಕಾರ್ಯ ನಿರ್ವಹಿಸಲಿದೆ ಎಂಬುದನ್ನು ಪರೀಕ್ಷೆ ಮಾಡಬೇಕಿದ್ದು, ಈ ಸಂಬಂಧ ಇದೀಗ ಫೈಜರ್ ಮತ್ತು ಮಾಡೆರ್ನಾ ಸಂಸ್ಥೆಗಳು ಈ ವೈರಸ್ ಮೇಲೆ ತಮ್ಮ ಲಸಿಕೆಯ ಪ್ರಯೋಗಕ್ಕೆ ಮುಂದಾಗಿವೆ.

ಅಂತೆಯೇ ಮಾಡರ್ನಾ ಬೆನ್ನಲ್ಲೇ ಈಗಾಗಲೇ ಅಭಿವೃದ್ಧಿಪಡಿಸಿರುವ ಫೈಜರ್ ಲಸಿಕೆಯು ಕೂಡ ರೂಪಾಂತರಿತ ಕೊರೋನಾ ವೈರಸ್ ಮೇಲೆ ಪರಿಣಾಮಕಾರಿ ಎಂದು ಹೇಳಲಾಗುತ್ತಿದ್ದು, ಫೈಜರ್ ಕೊವಿಡ್ ಲಸಿಕೆ ವೈರಸ್‌ನ ಹೊಸ ಸ್ವರೂಪವನ್ನೂ ನಿಷ್ಕ್ರಿಯಗೊಳಿಸಬಹುದು ಎನ್ನಲಾಗಿದೆ.

English summary
Pfizer Inc and Moderna Inc are testing their COVID-19 vaccines against the new fast-spreading version of the virus that has emerged in Britain, CNN reported on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X