ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಕೆಯಲ್ಲಿ ನಾಯಿಗಳಿಗೆ ಮಾಂಸಾಹಾರ ಕಡ್ಡಾಯ: ನಿಯಮ ಮೀರಿದರೆ ಶಿಕ್ಷೆ

|
Google Oneindia Kannada News

ಲಂಡನ್, ಅಕ್ಟೋಬರ್ 24: ಮನುಷ್ಯರಾದರೆ ತಮ್ಮ ಆಹಾರವನ್ನು ಆಯ್ಕೆ ಮಾಡಿಕೊಳ್ಳಬಹುದು. ಅವರು ಬಯಸಿದರೆ ಸಸ್ಯಾಹಾರ ಅಥವಾ ಮಾಂಸಾಹಾರ ಸೇವಿಸಬಹುದು. ಅದನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ಮನಷ್ಯರಿಗಿದೆ. ಆ ಸ್ವಾತಂತ್ರ್ಯ ಇರಬೇಕು ಎನ್ನುವುದು ಎಲ್ಲರ ಆಸೆ ಕೂಡ ಹೌದು. ಆದರೆ ಸಾಕುನಾಯಿಗಳ ವಿಚಾರದಲ್ಲಿ ಹೀಗಾಗುವುದಿಲ್ಲ. ಸಾಕು ನಾಯಿಗಳ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಯುಕೆನಲ್ಲಿ ಒಂದು ಮಹತ್ವದ ಆದೇಶ ಘೋಷಿಸಲಾಗಿದೆ. ಇಲ್ಲಿ ಸಾಕು ನಾಯಿಗಳಿಗೆ ಮಾಂಸಾಹಾರವನ್ನೇ ನೀಡಬೇಕು. ಇಲ್ಲವಾದರೆ ಸಾಕುನಾಯಿ ಮಾಲೀಕನಿಗೆ ದಂಡ ಅಥವಾ ಜೈಲು ಶಿಕ್ಷೆ ನೀಡಲಾಗುತ್ತದೆ.

ಸಾಕು ನಾಯಿಗಳ ಅನಾರೋಗ್ಯವನ್ನು ಖಚಿತ ಪಡಿಸಿಕೊಳ್ಳಲು ಹಲವಾರು ಮಾಲೀಕರು ಪಶುವೈದ್ಯರು ಅಥವಾ ಪ್ರಾಣಿಗಳ ಆಹಾರ ತಜ್ಞರಿಗೆ ತೋರಿಸಿ ಸಲಹೆ ಪಡೆಯುತ್ತಾರೆ. ಬಳಿಕ ಅದಕ್ಕೆ ಯಾವ ಆಹಾರ ನೀಡಬೇಕು ಎಂದು ನಿರ್ಧರಿಸುತ್ತಾರೆ. ಆದರೆ ಯುಕೆಯಲ್ಲಿ ಹಾಗಾಗದಿರಬಹುದು. ಯಾಕೆಂದರೆ ಆ ದೇಶದಲ್ಲಿ ಮಾಲೀಕರು ಇನ್ನು ಮುಂದೆ ಸಾಕುನಾಯಿಗಳಿಗೆ ಮಾಂಸ ರಹಿತ ಆಹಾರವನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ಹೊಂದಿರುವುದಿಲ್ಲ. ಯುಕೆನಲ್ಲಿ ಸಾಕುನಾಯಿ ಮಾಲೀಕರಿಗೆ ತಮ್ಮ ನಾಯಿಗಳಿಗೆ ಸಸ್ಯಾಹಾರವನ್ನು ನೀಡದಿರಲು ಎಚ್ಚರಿಕೆ ನೀಡಲಾಗಿದೆ.

ಪ್ರಾಣಿಗಳ ಪೌಷ್ಠಿಕಾಂಶದ ಅಗತ್ಯ

ಪ್ರಾಣಿಗಳ ಪೌಷ್ಠಿಕಾಂಶದ ಅಗತ್ಯ

ಪ್ರಾಣಿಗಳ ಪೌಷ್ಠಿಕಾಂಶದ ಅಗತ್ಯಗಳನ್ನು ಪೂರೈಸುವ ಸೂಕ್ತ ಆಹಾರವನ್ನು ಜನರು ಖಚಿತಪಡಿಸಿಕೊಳ್ಳಬೇಕು ಎಂದು ಯುಕೆ ಪ್ರಾಣಿ ಕಲ್ಯಾಣ ಕಾಯಿದೆ ಹೇಳುತ್ತದೆ. ಪಶುವೈದ್ಯಕೀಯ ಸಂಘ ಸಾಕುಪ್ರಾಣಿಗಳಿಗೆ ಸಸ್ಯಾಹಾರಿ ಆಹಾರವನ್ನು ಮಾತ್ರ ನೀಡಬೇಕೆಂದು ಹೇಳುವುದಿಲ್ಲ. ಯಾಕೆಂದರೆ "ಯಾವುದೇ ಪ್ರಾಣಿ ಪ್ರೋಟೀನ್ ಆಹಾರ ತಿನ್ನಲು ಬಯಸುವುದಿಲ್ಲ. ಹೀಗಾಗಿ ಮಾಲೀಕರು ನೀಡುವ ಆಹಾರ ಆರೋಗ್ಯಕರವಾಗಿದಿಯೇ ಎನ್ನುವುದು ಗಮನದಲ್ಲಿಡಬೇಕು. ಅದು ಹೆಚ್ಚು ಇಷ್ಟಪಟ್ಟು ತಿನ್ನುವ ಆಹಾರವನ್ನೇ ಮಾಲೀಕರು ನೀಡಬೇಕು" ಎಂದಿದೆ.

ಜೈಲು ಶಿಕ್ಷೆ ಮತ್ತು 20,000 ವರೆಗೆ ದಂಡ

ಜೈಲು ಶಿಕ್ಷೆ ಮತ್ತು 20,000 ವರೆಗೆ ದಂಡ

ಯುನೈಟೆಡ್ ಕಿಂಗ್‌ಡಂನ ಸಾಕುಪ್ರಾಣಿ ಮಾಲೀಕರಿಗೆ ತಮ್ಮ ನಾಯಿಗಳಿಗೆ ಸಸ್ಯಾಹಾರಿ ಆಹಾರವನ್ನು ಹಾಕದಂತೆ ಎಚ್ಚರಿಕೆ ನೀಡಿದ್ದು ಒಂದು ವೇಳೆ ನಿಯಮ ಪಾಲಿಸದೇ ಇದ್ದಲ್ಲಿ ಅವರಿಗೆ ಜೈಲು ಶಿಕ್ಷೆ ಮತ್ತು 20,000 ವರೆಗೆ ದಂಡ ವಿಧಿಸಬಹುದು ಎಂದು ದಿ ಸನ್ ವರದಿ ಮಾಡಿದೆ. 2006 ರ ಪ್ರಾಣಿ ಕಲ್ಯಾಣ ಕಾಯ್ದೆಯ ಪ್ರಕಾರ, ಮಾಲೀಕರು ತಮ್ಮ ನಾಯಿಗೆ ಸೂಕ್ತವಾದ ಆಹಾರವನ್ನು ನೀಡಬೇಕು. ಅದನ್ನು ಮಾಡಲು ವಿಫಲವಾದರೆ ಸಾಕು ಮಾಲೀಕರನ್ನು ಜೈಲಿಗೆ ತಳ್ಳಲಾಗುತ್ತದೆ.

ಮಾಲೀಕರಿಗೆ ಅನ್ವಯವಾಗುವ ಎಲ್ಲಾ ಕಾನೂನು

ಮಾಲೀಕರಿಗೆ ಅನ್ವಯವಾಗುವ ಎಲ್ಲಾ ಕಾನೂನು

ಯುಕೆ ನಲ್ಲಿ ನೋಂದಾಯಿತ ಪ್ರಾಣಿ ಕಲ್ಯಾಣ ಚಾರಿಟಿಯಾದ ಬ್ಲೂ ಕ್ರಾಸ್, ದೇಶದ ನಾಯಿ ಮಾಲೀಕರಿಗೆ ಅನ್ವಯವಾಗುವ ಎಲ್ಲಾ ಕಾನೂನುಗಳನ್ನು ವಿವರಿಸುತ್ತದೆ. ಅದು ಎಲ್ಲಾ ಸಾಕು ಮಾಲೀಕರು ನಾಯಿಗಳ ಅಗತ್ಯಗಳನ್ನು ಪೂರೈಸುವ ಕಾನೂನು ಹೊಣೆಗಾರಿಕೆಯನ್ನು ಹೊಂದಿದ್ದಾರೆ ಎಂಬುದನ್ನು ಹೇಳಿದೆ. ಪ್ರಾಣಿ ಕಲ್ಯಾಣ ಕಾಯಿದೆಯ ಸೆಕ್ಷನ್ ಒಂಬತ್ತನೆಯ ಪ್ರಕಾರ, ಎಲ್ಲಾ ಸಾಕುಪ್ರಾಣಿಗಳಿಗೆ ಸೂಕ್ತ ಆವಾಸಸ್ಥಾನದಲ್ಲಿ ಇರಲು, ಸೂಕ್ತವಾದ ಆಹಾರ ಸೇವಿಸಲು, ಸಾಮಾನ್ಯ ನಡವಳಿಕೆಯ ಮಾದರಿಗಳನ್ನು ಪ್ರದರ್ಶಿಸಲು, ಇತರ ಪ್ರಾಣಿಗಳ ಜೊತೆ ಇರಲು ಅಥವಾ ಪ್ರತ್ಯೇಕವಾಗಿರಲು ಕಾನೂನುಬದ್ಧ ಹಕ್ಕಿದೆ. ಜೊತೆಗೆ ಅದಕ್ಕೆ ನೋವು, ಹಾನಿ, ಅನಾರೋಗ್ಯ, ಸಂಕಟಗಳಿಂದ ರಕ್ಷಿಸುವುದು ಮಾಲೀಕನ ಕರ್ತವ್ಯವಾಗಿದೆ. ಸಸ್ಯಾಹಾರಿ ಆಹಾರವನ್ನು ನಾಯಿಗಳಿಗೆ ಪೌಷ್ಟಿಕ ಆಹಾರದ ಶಿಫಾರಸುಗಳಲ್ಲಿ ಉಲ್ಲೇಖಿಸಲಾಗಿಲ್ಲವಾದರೂ, ಅದು ಸಸ್ಯಾಹಾರದಿಂದ ದೊರೆಯುವ ಪೌಷ್ಠಿಕಾಂಶ ಹಾಗೂ ಮಾಂಸಾಹಾರದಿಂದ ದೊರೆಯುವ ಪೌಷ್ಟಿಕಾಂಶದ ಅಗತ್ಯಗಳ ಬಗ್ಗೆ ಹೇಳಿದೆ.

ಆರೋಗ್ಯ ವೃದ್ಧಿಗೆ ಪೂರಕವಾಗುವುದಿಲ್ಲ

ಆರೋಗ್ಯ ವೃದ್ಧಿಗೆ ಪೂರಕವಾಗುವುದಿಲ್ಲ

ಬ್ರಿಟಿಷ್ ವೆಟರ್ನರಿ ಅಸೋಸಿಯೇಷನ್ ​​(BVA) ಅಧ್ಯಕ್ಷರಾದ ಡೇನಿಯೆಲ್ಲಾ ಡಾಸ್ ಸ್ಯಾಂಟೋಸ್ UK ನಲ್ಲಿ, ಮಾಲೀಕರು ಪ್ರಾಣಿ ಕಲ್ಯಾಣ ಕಾಯ್ದೆಯಡಿಯಲ್ಲಿ ಸಾಕುಪ್ರಾಣಿಗಳಿಗೆ ಸೂಕ್ತವಾದ ಆಹಾರವನ್ನು ನೀಡಬೇಕಾಗುತ್ತದೆ ಎಂದು ಹೇಳಿದ್ದಾರೆ. "ಮಾಲೀಕರು ವೈಯಕ್ತಿಕ ನಂಬಿಕೆಯಿಂದಾಗಿ ಪ್ರಾಣಿಗಳಿಗೆ ಪ್ರೋಟೀನ್ ಅನ್ನು ನೀಡಲು ಬಯಸದಿದ್ದರೆ ಅದು ಒಳ್ಳೆಯದು, ಆದರೆ ಸಾಕುಪ್ರಾಣಿಗಳಿಗೆ ಪ್ರೋಟೀನ್ ಆಹಾರವೆಂದು ಸಸ್ಯಾಹಾರವನ್ನೇ ನೀಡುವಂತಿಲ್ಲ" ಎಂದು ಅವರು ಬ್ರಿಟಿಷ್ ದಿನಪತ್ರಿಕೆಯಿಂದ ಉಲ್ಲೇಖಿಸಿದ್ದಾರೆ. ನಾಯಿಗೆ ಸಸ್ಯಾಹಾರಿ ಆಹಾರವನ್ನು ನೀಡುವುದು ಆರೋಗ್ಯ ವೃದ್ಧಿಗೆ ಪೂರಕವಾಗುವುದಿಲ್ಲ ಎಂದು ಅವರು ಹೇಳಿದ್ದಾರೆ. ನಾಯಿಯ ಆಹಾರದಲ್ಲಿ ಪ್ರೋಟೀನ್ ಕೊರತೆಯು ಅಮೈನೋ ಆಮ್ಲದ ಅಸಮತೋಲನ ಮತ್ತು ವಿಟಮಿನ್ ಅಥವಾ ಖನಿಜಗಳ ಕೊರತೆಯಿಂದ ಉಂಟಾಗುತ್ತದೆ. ಹೀಗಾಗಿ ಮಾಂಸಾಹಾರ ನಾಯಿಗಳ ಆರೋಗ್ಯವನ್ನು ಕಾಪಾಡುವುದರಲ್ಲಿ ಸಹಕಾರಿಯಾಗಿದೆ. ನಾಯಿಗಳು ಅದನ್ನು ಇಷ್ಟಪಟ್ಟು ತಿನ್ನುತ್ತವೆ ಎಂದಿದ್ದಾರೆ.

English summary
UK pet owners have been warned not to enforce a vegetarian diet on their dogs. Else, it could result in penalties or jail time for the pet owners.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X