ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಕ್ಸ್‌ಫರ್ಡ್ ಕೊರೊನಾ ಲಸಿಕೆ ಶೇ.90ರಷ್ಟು ಪರಿಣಾಮಕಾರಿ: ಸೆರಂ

|
Google Oneindia Kannada News

ಲಂಡನ್, ನವೆಂಬರ್ 23: ಆಕ್ಸ್‌ಫರ್ಡ್ ಕೊರೊನಾ ಲಸಿಕೆ ಶೇ.90ರಷ್ಟು ಪರಿಣಾಮಕಾರಿ ಎಂದು ಸೆರಂ ಇನ್‌ಸ್ಟಿಟ್ಯೂಟ್ ಹೇಳಿದೆ.ಜೊತೆಗೆ ಲಸಿಕೆಯಿಂದ ಯಾವುದೇ ಅಡ್ಡಪರಿಣಾಮಗಳೂ ಕಂಡು ಬಂದಿಲ್ಲ ಎಂದು ಕಂಪನಿ ತಿಳಿಸಿದೆ.

ಮೊದಲಿಗೆ ಒಂದು ಡೋಸ್‌ ನೀಡಿ ನಂತರ ಒಂದು ತಿಂಗಳ ಬಳಿಕ ಅರ್ಧ ಡೋಸ್‌ ನೀಡಿದಾಗ ಕೊರೊನಾ ವೈರಸ್‌ ತಡೆಗಟ್ಟುವಲ್ಲಿ ಲಸಿಕೆಯು ಶೇ. 90ರಷ್ಟು ಯಶಸ್ವಿಯಾಗಿದೆ.

ಕೊವಿಡ್ ಲಸಿಕೆ ವಿತರಣೆ: ನ.24ರಂದು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಪ್ರಧಾನಿ ಸಭೆಕೊವಿಡ್ ಲಸಿಕೆ ವಿತರಣೆ: ನ.24ರಂದು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಪ್ರಧಾನಿ ಸಭೆ

ಲಸಿಕೆಯ ಮಾನವರ ಮೇಲಿನ ಪರೀಕ್ಷೆಯ ಮಧ್ಯಂತರ ದತ್ತಾಂಶಗಳನ್ನು ಸಂಸ್ಥೆಯ ಸೋಮವಾರ ಬಿಡುಗಡೆ ಮಾಡಿದೆ. ಬ್ರಿಟನ್‌ ಮತ್ತು ಬ್ರೆಜಿನ್‌ನಲ್ಲಿ ನಡೆದ ಅಂತಿಮ ಪರೀಕ್ಷೆಯಲ್ಲಿ ಇದು ಋಜುವಾತಾಗಿದೆ ಎಂದು ಸಂಸ್ಥೆ ತಿಳಿಸಿದೆ. ಜೊತೆಗೆ ಸುರಕ್ಷತೆಗೆ ಸಂಬಂಧಿಸಿದಂತೆ ಯಾವುದೇ ಗಂಭೀರ ಪರಿಣಾಮಗಳೂ ಕಾಣಿಸಿಕೊಂಡಿಲ್ಲ ಎಂದು ಹೇಳಿದೆ.

Oxford Vaccine Can Be 90 Percent Effective:Serum

ಕೊರೊನಾದ ವಿರುದ್ಧ ಲಸಿಕೆಯು ತುಂಬಾ ಪರಿಣಾಮಕಾರಿಯಾಗಿದ್ದು, ಸಾರ್ವಜನಿಕ ಆರೋಗ್ಯ ತುರ್ತುಪರಿಸ್ಥಿತಿಯ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಆಸ್ಟ್ರಾಝೆನಿಕಾ ಸಿಇಒ ಪಾಸ್ಕಲ್‌ ಸಾರಿಯಟ್‌ ಹೇಳಿದ್ದಾರೆ.

ಒಂದೊಮ್ಮೆ ಲಸಿಕೆಯ ಎರಡು ಡೋಸ್‌ಗಳನ್ನು ಒಂದು ತಿಂಗಳ ಅಂತರದಲ್ಲಿ ನೀಡಿದಾಗ ಶೇ. 62ರಷ್ಟು ಪರಿಣಾಮಕಾರಿಯಾಗಿದೆ. ಹೀಗಾಗಿ ಎರಡೂ ರೀತಿಯ ಡೋಸ್‌ಗಳ ಲೆಕ್ಕ ತೆಗೆದುಕೊಂಡಾಗ ಲಸಿಕೆಯು ಸರಾಸರಿ ಶೇ.70ರಷ್ಟು ಪರಿಣಾಮಕಾರಿಯಾಗಿದೆ. ಒಟ್ಟಾರೆ ಲಸಿಕೆಯು ಶೇ. 60 ರಿಂದ 90ರಷ್ಟು ಪರಿಣಾಮಕಾರಿಯಾಗಿದೆ.

ಈ ಲಸಿಕೆ ತಯಾರಿಗೆ ಜಗತ್ತಿನ ಅತೀ ದೊಡ್ಡ ಲಸಿಕೆ ಉತ್ಪಾದನಾ ಸಂಸ್ಥೆಯಾಗಿರುವ ಸೆರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ ಆಸ್ಟ್ರಾಝೆನಿಕಾ ಜೊತೆ ಒಪ್ಪಂದವನ್ನೂ ಮಾಡಿಕೊಂಡಿದೆ. ಹೀಗಾಗಿ ಈ ಲಸಿಕೆಗೆ ಅಂತಿಮ ಅನುಮತಿ ಸಿಕ್ಕಲ್ಲಿ ಭಾರತದಲ್ಲೇ ಉತ್ಪಾದನೆಯಾಗಲಿದೆ. ಜೊತೆಗೆ ದರವೂ ಕಡಿಮೆ.

Recommended Video

Covid Vaccine ಹಂಚುವಿಕೆ ಬಗ್ಗೆ ಮುಖ್ಯಮಂತ್ರಿಗಳ ಸಭೆ ಕರೆದ Modi | Oneindia Kannada

English summary
Britain's AstraZeneca said on Monday its vaccine for the novel coronavirus could be around 90% effective without any serious side effects, giving the world another important tool to halt the COVID-19 pandemic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X