ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಕ್ಷಣರಹಿತ ಕೊರೊನಾ ಸೋಂಕಿತರ ಪತ್ತೆಗೆ ಆಕ್ಸ್‌ಫರ್ಡ್‌ನಿಂದ ಹೊಸ ಪರೀಕ್ಷೆ

|
Google Oneindia Kannada News

ಲಂಡನ್, ಅಕ್ಟೋಬರ್ 30: ಕೊರೊನಾರಹಿತ ಸೋಂಕಿತರ ಪತ್ತೆಗೆ ಆಕ್ಸ್‌ಫರ್ಡ್ ಹೊಸ ಪರೀಕ್ಷಾ ತಂತ್ರಜ್ಞಾನವನ್ನು ಪರಿಚಯಿಸಿದೆ.

ಔಷಧ ತಯಾರಿಕಾ ಸಂಸ್ಥೆ ಅಸ್ಟ್ರಾಜೆನೆಕಾ ಸಹಯೋಗದೊಂದಿಗೆ ಸಂಭಾವ್ಯ ಲಸಿಕೆಗಾಗಿ ಕೆಲಸ ಮಾಡುತ್ತಿರುವ ಆಕ್ಸ್‌ಫರ್ಡ್ ವಿವಿಯು, ಬ್ರಿಟನ್‌ನ ಆರೋಗ್ಯ ಇಲಾಖೆ , ಸಾರ್ವಜನಿಕ ಆರೋಗ್ಯ ಇಂಗ್ಲೆಂಡ್ ಮತ್ತು ಡರ್ಹಾಮ್ ವಿಶ್ವವಿದ್ಯಾಲಯದ ಸಹಭಾಗಿತ್ವದಲ್ಲಿ ಪ್ರಾಯೋಗಿಕಾ ಪರೀಕ್ಷಾ ಕಾರ್ಯಕ್ರಮವನ್ನು ನಡೆಸಲಿದೆ.

ಮುಂದಿನ ಕೆಲವು ವಾರಗಳಲ್ಲಿ ಬ್ರಿಟನ್‌ನಾದ್ಯಂತ ಹೊಸ ತಂತ್ರಜ್ಞಾನದ ಪ್ರಯೋಗ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಪರೀಕ್ಷೆ ಫಲಿತಾಂಶವೂ ಕೆಲವೇ ನಿಮಿಷಗಳಲ್ಲಿ ಲಭ್ಯವಾಗಲಿದೆ ಎಂದು ಹೇಳಲಾಗಿದೆ.

Oxford To Try New Covid-19 Test For Asymptomatics

ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಕೆಲವು ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಅಧ್ಯಯನದ ಭಾಗವಾಗಿ ಪರೀಕ್ಷಾ ಸಾಧನಗಳನ್ನು ನೀಡಲಾಗುವುದು, ಪರೀಕ್ಷೆ ನಡೆಸುವುದು ಹೇಗೆ ಮತ್ತು ಅಪ್ಲಿಕೇಷನ್ ಬಳಸಿ ಅದನ್ನು ದಾಖಲಿಸುವುದು ಹೇಗೆ ಎಂಬುದನ್ನು ತರಬೇತಿ ನೀಡಲಾಗುತ್ತಿದೆ ಎಂಬ ಮಾಹಿತಿ ನೀಡಿದ್ದಾರೆ.

ಇಂಗ್ಲೆಂಡಿನ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯ ಅಭಿವೃದ್ಧಿ ಪಡಿಸುತ್ತಿರುವ ಕೋವಿಡ್‌ 19 ಲಸಿಕೆಯ ಪ್ರಯೋಗವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.

ಲಸಿಕೆಯನ್ನು ಹಾಕಿಸಿಕೊಂಡ ವ್ಯಕ್ತಿಯ ಆರೋಗ್ಯದಲ್ಲಿ ಅಡ್ಡ ಪರಿಣಾಮ ಕಂಡು ಬಂದ ಹಿನ್ನೆಲೆಯಲ್ಲಿ ಮನುಷ್ಯನ ಮೇಲೆ ನಡೆಯುತ್ತಿರುವ ಪ್ರಯೋಗವನ್ನು ತಡೆ ಹಿಡಿಯಲಾಗಿತ್ತು.

ಈ ಲಸಿಕೆ ಹಾಕಿಸಿಕೊಂಡ ವ್ಯಕ್ತಿಯಲ್ಲಿ ಅಡ್ಡ ಪರಿಣಾಮ ಕಂಡು ಬಂದಿದೆ. ಅಡ್ಡ ಪರಿಣಾಮ ಯಾಕೆ ಆಯ್ತು ಎಂಬುದರ ಬಗ್ಗೆ ನಾವು ಅಧ್ಯಯನ ಮಾಡುತ್ತೇವೆ ಎಂದು ವಕ್ತಾರರು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಆಕ್ಸ್‌ಫರ್ಡ್‌ ಮತ್ತು ಅಸ್ಟ್ರಾಜೆನೆಕಾ ಜಂಟಿಯಾಗಿ ಅಭಿವೃದ್ಧಿ ಪಡಿಸಿದ AZD1222 ಹೆಸರಿನ ಲಸಿಕೆ ಪ್ರಯೋಗ ವಿಶ್ವದ ಹಲವೆಡೆ ನಡೆಯುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯ ಮಾಹಿತಿ ಪ್ರಕಾರ ವಿಶ್ವದಲ್ಲಿ ಒಟ್ಟು 180 ಲಸಿಕೆಗಳು ಅಭಿವೃದ್ಧಿಯಾಗುತ್ತಿದೆ. ಈ ಪೈಕಿ ಎಲ್ಲರ ನಿರೀಕ್ಷೆ ಆಕ್ಸ್‌ಫರ್ಡ್‌ ಲಸಿಕೆಯ ಮೇಲಿತ್ತು.

ಮೊದಲ ಕ್ಲಿನಿಕಲ್‌ ಟ್ರಯಲ್‌ ಯಶಸ್ವಿಯಾಗಿತ್ತು. 1,077 ಮಂದಿ ಆರೋಗ್ಯಕರ ಸ್ವಯಂಸೇವಕರ ಮೇಲೆ ನಡೆಸಿದ ಆರಂಭಿಕ ಹಂತದ ಕ್ಲಿನಿಕಲ್ ಟ್ರಯಲ್‌ ಯಶಸ್ವಿಯಾಗಿದ್ದು, ಈ ವೇಳೆ ಲಸಿಕೆ ರೋಗನಿರೋಧಕ ಪ್ರತಿಕ್ರಿಯೆಯನ್ನು ಉಂಟುಮಾಡಿದೆ ಎಂದು ವೈದ್ಯ ಕ್ಷೇತ್ರಕ್ಕೆ ಸಂಬಂಧಿಸಿದ 'ದಿ ಲ್ಯಾನ್ಸೆಟ್‌ ಮೆಡಿಕಲ್‌ ಜರ್ನಲ್'‌ನಲ್ಲಿ ಸಂಶೋಧನಾ ವರದಿ ಪ್ರಕಟವಾಗಿತ್ತು.

English summary
To identify asymptomatic individuals with the Covid-19 virus, Oxford University will trial a new testing technology, according to an announcement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X