ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಕ್ಸ್‌ಫರ್ಡ್ ಲಸಿಕೆ ಪ್ರಯೋಗ ಮುಂದುವರಿಸಲು ಅನುಮತಿ ನೀಡಿದ ಭಾರತ, ಬ್ರಿಟನ್

|
Google Oneindia Kannada News

ಲಂಡನ್, ಸೆಪ್ಟೆಂಬರ್ 12: ಸ್ವಯಂಸೇವಕರೊಬ್ಬರಲ್ಲಿ ಅನಾರೋಗ್ಯ ಕಾಣಿಸಿಕೊಂಡಿದ್ದ ಕಾರಣದಿಂದ ತಡೆಹಿಡಿಯಲಾಗಿದ್ದ ಆಕ್ಸ್‌ಫರ್ಡ್ ಯುನಿವರ್ಸಿಟಿ ಕೋವಿಡ್ ಲಸಿಕೆಯ ಪ್ರಯೋಗವನ್ನು ಬ್ರಿಟನ್ ಮುಂದುವರಿಸಲು ಹಸಿರು ನಿಶಾನೆ ತೋರಿಸಿದೆ. ಇದರ ಬೆನ್ನಲ್ಲೇ ಭಾರತದಲ್ಲಿಯೂ ಲಸಿಕೆ ಪ್ರಯೋಗ ಮುಂದುವರಿಸಲು ಅನುಮತಿ ದೊರಕಿರುವುದಾಗಿ ಸೆರಮ್ ಇನ್‌ಸ್ಟಿಟ್ಯೂಟ್ ತಿಳಿಸಿದೆ..

ಬ್ರಿಟನ್ ಅಧಿಕಾರಿಗಳಿಂದ ಅನುಮತಿ ದೊರಕಿರುವುದರಿಂದ ಕೋವಿಡ್ ಲಸಿಕೆಯ ಪ್ರಯೋಗವನ್ನು ಪುನಾರಂಭಿಸುವುದಾಗಿ ಔಷಧ ದಿಗ್ಗಜ ಆಸ್ಟ್ರಾಜೆನೆಕಾ ತಿಳಿಸಿದೆ.

ಭಾರತದಲ್ಲಿಯೂ 'ಕೋವಿಶೀಲ್ಡ್' ಲಸಿಕೆ ಪ್ರಯೋಗಕ್ಕೆ ತಡೆಭಾರತದಲ್ಲಿಯೂ 'ಕೋವಿಶೀಲ್ಡ್' ಲಸಿಕೆ ಪ್ರಯೋಗಕ್ಕೆ ತಡೆ

'ಆಸ್ಟ್ರಾಜೆನೆಕಾ ಆಕ್ಸ್‌ಫರ್ಡ್ ಕೊರೊನಾ ವೈರಸ್ ಲಸಿಕೆ, AZD1222 ಪ್ರಯೋಗವವನ್ನು ಬ್ರಿಟನ್‌ನಲ್ಲಿ ಮತ್ತೆ ಮುಂದುವರಿಸಲಾಗುತ್ತಿದೆ. ಬ್ರಿಟನ್‌ನ ವೈದ್ಯಕೀಯ ಆರೋಗ್ಯ ನಿಯಂತ್ರಣ ಪ್ರಾಧಿಕಾರ (ಎಂಎಚ್‌ಆರ್‌ಎ) ಲಸಿಕೆ ಪ್ರಯೋಗ ಸುರಕ್ಷಿತ ಎಂದು ಖಚಿತಪಡಿಸುವುದರಿಂದ ಪ್ರಯೋಗ ಮತ್ತೆ ಶುರುಮಾಡಲಾಗುತ್ತಿದೆ' ಎಂದು ಸಂಸ್ಥೆ ಹೇಳಿಕೆ ತಿಳಿಸಿದೆ.

Oxford To Resume Astrazeneca Coronavirus Vaccine Trials In UK

Recommended Video

IPL ನಲ್ಲಿ ಮತ್ತೊಂದು ಯಡವಟ್ಟು ಮಾಡಿಕೊಳ್ತಾರಾ Shahrukh Khan | Oneindia Kannada

ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿರುವ ಲಸಿಕೆಯ ಕ್ಲಿನಿಕಲ್ ಪ್ರಯೋಗಕ್ಕೆ ಒಳಗಾದ ಸ್ವಯಂಸೇವಕರೊಬ್ಬರಲ್ಲಿ ಬೆನ್ನಹುರಿಯೂತ ಕಾಣಿಸಿಕೊಂಡಿದ್ದರಿಂದ ಪ್ರಯೋಗವನ್ನು ತಡೆಹಿಡಿಯುತ್ತಿರುವುದಾಗಿ ಆಸ್ಟ್ರಾಜೆನೆಕಾ ಬುಧವಾರ ತಿಳಿಸಿತ್ತು. ಇದರ ಬೆನ್ನಲ್ಲೇ ಇತರೆ ನಾಲ್ಕು ದೇಶಗಳಲ್ಲಿ ಕೂಡ ಪ್ರಯೋಗಕ್ಕೆ ತಡೆ ನೀಡಲಾಗಿತ್ತು.

ಭಾರತದಲ್ಲಿ ಪ್ರಯೋಗ ನಡೆಸುತ್ತಿರುವ ಸೆರಮ್ ಸಂಸ್ಥೆಗೆ ಎಚ್ಚರಿಕೆ ನೀಡುವ ಮೂಲಕ ಬಲವಂತವಾಗಿ ಪ್ರಯೋಗಕ್ಕೆ ತಡೆ ನೀಡಲಾಗಿತ್ತು. ಈಗ ಸ್ವತಃ ಡಿಸಿಜಿಐ (ಭಾರತದ ಔಷಧ ನಿಯಂತ್ರಣ ಸಂಸ್ಥೆ) ಭಾರತದಲ್ಲಿ ಲಸಿಕೆ ಪ್ರಯೋಗ ಮರು ಪ್ರಾರಂಭಿಸಲು ಅನುಮತಿ ನೀಡಿದೆ ಎಂದು ಸೆರಮ್ ತಿಳಿಸಿದೆ.

English summary
Oxford University to resume Astrazeneca Coronavirus vaccine clinical trial in UK after a pause.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X