ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಕ್ಸ್‌ಫರ್ಡ್ ಕೊರೊನಾ ಲಸಿಕೆ ತುರ್ತು ಬಳಕೆಗೆ ಬ್ರಿಟನ್ ಅನುಮತಿ

|
Google Oneindia Kannada News

ಆಕ್ಸ್‌ಫರ್ಡ್‌ನ ಆಸ್ಟ್ರಾಜೆನೆಕಾ ಕೊರೊನಾ ಲಸಿಕೆ ತುರ್ತು ಬಳಕೆಗೆ ಬ್ರಿಟನ್ ಸರ್ಕಾರ ಅನುಮತಿ ನೀಡಿದೆ.

ಇದೀಗ ಬ್ರಿಟನ್‌ನಲ್ಲಿ ರೂಪಾಂತರಿತ ಕೊರೊನಾವೈರಸ್ ಪತ್ತೆಯಾಗಿದ್ದು, ವಿವಿಧ ದೇಶಗಳಿಗೆ ಮತ್ತೆ ಕೊರೊನಾ ಸೋಂಕನ್ನು ಪಸರಿಸುತ್ತಿದೆ. ಹೀಗಾಗಿ ಅದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಬ್ರಿಟನ್ ಸರ್ಕಾರವು ಆಸ್ಟ್ರಾಜೆನೆಕಾ ಕೊರೊನಾ ಲಸಿಕೆಗೆ ಅನುಮತಿ ನೀಡಿದೆ.

ಕರ್ನಾಟಕ: ರೂಪಾಂತರಿ ಕೊರೊನಾ ಸೋಂಕಿತರ ಸಂಖ್ಯೆ 7ಕ್ಕೆ ಏರಿಕೆಕರ್ನಾಟಕ: ರೂಪಾಂತರಿ ಕೊರೊನಾ ಸೋಂಕಿತರ ಸಂಖ್ಯೆ 7ಕ್ಕೆ ಏರಿಕೆ

ಮೊದಲ ಡೋಸ್ ಇಂದು ಬಿಡುಗಡೆಯಾಗಿದೆ. ಯುಕೆ ಮೆಡಿಸಿನ್ಸ್ ಆಂಡ್ ಹೆಲ್ತ್ ಕೇರ್ ಪ್ರೊಡಕ್ಟ್ಸ್ ರೆಗ್ಯುಲೇಟರಿ ಏಜೆನ್ಸಿ(ಎಂಎಚ್‌ಆರ್‌ಎ) ಲಸಿಕೆ ತುರ್ತು ಬಳಕೆಗೆ ಅನುಮೋದನೆ ನೀಡಿದೆ.

Oxford Covid Vaccine Approved In UK For Emergency Use

18 ವರ್ಷಕ್ಕಿಂತ ದೊಡ್ಡವರಿಗೆ ಈ ಆಸ್ಟ್ರಾಜೆನೆಕಾ ಕೊರೊನಾ ಲಸಿಕೆಯನ್ನು ನೀಡಬಹುದಾಗಿದೆ ಎಂದು ಹೇಳಲಾಗಿದೆ.

ಒಟ್ಟು ಎರಡು ಡೋಸ್‌ಗಳನ್ನು ನೀಡಲಾಗುತ್ತದೆ. ನಾಲ್ಕರಿಂದ 12 ವಾರಗಳ ಕಾಲ ಅವರ ಮೇಲೆ ನಿಗಾ ಇಡಲಾಗುತ್ತದೆ. ಪ್ರಕರಣಗಳು ಸಂಭೀರವಾಗಿರದಿದ್ದರೆ 14 ದಿನಗಳಿಗಿಂತ ಹೆಚ್ಚು ದಿನಗಳ ಕಾಲ ಆಸ್ಪತ್ರೆಯಲ್ಲಿರು ಅಗತ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಬ್ರಿಟನ್ ಸರ್ಕಾರಕ್ಕೆ ಒಟ್ಟು 100 ಮಿಲಿಯನ್ ಕೊರೊನಾ ಲಸಿಕೆ ಒದಗಿಸುವುದಾಗಿ ಒಪ್ಪಂದ ಮಾಡಿಕೊಂಡಿದೆ.ಆಕ್ಸ್‌ಫರ್ಡ್ ಲಸಿಕೆಯು ಬ್ರಿಟನ್‌ನಲ್ಲಿ ತನ್ನ ಮೂರನೇ ಹಂತದ ಪ್ರಯೋಗ ನಡೆಸಿತ್ತು, ಪ್ರಯೋಗದ ಮಧ್ಯದಲ್ಲಿಯೇ ಲಸಿಕೆ ಶೇ.90ರಷ್ಟು ಪರಿಣಾಮಕಾರಿ ಎಂದು ತಿಳಿದುಬಂದಿತ್ತು. ಈಗಾಗಲೇ ಮಾಡೆರ್ನಾ, ಫೈಜರ್ ಲಸಿಕೆಗಳು ಕೂಡ ಪರಿಣಾಮಕಾರಿ ಎಂದು ಸಾಬೀತುಪಡಿಸಿವೆ.

English summary
AstraZeneca’s COVID-19 vaccine has been approved for emergency supply in the UK, with the first doses being released today so that vaccinations may begin early in the New Year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X