• search
  • Live TV
ಲಂಡನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹೊಸ ವಿಧಾನ: ಮೊಬೈಲ್ ಸ್ಕ್ರೀನ್‌ ಟೆಸ್ಟಿಂಗ್ ಮೂಲಕ ಕೊರೊನಾ ಪರೀಕ್ಷೆ

|
Google Oneindia Kannada News

ಲಂಡನ್, ಜೂನ್ 24: ಮೊಬೈಲ್‌ಗಳ ಮೂಲಕವೇ ಕೊರೊನಾ ಸೋಂಕು ಪತ್ತೆ ಹಚ್ಚುವ ವಿಧಾನವನ್ನು ಸಂಶೋಧಕರು ಕಂಡುಹಿಡಿದಿದ್ದಾರೆ.

ಪ್ರಾಯೋಗಿಕವಾಗಿ ನೋಡಿದಾಗ ಸಾಮಾನ್ಯ ಆರ್‌ಟಿಪಿಸಿಆರ್ ಪರೀಕ್ಷೆಯಲ್ಲಿ ಪಾಸಿಟಿವ್ ಬಂದವರು ಕೂಡ ಫೋನ್ ಸ್ಕ್ರೀನ್ ಟೆಸ್ಟಿಂಗ್‌ನಲ್ಲಿ ಕೂಡ ಪಾಸಿಟಿವ್ ಬಂದಿದೆ ಎಂಬುದು ತಿಳಿದುಬಂದಿದೆ.

ಡೆಲ್ಟಾ ರೂಪಾಂತರಿ 85 ದೇಶಗಳಲ್ಲಿ ಪತ್ತೆ, ಪ್ರಬಲ ವಂಶಾವಳಿಯಾಗುವ ಸಾಧ್ಯತೆ: WHOಡೆಲ್ಟಾ ರೂಪಾಂತರಿ 85 ದೇಶಗಳಲ್ಲಿ ಪತ್ತೆ, ಪ್ರಬಲ ವಂಶಾವಳಿಯಾಗುವ ಸಾಧ್ಯತೆ: WHO

ಸ್ಮಾರ್ಟ್ ಫೋನ್ ಪರದೆಯ ಮೂಲಕವೂ ಇನ್ನುಮುಂದೆ ಕೋವಿಡ್ 19 ಪರೀಕ್ಷೆಯನ್ನು ಮಾಡಬಹುದು ಎಂದು ಸಾಬೀತಾಗಿದೆ. ಯುನೈಟೆಡ್‌ ಕಿಂಗ್‌ಡಮನ್‌ನ ಯೂನಿವರ್ಸಿಟಿ ಕಾಲೇಜ್ ಆಫ್ ಲಂಡನ್ ಸಂಶೋಧಕರು ಈ ಪದ್ಧತಿಯನ್ನು ಆವಿಷ್ಕಾರ ಮಾಡಿದ್ದಾರೆ.

ಈ ಪದ್ಧತಿಯಲ್ಲಿ ನೇರವಾಗಿ ರೋಗಿಗಳಿಂದ ಸ್ವ್ಯಾಬ್ ಸಂಗ್ರಹಿಸದೇ ಫೋನ್ ಸ್ಕ್ರೀನ್ ಟೆಸ್ಟಿಂಗ್ ವಿಧಾನದ ಮೂಲಕ ಕೋವಿಡ್ ಪರೀಕ್ಷೆ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಫೋನ್‌ನ ಪರದೆಯಲ್ಲಿ ಸ್ವ್ಯಾಬ್ ಪರೀಕ್ಷೆ ಮಾಡಬಹುದಾಗಿದೆ, ಫೋನ್ ಸ್ಕ್ರೀನ್ ಟೆಸ್ಟಿಂಗ್ ಒಂದು ನಿಮಿಷಕ್ಕಿಂತ ಕಡಿಮೆ ಸಮಯ ತೆಗೆದುಕೊಳ್ಳುತ್ತದೆ. ಹಾಗೂ ವೈದ್ಯಕೀಯ ಸಿಬ್ಬಂದಿಯ ಅಗತ್ಯವಿರುವುದಿಲ್ಲ ಎಂದು ಸಂಶೋಧನಾ ತಂಡ ಸ್ಪಷ್ಟಪಡಿಸಿದೆ.

ಈ ಬಗ್ಗೆ ಲಂಡನ್‌ ಇ-ಲೈಫ್ ಜರ್ನಲ್‌ನಲ್ಲಿ ವಿವಿರಿಸಲಾಗಿದೆ. 81 ರಿಂದ 100 ಫೋನ್‌ಗಳಲ್ಲಿ ಕೋವಿಡ್ 19 ವೈರಸ್ ಪತ್ತೆಯಾಗಿದ್ದು, ಇದು ಆಂಟಿಜೆನ್ ಟೆಸ್ಟ್‌ನಂತೆ ನಿಖರವಾಗಿದೆ ಎಂದು ಹೇಳಲಾಗಿದೆ.

ಹಾಗೆಯೇ ಕೊರೊನಾ ವಿಚಾರಕ್ಕೆ ಸಂಬಂಧಿಸಿದಂತೆ ಹಲವಾರು ಸಂಶೋಧನೆಗಳು ನಡೆಯುತ್ತಿವೆ, ಈಗ ತಾನೇ ಸ್ವಯಂ ಆಗಿ ಕೋವಿಡ್ ಸೋಂಕು ಪರೀಕ್ಷೆ ಮಾಡಿಕೊಳ್ಳುವ ಕಿಟ್‌ನ್ನು ಪುಣೆ ಮೂಲದ ಕಂಪನಿಯೊಂದು ಅಭಿವೃದ್ಧಿಪಡಿಸಿದೆ.

ಮೈಲ್ಯಾಬ್ ಡಿಸ್ಕವರಿ ಸಲ್ಯೂಷನ್ಸ್ ಲಿಮಿಟೆಡ್ ಎಂಬ ಕಂಪನಿ ಕೋವಿಸೆಲ್ಫ್‌ ಎಂಬ ರಾಪಿಡ್ ಆಂಡಿಜೆನ್ ಟೆಸ್ಟ್‌ ಕಿಟ್ ಅನ್ನು ಸಂಶೋಧಿಸಿದೆ.

English summary
Researchers have developed a non-invasive and low-cost method that can accurately and rapidly detect COVID-19 using samples taken from the screens of smartphones.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X