ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿಎನ್‌ಬಿ ಹಗರಣ: ನೀರವ್ ಮೋದಿ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ

|
Google Oneindia Kannada News

ಲಂಡನ್, ಡಿಸೆಂಬರ್ 1: ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದ ಪ್ರಮುಖ ಆರೋಪಿ, ವಜ್ರದ ವ್ಯಾಪಾರಿ ನೀರವ್ ಮೋದಿ ನ್ಯಾಯಾಂಗ ಬಂಧನದ ಅವಧಿಯನ್ನು ಡಿಸೆಂಬರ್ 29ರವರೆಗೆ ಲಂಡನ್ ವೆಸ್ಟ್ ಮಿನಿಸ್ಟರ್ ನ್ಯಾಯಾಲಯ ವಿಸ್ತರಿಸಿದೆ.

ನೀರವ್ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸುವ ಕುರಿತು ಮುಂದಿನ ವರ್ಷ ಜನವರಿ 7 ಮತ್ತು 8 ರಂದು ಅಂತಿಮ ಹಂತದ ವಿಚಾರಣೆ ನಡೆಯಲಿದೆ.

ನೀರವ್ ಮೋದಿಯ 56 ಕೋಟಿ ಮೌಲ್ಯದ 11 ಆಸ್ತಿ ವಶಕ್ಕೆ ಪಡೆದ ಇಡಿನೀರವ್ ಮೋದಿಯ 56 ಕೋಟಿ ಮೌಲ್ಯದ 11 ಆಸ್ತಿ ವಶಕ್ಕೆ ಪಡೆದ ಇಡಿ

ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ 13,500 ಕೋಟಿ ರೂ ವಂಚನೆ ಮಾಡಿ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ನೀರವ್ ಮೋದಿ ಅವರನ್ನು ಲಂಡನ್ ನಲ್ಲಿ ಬಂಧಿಸಲಾಗಿದೆ.

Nirav Modi’s Remand Extended In U.K. Final Hearings In 2021

ಪ್ರಸ್ತುತ ಜೈಲಿನಲ್ಲಿರುವ 48 ವರ್ಷದ ನೀರವ್ ಮೋದಿಯ ನ್ಯಾಯಾಂಗ ಬಂಧನ ಅವಧಿ ಇಂದಿಗೆ ಅಂತ್ಯವಾದ ಹಿನ್ನೆಲೆಯಲ್ಲಿ ವಿಡಿಯೋ ಕಾನ್ಫೆರೆನ್ಸ್ ಮೂಲಕ ಆರೋಪಿಯ ವಿಚಾರಣೆ ನಡೆಸಿದ ನ್ಯಾಯಾಧೀಶ ಎಮ್ಮಾ ಅರ್ಬುತ್‌ನೋಟ್ ಅವರು, ನ್ಯಾಯಾಂಗ ಬಂಧನ ಅವಧಿಯನ್ನು ಮತ್ತೆ 28 ದಿನಗಳ ಕಾಲ ವಿಸ್ತರಿಸಿದರು.

ದೇಶ ಬಿಟ್ಟು ಹೋಗಿ ತಲೆ ತಪ್ಪಿಸಿಕೊಂಡಿರುವ ನೀರವ್ ಮೋದಿಯ 56 ಕೋಟಿ ಮೌಲ್ಯದ 11 ಆಸ್ತಿಗಳನ್ನು ದುಬೈನಲ್ಲಿ ಜಾರಿ ನಿರ್ದೇಶನಾಲಯ ಜಪ್ತಿ ಮಾಡಿಕೊಂಡಿದೆ.ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ವಂಚಿಸಿ, 200 ಕೋಟಿ ಅಮೆರಿಕನ್ ಡಾಲರ್ ಅಕ್ರಮ ಹಣ ವರ್ಗಾವಣೆ ಮಾಡಿದ ಆರೋಪ ಮೋದಿ ಮೇಲಿದೆ.

ಮೋದಿ ಮತ್ತು ಆತನ ಗ್ರೂಪ್ ಫೈರ್ ಸ್ಟಾರ್ ಡೈಮಂಡ್ ಕಂಪನಿಗೆ ಸೇರಿದ 7.79 ಮಿಲಿಯನ್ ಅಮೆರಿಕನ್ ಡಾಲರ್ (56.8 ಕೋಟಿ ರುಪಾಯಿ) ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇಡಿ ತಿಳಿಸಿದೆ. ಅಕ್ರಮ ಹಣ ವರ್ಗಾವಣೆ ನಿಯಂತ್ರಣ ಕಾಯ್ದೆ ಅಡಿಯಲ್ಲಿ ಜಾರಿ ನಿರ್ದೇಶನಾಲಯವು ಆಸ್ತಿ ವಶಪಡಿಸಿಕೊಂಡಿದೆ.

English summary
Nirav Modi, wanted in connection with the estimated USD 2-billion Punjab National Bank (PNB) scam case, was further remanded in custody on Tuesday by a court in London hearing India's extradition request for the diamond merchant The 49-year-old appeared on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X