ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀರವ್ ಮೋದಿಗೆ ಸಿಗಲಿಲ್ಲ ಜಾಮೀನು, ಮೇ 24ರ ತನಕ ಜೈಲು

|
Google Oneindia Kannada News

ಲಂಡನ್, ಏಪ್ರಿಲ್ 24 : ಪಂಜಾಬ್ ನ್ಯಾಷನಲ್ ಬ್ಯಾಂಕಿನ ಬಹುಕೋಟಿ ಹಗರಣದ ಪ್ರಮುಖ ಆರೋಪಿ, ದೇಶಭ್ರಷ್ಟ ಉದ್ಯಮಿ, ಉದ್ದೇಶಪೂರ್ವಕ ಸುಸ್ತಿದಾರ ನೀರವ್ ಮೋದಿ ಅವರಿಗೆ ಲಂಡನ್ ನ್ಯಾಯಾಲಯವು ಇಂದು ಮತ್ತೆ ಜಾಮೀನು ನಿರಾಕರಿಸಿದೆ. ಮೇ 30ರ ನಂತರ ಪೂರ್ಣಾವಧಿ ವಿಚಾರಣೆ ನಡೆಸಲಾಗುತ್ತದೆ

ಲಂಡನ್‌ನ ವೆಸ್ಟ್‌ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ನೀರವ್ ಮೋದಿ ಅವರು ಜಾಮೀನಿನಾಗಿ ಮೂರನೇ ಬಾರಿ ಅರ್ಜಿ ಹಾಕಿದ್ದರು. ಆದರೆ, ಈ ಬಾರಿಯೂ ಜಾಮೀನು ಅರ್ಜಿ ತಿರಸ್ಕೃತಗೊಂಡಿದೆ.

ನೀರವ್ ಮೋದಿ ಅವರು ಸಾಕ್ಷ್ಯದಾರರೊಬ್ಬರಿಗೆ ಬೆದರಿಕೆ ಒಡ್ಡಿದ್ದಾರೆ ಮತ್ತು ತಮ್ಮ ಬಂಧನವನ್ನು ಮುಂದೂಡಲು ಲಂಚದ ಆಮೀಷ ಒಡ್ಡಿದ್ದಾರೆ ಎಂದು ನ್ಯಾಯಾಲಯದಲ್ಲಿ ನೀರವ್ ವಿರುದ್ಧ ವಾದ ಮಂಡನೆ ಮಾಡಲಾಯಿತು.

ನೀರವ್ ಮೋದಿಯನ್ನು ಈಗ ಮತ್ತೆ ಎಚ್‌ಎಂಪಿ ವ್ಯಾಂಡ್ಸ್‌ವರ್ತ್‌ ಜೈಲಿಗೆ ಕಳುಹಿಸಲಾಯಿತು, ಪ್ರಕರಣದ ಮುಂದಿನ ವಿಚಾರಣೆಯನ್ನು ಮೇ 24ಕ್ಕೆ ಮುಂದೂಡಲಾಗಿದೆ.

ನೀರವ್ ಬಂಧನ, ಎಲೆಕ್ಷನ್ ಟೈಮಲ್ಲಿ ಒಳ್ಳೆ ಗಿಮಿಕ್ : ಕಾಂಗ್ರೆಸ್ ನೀರವ್ ಬಂಧನ, ಎಲೆಕ್ಷನ್ ಟೈಮಲ್ಲಿ ಒಳ್ಳೆ ಗಿಮಿಕ್ : ಕಾಂಗ್ರೆಸ್

Nirav Modi to remain in prison till May 24 after UK court denies bail again

ನೀರವ್ ಮೋದಿ ಅವರು 6,400 ಕೋಟಿ ರು ಮನಿಲಾಂಡ್ರಿಂಗ್ ಅವ್ಯವಹಾರದಲ್ಲಿ ತೊಡಗಿದ್ದರು ಎಂದು ಜಾರಿ ನಿರ್ದೇಶನಾಲಯವು ತನ್ನ ದೋಷಾರೋಪಣ ಪಟ್ಟಿಯಲ್ಲಿ ಹೇಳಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 13 ಸಾವಿರ ಕೋಟಿ ರೂ. ವಂಚಿಸಿದ ಆರೋಪವನ್ನು ಹೊತ್ತುಕೊಂಡಿರುವ ನೀರವ್ ಮೋದಿ, ಮೆಹುಲ್ ಚೊಕ್ಸಿ ಅವರು ಭಾರತದಿಂದ ಪರಾರಿಯಾಗಿದ್ದು, ವಿವಿಧ ತನಿಖಾ ಸಂಸ್ಥೆಗಳು ಇವರಿಬ್ಬರನ್ನು ಭಾರತಕ್ಕೆ ಕರೆ ತಂದು ವಿಚಾರಣೆ ನಡೆಸಲು ಯತ್ನಿಸುತ್ತಿವೆ. ಲಂಡನ್‌ನಲ್ಲಿ ನೀರವ್ ಮೋದಿಯನ್ನು ಬಂಧಿಸಲಾಗಿದ್ದು, ಆತನನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.

English summary
The Westminster Magistrates' Court in London on Friday denied bail to fugitive Nirav Modi for the third time. He was presented before the court via video conferencing. Now, the Indian businessman will remain under police custody in London till May 24.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X